ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

Public TV
1 Min Read

ನ್ನಡತಿ, ದಕ್ಷಿಣದ ಖ್ಯಾತ ಸ್ಟಾರ್ ನಟಿ ಪೂಜಾ ಹೆಗಡೆ ಸಾಲು ಸಾಲು ಸಿನಿಮಾಗಳ ಸೋಲಿನಿಂದಾಗಿ ಕಂಗೆಟ್ಟಿದ್ದಾರೆ. ಬಹುತೇಕ ಸಿನಿಮಾಗಳಲ್ಲಿ ಅವರು ಸ್ಟಾರ್ ನಟರ ಜತೆಯೇ ತೆರೆ ಹಂಚಿಕೊಂಡಿದ್ದರೂ, ಚಿತ್ರಗಳ ಸೋಲಿನಿಂದಾಗಿಯೇ ಪೂಜಾ ನೊಂದುಕೊಂಡಿದ್ದಾರೆ. ಆದರೂ, ತಮಗೆ ಸಿಗುತ್ತಿರುವ ಅವಕಾಶಗಳಿಗೇನೂ ಕಡಿಮೆ ಇಲ್ಲ ಎಂದೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

ಪ್ರಭಾಸ್ ಜೊತೆ ನಟಿಸಿದ್ದ ‘ರಾಧೆ ಶ್ಯಾಮ್’ ಸಿನಿಮಾ ಅಂದುಕೊಂಡಷ್ಟು ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಮಾಡಲಿಲ್ಲ. ಚಿತ್ರಕ್ಕೆ ಒಂದೊಳ್ಳೆ ವಿಮರ್ಶೆ ಕೂಡ ಬರಲಿಲ್ಲ. ಪ್ರಭಾಸ್ ಮತ್ತು ಪೂಜಾ ಹಿಟ್ ಜೋಡಿ ಆಗುವ ಕನಸನ್ನು ನುಚ್ಚು ನೂರು ಮಾಡಿತು ರಾಧೆ ಶ್ಯಾಮ್ ಸಿನಿಮಾ. ನಂತರ ಬಂದ ವಿಜಯ್ ಜತೆಗಿನ ಬಿಸ್ಟ್ ಕೂಡ ಪೂಜಾರನ್ನು ಕೈ ಹಿಡಿಯಲಿಲ್ಲ. ಓಪನಿಂಗ್ ಚೆನ್ನಾಗಿಯೇ ತಗೆದುಕೊಂಡರೂ, ನಂತರ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಸೋಲುಂಡಿತು. ಮೊನ್ನೆಯಷ್ಟೇ ರಿಲೀಸ್ ಆಗಿರುವ ಆಚಾರ್ಯ ಸಿನಿಮಾ ಕೂಡ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

ಇದೇ ವರ್ಷದಲ್ಲೇ ತೆರೆಕಂಡ ಈ ಮೂರು ಸಿನಿಮಾಗಳು ಭಾರೀ ಬಜೆಟ್ ಚಿತ್ರಗಳಾಗಿದ್ದವು. ಇದ್ದವರೆಲ್ಲ ಸೂಪರ್ ಸ್ಟಾರ್ ಗಳು. ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಚಿತ್ರಗಳನ್ನು ರಿಲೀಸ್ ಮಾಡಲಾಗಿತ್ತು. ಆದರೂ, ಪೂಜಾ ಅವರ ಅದೃಷ್ಟವನ್ನು ಈ ಸಿನಿಮಾಗಳು ಬದಲಿಸಲಿಲ್ಲ. ಹೀಗೆಲ್ಲ ಆದರೂ, ಅವರಿಗೆ ಅವಕಾಶಗಳಿಗೇನೂ ಕೊರತೆ ಆಗಿಲ್ಲವಂತೆ. ಬಾಲಿವುಡ್ ನಿಂದಲೂ ಆಫರ್ ಬರುತ್ತಿದ್ದು, ಪಾತ್ರಗಳಿಗೆ ಗಟ್ಟಿತನವಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ ಪೂಜಾ.

Share This Article
Leave a Comment

Leave a Reply

Your email address will not be published. Required fields are marked *