Stampede Case | ಡಿಸಿ ನೇತೃತ್ವದ ತನಿಖೆ ಚುರುಕು – 25ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್, ಜೂ.11ಕ್ಕೆ ವಿಚಾರಣೆ

Public TV
1 Min Read

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಕಾಲ್ತುಳಿತಕ್ಕೆ (Stampede) 11 ಜನ ಸಾವನ್ನಪ್ಪಿದ್ದು ಇಡೀ ರಾಜ್ಯ ಮರುಗುತ್ತಿದೆ. ಸರ್ಕಾರ ಜಿಲ್ಲಾಧಿಕಾರಿಗಳ ನೇತೃತ್ವದ ತನಿಖೆಗೆ ಸೂಚಿಸಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿ ತನಿಖೆ ಶುರು ಮಾಡಿದ್ದಾರೆ.

ಬೆಂಗಳೂರಿನ 4 ಆಸ್ಫತ್ರೆಗಳಿಂದ (Bengaluru Hospitals) ವಿವರಣೆ ಪಡೆದುಕೊಂಡಿದ್ದಾರೆ. ಬೌರಿಂಗ್, ಪೋರ್ಟಿಸ್, ಮಣಿಪಾಲ್ ಮತ್ತು ವೈದೇಹಿ ಆಸ್ಫತ್ರೆಗಳಲ್ಲಿ ಎಷ್ಟು ಗಾಯಾಳುಗಳು ಅಡ್ಮಿಟ್ ಆಗಿದ್ರು? ಎಷ್ಟು ಮಂದಿ ಡಿಸ್ಚಾರ್ಜ್ ಆದರು ಮತ್ತು ಎಷ್ಟು ಡೆತ್ ಆಗಿದೆ? ವಿಗೆ ಕಾರಣ ಏನು ಅಂತಾ ಮಾಹಿತಿ ಪಡೆದುಕೊಂಡಿದ್ದಾರೆ. 4 ಆಸ್ಪತ್ರೆಗಳಿಂದ ಸ್ಟೇಟ್ಮೆಂಟ್ ಪಡೆದಿರೋ ಬಗ್ಗೆ ʻಪಬ್ಲಿಕ್ ಟಿವಿʼಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಕಾಲ್ತುಳಿತ ಪ್ರಕರಣ – ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ

4 ಆಸ್ಫತ್ರೆಗಳಲ್ಲಿ ಮಾಹಿತಿ ಪಡೆಯುವುದಲ್ಲದೇ ಬೆಂಗಳೂರು ನಗರದ ಜಿಲ್ಲಾಧಿಕಾರಿ 25ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್ ನೀಡಿದ್ದಾರೆ. ಇದೇ ಜೂನ್ 11 ರಂದು ವಿಚಾರಣೆಗೆ ಹಾಜಾರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಇದುವರೆಗೂ 65 ಗಾಯಾಳುಗಳು ಚಿಕಿತ್ಸೆ ಪಡೆದು ಡಿಶ್ಚಾರ್ಜ್‌ ಆಗಿದ್ದಾರೆ. ಅದರಲ್ಲಿ ಐದು ಜನ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳಿಗೆ ನೋಟಿಸ್ ಜಾರಿ ಮಾಡಿದ್ದು, ಘಟನೆಗೆ ಕಾರಣ ಏನು? ಯಾವ ರೀತಿ ಸಮಸ್ಯೆ ಆಯ್ತು ಮತ್ತು ಯಾವ ರೀತಿ ಸಮಸ್ಯೆ ಆಗಿದೆ ಅಂತೆ ಮಾಹಿತಿ ಪಡೆಯಲಿದ್ದಾರೆ. ಇದನ್ನೂ ಓದಿ: ತ್ಯಾಗದ ಪ್ರತೀಕ ʻಬಕ್ರೀದ್‌ʼ

ಒಟ್ಟಾರೆ 15 ದಿನಗಳ ಒಳಗೆ ತನಿಖಾ ವರದಿ ಸಲ್ಲಿಕೆ ಮಾಡಬೇಕಾಗಿದೆ. ಮೃತಪಟ್ಟವರ ಕುಟುಂಬಗಳು, ಗಾಯಾಳುಗಳಿಂದ ಮಾಹಿತಿ ಪಡೆದು. ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದ್ದು. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಿಂದ 11 ಜನರ ಸಾವಿಗೆ ಏನು ಕಾರಣ ಅಂತಾ ಪತ್ತೆಯಾಗುತ್ತಾ ಕಾದು ನೋಡಬೇಕಿದೆ. ಇದನ್ನೂ ಓದಿ: ಈಗ ನಾನು ಇದ್ದಿದ್ರೆ ಕೆ.ಎಲ್‌.ರಾಹುಲ್‌ನ ಆರ್‌ಸಿಬಿಗೆ ಖರೀದಿ ಮಾಡ್ತಿದ್ದೆ: ವಿಜಯ್‌ ಮಲ್ಯ

Share This Article