ಹಿಂದೂಗಳು ಕಣಿವೆ ಪ್ರದೇಶಕ್ಕೆ, ಅಲ್ಪಸಂಖ್ಯಾತರನ್ನು ಉಗ್ರಪೀಡಿತ ಕಾಶ್ಮೀರಕ್ಕೆ ಶಿಫ್ಟ್ ಮಾಡಲು ಕ್ರಮ

Public TV
2 Min Read

ಶ್ರೀನಗರ: ಹಿಂದೂ ಶಾಲೆಯ ಶಿಕ್ಷಕಿಯ ಹತ್ಯೆ ಬೆನ್ನಲ್ಲೇ ಮತ್ತೊಬ್ಬ ಬ್ಯಾಂಕ್ ವ್ಯವಸ್ಥಾಪಕನನ್ನೂ ಹತ್ಯೆ ಮಾಡಲಾಗಿದೆ. ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರಿ ಪಂಡಿತರು ಸಾಮೂಹಿಕ ವಲಸೆಗೆ ಬೆದರಿಕೆ ಹಾಕಿದ್ದು, ಇದರಿಂದ ಜಿಲ್ಲಾಡಳಿತ ಅವರನ್ನು ಕಾಶ್ಮೀರಿ ಕಣಿವೆಯೋಳಗೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸಕ್ಕೆ ಮುಂದಾಗಿದೆ.

ಪ್ರಧಾನ ಮಂತ್ರಿ ಉದ್ಯೋಗ ಖಾತ್ರಿ ಯೋಜನೆಯ ಸುಮಾರು 6 ಸಾವಿರ ಹಿಂದೂ ಫಲಾನುಭವಿಗಳನ್ನು ಕಣಿವೆ ಪ್ರದೇಶಕ್ಕೆ ಮತ್ತು ಜಮ್ಮು ಮೂಲದ ಅಲ್ಪಸಂಖ್ಯಾತ ನೌಕರರನ್ನು ಉಗ್ರ ಪೀಡಿತ ಕಾಶ್ಮೀರಕ್ಕೆ ಕಳುಹಿಸಲು ಯೋಜನೆ ನಡೆಯುತ್ತಿದೆ. ಮುಂದಿನ ಸೋಮವಾರ ಸೋಮವಾರ ಅಂದರೆ ಜೂನ್ 6ರ ಒಳಗೆ ಅವರಿಗೆ ಕೆಲಸದ ಸ್ಥಳ ನಿಯೋಜನೆಯಾಗಲಿದೆ. ಇದರಿಂದ ಹಿಂದೂಗಳಿಗೆ ಭದ್ರತೆಯೂ ಸಿಗಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸೋನಿಯಾ ಗಾಂಧಿ ಶೀಘ್ರವೇ ಗುಣಮುಖರಾಗಲಿ – ಮೋದಿ ಶುಭಹಾರೈಕೆ

ಅಲ್ಲದೆ ಹಿಂದೂಗಳ ಮೇಲಿನ ದಾಳಿಯನ್ನು ತಪ್ಪಿಸಲು ಸಹಾಯವಾಣಿಯನ್ನು ಪ್ರಾರಂಭಿಸಿದೆ. ಕಾಶ್ಮೀರದಲ್ಲಿರುವ ಹಿಂದೂಗಳಿಗೆ ಉದ್ದೇಶಪೂರ್ವಕವಾಗಿ ತೊಂದರೆ ಕೊಡುತ್ತಿದ್ದರೆ ದೂ.ಸಂ.0194 – 2506111 ಮತ್ತು 0194 – 2506112ಗೆ ಕರೆ ಮಾಡಿ ಅಥವಾ jk.minoritycell@gmail.com ಗೆ ಇ-ಮೇಲ್ ಮಾಡಿ ದೂರು ದಾಖಲಿಸಬಹುದಾಗಿದೆ. ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಸಂಪರ್ಕ ಸಂಖ್ಯೆ ಲಭ್ಯವಿರಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿಗೆ ಇಡಿ ಸಮನ್ಸ್

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕಾಶ್ಮೀರಿ ಪಂಡಿತರು, ಹಿಂದೂ ಶಿಕ್ಷಕ, ಬ್ಯಾಂಕ್ ವ್ಯವಸ್ಥಾಪಕ ಹಾಗೂ ಮೂವರು ಪೊಲೀಸರು ಸೇರಿದಂತೆ ಕಳೆದ ತಿಂಗಳು 7 ಜನರ ಉದ್ದೇಶಿತ ಹತ್ಯೆಗಳ ಕುರಿತು ಚರ್ಚಿಸಲು ನಿನ್ನೆ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದ್ದರು.

ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆಗಳು ಸಮೀಪಿಸುತ್ತಿರುವ ಕಾರಣ, ಸದ್ಯದಲ್ಲಿ ಭಯೋತ್ಪಾದಕ ದಾಳಿಗಳು ಪುನರಾವರ್ತನೆಯಾಗುವ ಸಾಧ್ಯತೆ ಹೆಚ್ಚಿದೆ. ಕಣಿವೆಯಲ್ಲಿ ಪ್ರಧಾನಮಂತ್ರಿ ಉದ್ಯೋಗ ಖಾತ್ರಿ ಯೋಜನೆಯ ಕಾಶ್ಮೀರಿ ಪಂಡಿತ ಫಲಾನುಭವಿಗಳು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾದ ಜಮ್ಮುವಿನ ಅಲ್ಪಸಂಖ್ಯಾತ ಸಮುದಾಯದ ಉದ್ಯೋಗಿಗಳು ವಿಶೇಷವಾಗಿ ಭಯೋತ್ಪಾದಕ ದಾಳಿಗೆ ಗುರಿಯಾಗುತ್ತಾರೆ. ಇದನ್ನೂ ಓದಿ: ನಕಲಿ ಗಾಂಧಿಗಳ ನಾಯಕತ್ವಕ್ಕೆ ಕಾಂಗ್ರೆಸ್ ಕಾರ್ಯಕರ್ತರೇ ಬೇಸತ್ತಿದ್ದಾರೆ – ಎಚ್ಚರ ಡಿಕೆಶಿ ಎಚ್ಚರ: ಬಿಜೆಪಿ

ಈ ಉದ್ಯೋಗಿಗಳನ್ನು ಜಿಲ್ಲಾ ಮತ್ತು ತಹಶೀಲ್ದಾರ್ ಪ್ರಧಾನ ಕಚೇರಿಗಳಲ್ಲಿ ನಿಯೋಜಿಸಲಾಗುವುದು, ಅಲ್ಲಿ ಭದ್ರತಾ ಉಪಕರಣವು ಸಾಮಾನ್ಯವಾಗಿ ಬಿಗಿಯಾಗಿರುತ್ತದೆ. ಅವರಿಗೆ ಸರ್ಕಾರಿ ವಸತಿ ಸೌಲಭ್ಯ ಸಿಗಲಿದೆ. ಅವರನ್ನು ಕಣಿವೆಯ ಸುರಕ್ಷಿತ ಸ್ಥಳಗಳಲ್ಲಿ ಕಳುಹಿಸುವ ಪ್ರಕ್ರಿಯೆಯು ಜೂನ್ 6ರ ಒಳಗೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಭದ್ರತಾ ಪರಿಶೀಲನೆ: ಕಣಿವೆಯಲ್ಲಿ ಉದ್ದೇಶಿತ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ 15 ದಿನಗಳೊಳಗೆ 2ನೇ ಬಾರಿಗೆ ಜಮ್ಮು ಮತ್ತು ಕಾಶ್ಮೀರ ಭದ್ರತೆಯ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಸಭೆ ಕರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *