ಬರ್ಮುಡಾ ಧರಿಸಿ ರೇಣುಕಾಚಾರ್ಯ ಜಯಂತಿ ಆಚರಿಸಿದ ಸಿಬ್ಬಂದಿ – ಸ್ವಾಮೀಜಿ ಕಾಲಿಗೆ ಬಿದ್ದು ತಹಶೀಲ್ದಾರ್ ಕ್ಷಮೆ

Public TV
1 Min Read

ಹುಬ್ಬಳಿ: ಧಾರವಾಡ (Dharwad) ಜಿಲ್ಲೆಯ ಕಲಘಟಗಿ ತಾಲೂಕು ಆಡಳಿತದಿಂದ ಕಾಟಾಚಾರಕ್ಕೆ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು (Renukacharya Jayanti) ಆಚರಣೆ ಮಾಡಲಾಗಿದೆ ಎಂದು ಆರೋಪಿಸಿ ವೀರಶೈವ ಜಂಗಮ ಸಮಾಜದವರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ತಪ್ಪಿನ ಅರಿವಾಗಿ ತಹಶೀಲ್ದಾರ್ (Tehsildar) ಬಹಿರಂಗವಾಗಿ ಪ್ರತಿಭಟನಾ ನಿರತ ಸ್ವಾಮೀಜಿ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದಾರೆ.

ಕಲಘಟಗಿ ತಾಲೂಕು ಆಡಳಿತದಿಂದ ಯಾವುದೇ ಪೂರ್ವಭಾವಿ ಸಭೆ ಕರೆಯದೇ ಹಾಗೂ ಕಚೇರಿ ಸಿಬ್ಬಂದಿ ಬರ್ಮುಡಾ (Shorts) ಧರಿಸಿ ಕಚೇರಿಯಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದರು. ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದನ್ನೂ ಓದಿ: ಮಾಡಾಳ್‌ ವಿರೂಪಾಕ್ಷಪ್ಪ ಮಿಸ್ಸಿಂಗ್‌.. ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ – ಪೋಸ್ಟರ್‌ ಅಂಟಿಸಿ ಕಾಂಗ್ರೆಸ್‌ ಅಭಿಯಾನ

ಇದರಿಂದ ಆಕ್ರೋಶಗೊಂಡ ವೀರಶೈವ ಸಮಾಜದ ಮುಖಂಡರು, ಜಗದ್ಗುರುಗಳಿಗೆ ಅಪಮಾನ ಮಾಡಲಾಗಿದೆ ಎಂದು ಹನ್ನೆರಡು ಎತ್ತಿನ ಮಠದ ಪೀಠಾಧಿಪತಿ ರೇಣುಕಾಚಾರ್ಯರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದ್ದರು.

ತಹಶೀಲ್ದಾರ್ ಯಲ್ಲಪ್ಪ ಗೋಣೆನ್ನನವರನ್ನು ಪ್ರತಿಭಟನಾನಿರತರು ತರಾಟೆಗೆ ತಗೆದುಕೊಂಡಿದ್ದರು. ಸಮಾಜದ ಆಕ್ರೋಶದಿಂದ ತಪ್ಪಿನ ಅರಿವಾಗಿ ತಹಶೀಲ್ದಾರ್ ಶ್ರೀಗಳ ಕಾಲಿಗೆ ಬಿದ್ದು, ಕ್ಷಮೆಯಾಚನೆ ಮಾಡಿದ್ದಾರೆ. ಮತ್ತೊಮ್ಮೆ ರೇಣುಕಾಚಾರ್ಯ ಜಯಂತಿಯನ್ನು ಅದ್ದೂರಿಯಾಗಿ ಮಾಡುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸೊಳ್ಳೆ ಔಷಧಿ ಸಿಂಪಡಿಸಿದವರಿಗೆ ಬಿಲ್ ಬಾಕಿ ಆರೋಪ – ಬಿಬಿಎಂಪಿ ವಿರುದ್ಧ ಪೊಲೀಸ್ ಠಾಣೆಗೆ ದೂರು

Share This Article
Leave a Comment

Leave a Reply

Your email address will not be published. Required fields are marked *