ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹಗರಣಗಳು ನಡೆದಿಲ್ವಾ: S.T.ಸೋಮಶೇಖರ್

By
1 Min Read

ಬೆಳಗಾವಿ: ಸಿದ್ದರಾಮಯ್ಯ ಸುಮ್ಮನೇ ಉಡಾಫೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಹಗರಣಗಳು ಆಗಿಲ್ಲವಾ ಎಂದು ಸಚಿವ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರ Government of Scams ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸುಮ್ಮನೇ ಉಡಾಫೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಹಗರಣಗಳು ಆಗಲಿಲ್ವಾ? ಸಿದ್ದರಾಮಯ್ಯ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸಿಗೆ, ದಿಂಬು ಹಗರಣ ಏನಾಯ್ತು? ಯಾವುದೇ ಹಗರಣ ಆಗಿದ್ದರೆ, ಸರಿಯಾದ ಮಾಹಿತಿ ಕೊಟ್ಟು ಹೇಳಬೇಕು. ಸಿದ್ದರಾಮಯ್ಯ ಸರ್ಕಾರ ಅವಧಿ ಹಗರಣ ಮುಚ್ಚಿ ಹಾಕಲಿಲ್ವಾ? ದಿಂಬು, ಹಾಸಿಗೆ ಹಗರಣದಲ್ಲಿ ಅವರೇನು ಮಾಡಲಿಲ್ವಾ? ನಾನು ಕಾಂಗ್ರೆಸ್ ಸರ್ಕಾರದಲ್ಲಿ ಆಗ ಎಂಎಲ್‍ಎ ಆಗಿದ್ದೆ. ನಾನಿದ್ದಾಗಲೇ ಹಗರಣ ಆಗಿತ್ತು. ಯಾವ ಸಿಐಡಿಗೆ ಕೊಟ್ಟರು? ಯಾವ ಕೇಸ್ ಮುಚ್ಚಿ ಹಾಕಿದರೂ ನಮಗೂ ಮಾಹಿತಿ ಇದೆ ಎಂದರು. ಇದನ್ನೂ ಓದಿ: ತಾಜ್ ಮಹಲ್ ನಿಜಕ್ಕೂ ವಿಶ್ವದ ಅದ್ಭುತ: ಭಾರತದ ಭೇಟಿಯನ್ನು ನೆನಪಿಸಿಕೊಂಡ ಮಸ್ಕ್

SIDDARAMAIAH

ಬೊಮ್ಮಾಯಿಯವರು ಯಾವುದೇ ಕಾರಣಕ್ಕೂ ಮುಚ್ಚು ಹಾಕುವಂತಹ ಕೆಲಸ ಮಾಡಲಿಲ್ಲ. ಯಾವುದೇ ಆರೋಪ ಇದ್ದರೂ ತನಿಖೆ ಮಾಡುತ್ತಿದ್ದು ನಮ್ಮ ಪೊಲೀಸರು ಸಮರ್ಥರಿದ್ದಾರೆ. ತನಿಖೆ ಮಾಡಿ ಶಿಕ್ಷೆ ಕೊಡಿಸುವುದಕ್ಕೆ ಚಾಲನೆ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕದ ಜನಪ್ರಿಯ ನಟಿ ಮರ್ಲಿನ್ ಮನ್ರೋ ವರ್ಣಚಿತ್ರ ದಾಖಲೆ ಬೆಲೆಗೆ ಮಾರಾಟ

Share This Article
Leave a Comment

Leave a Reply

Your email address will not be published. Required fields are marked *