ಐಟಿ ದಾಳಿಯಲ್ಲಿ SST ಟ್ಯಾಕ್ಸ್, ಸಂತೋಷ್ ಮನೆಯಲ್ಲಿ ಸಿಕ್ಕಿದ್ದು YST ಕಲೆಕ್ಷನ್: ಹೆಚ್‍ಡಿಕೆ ಹೊಸ ಬಾಂಬ್

By
2 Min Read

ಮೈಸೂರು: ಅಂಬಿಕಾಪತಿ (Ambikapathy) ಮನೆಯಲ್ಲಿ ಸಿಕ್ಕ ಹಣ ಎಸ್‍ಎಸ್‍ಟಿ ಕಲೆಕ್ಷನ್, ಸಂತೋಷ್ (Santhosh) ಮನೆಯಲ್ಲಿ ಸಿಕ್ಕಿದ್ದು ವೈಎಸ್‍ಟಿ ಕಲೆಕ್ಷನ್ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ (Chamundi Hills) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವೈಎಸ್‍ಟಿ ಆಯ್ತು, ಈಗ ಎಸ್‍ಎಸ್‍ಟಿ (SST Tax) ಟ್ಯಾಕ್ಸ್ ಕಲೆಕ್ಷನ್ ಆರಂಭವಾಗಿದೆ. ಐಟಿ ದಾಳಿಯಲ್ಲಿ ಸಿಕ್ಕ ಹಣ ಎಸ್‍ಎಸ್‍ಟಿ ಟ್ಯಾಕ್ಸ್ ಗೆ (SST Tax) ಸೇರಿದ್ದು ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ನಂಜುಂಡೇಶ್ವರನ ಸನ್ನಿಧಾನದಲ್ಲಿ ಹೆಚ್‍ಡಿಕೆ ಕುಟುಂಬದಿಂದ ಬೆಲ್ಲದ ತುಲಾಭಾರ

ಸಿಎಂ ಈ ಬಗ್ಗೆ ತನಿಖೆ ಮಾಡಿ ಪ್ರಾಮಾಣಿಕತೆ ತೋರಬೇಕು. ಭ್ರಷ್ಟಾಚಾರ ಮಾಡಿ ದೇವರ ಮುಂದೆ ಬಂದು ಪ್ರಾರ್ಥಿಸಿದರೆ ದೇವಿ ಕ್ಷಮಿಸುವುದಿಲ್ಲ. ಲೂಟಿ ಮಾಡುವವರು ತಿಹಾರ್ ಜೈಲಿಗೆ (Tihar Jail) ಹೋಗುವುದು ತಪ್ಪುವುದಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಮಾಡಲು ಇಲಾಖೆಗಳು ಪೈಪೋಟಿಗೆ ಬಿದ್ದಿವೆ. ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಹಣ ಪತ್ತೆಗಿಂತ ಸಾಕ್ಷಿಬೇಕೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಐಟಿ, ಇಡಿ, ಸಿಬಿಐ ಎಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿವೆ; ಅವರು ಆಡಿದ್ದೇ ಆಟ: ಸಂತೋಷ್ ಲಾಡ್

ಸಿಎಂ ಪಟಾಲಂಗಳು ಎಸ್‍ಎಸ್‍ಟಿ, ಎಸ್‍ಎಸ್‍ಟಿ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ. ವರ್ಗಾವಣೆ ದಂಧೆ ಮಾಡಿ ಹಣದ ಲೂಟಿ ಮಾಡುತ್ತಿದ್ದಾರೆ. ಸರ್ಕಾರ 40% ಅಂತಾ ಜಾಗಟೆ ಬಾರಿಸುತ್ತಾ ಇತ್ತು. ಈಗ ಅವರು ಏನ್ ಮಾಡುತ್ತಿದ್ದಾರೆ?. ಕಾಂಗ್ರೆಸ್ ಹೈಕಮಾಂಡ್ ದುಡ್ಡು ಕೇಳದೇ ಇಷ್ಟು ಹಣ ಸಿಕ್ಕಿದೆ. ಅವರು ಕೇಳಿದ್ರೆ ಇನ್ನೆಷ್ಟು ಹಣ ಸಿಕ್ತಾ ಇತ್ತು ಎಂದರು.

ಭ್ರಷ್ಟಾಚಾರ ಮಾಡಲು ಇಲಾಖೆಗಳಲ್ಲಿ ಪೈಪೋಟಿ ಇದೆ. ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ಇದೆ. ತಿಹಾರ್ ಜೈಲಿಗೆ ಹೋಗುವ ವಿಚಾರದ ಬಗ್ಗೆ ನಾನು ಅಸೂಯೆಯಿಂದ ಹೇಳಿಲ್ಲ. ಜನರ ಕಣ್ಣಲ್ಲಿ ರಕ್ತ ಬರಿಸಿ ದೇವರ ಬಳಿಗೆ ಬಂದರೆ ತಾಯಿ ಕ್ಷಮಿಸುವುದಿಲ್ಲ. ಈಗ ಸಿಕ್ಕಿರೋದು ಯಕಕ್ಷಿತ್ ಹಣ ಅಷ್ಟೇ. ಇನ್ನೂ ಸಾಕಷ್ಟು ಲೂಟಿ ಆಗಿದೆ ಎಂದು ತಿಳಿಸಿದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್