1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್ – ಯೋಗಿ ಅಂದ್ರೆ ಇಷ್ಟ, ಮುಂದೆ ರಾಜಕಾರಣಿಯಾಗ್ತೀನಿ

Public TV
1 Min Read

– SSLC ಪರೀಕ್ಷೆಯಲ್ಲಿ 624 ಅಂಕ ಪಡೆದ ಮಿಥುನ್

ಬೆಂಗಳೂರು: ಕೇವಲ 1 ಅಂಕದಿಂದ ಫಸ್ಟ್ ರ‍್ಯಾಂಕ್ ಕಳೆದುಕೊಂಡಿದ್ದ ಮಿಥುನ್ ಯುಪಿ ಸಿಎಂ ಆದಿತ್ಯನಾಥ್ ಅವರಂತೆ ರಾಜಕಾರಣಿಯಾಗಬೇಕು ಎಂಬ ವಿಶೇಷ ಆಸೆಯನ್ನು ಬಿಚ್ಚಿಟ್ಟಿದ್ದಾರೆ.

ಬನಶಂಕರಿಯ (Banashankari) ಹೋಲಿ ಚೈಲ್ಡ್ ಇಂಗ್ಲಿಷ್ ಕಾನ್ವೆಂಟ್ ಶಾಲೆಯ ಮಿಥುನ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC exam) 624 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಯ ಆಸಕ್ತಿ ನೋಡಿ ಶಾಲೆಯ ಶಿಕ್ಷಕರೇ ಆಶ್ಚರ್ಯರಾಗಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ಡಿಸಿ ಕಚೇರಿ ಸ್ಫೋಟಿಸುತ್ತೇವೆ – ಬೆದರಿಕೆ ಸಂದೇಶ, ಎಫ್‌ಐಆರ್ ದಾಖಲು

ನನಗೆ ರಾಜಕೀಯ ಕ್ಷೇತ್ರ ಅಂದರೆ ಇಷ್ಟ. ನಾನೊಬ್ಬ ರಾಜಕಾರಣಿ ಆಗಬೇಕು. ಉತ್ತರ ಪ್ರದೇಶದ (UttaraPradesh) ಸಿಎಂ ಯೋಗಿ ಆದಿತ್ಯನಾಥ್ (Yogi Adithyanath) ಅವರು ಅಂದ್ರೆ ತುಂಬಾ ಇಷ್ಟ. ಅವರ ಧೈರ್ಯ, ನಿರ್ಣಯಗಳು ತುಂಬಾ ಇಷ್ಟ ಎಂದು ರಾಜಕೀಯ ಆಸಕ್ತಿಯ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಹಂಚಿಕೊಂಡಿದ್ದಾರೆ.

Share This Article