ಕುರ್ಚಿಗಾಗಿ ಹಗಲುಗನಸು ಕಾಣ್ತಿದ್ದಾರೆ ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ: ಶ್ರೀರಾಮುಲು

Public TV
2 Min Read

– ಕಾಂಗ್ರೆಸ್ ಅವರೇ ನಿಜವಾದ ತಾಲಿಬಾನ್‍ಗಳು

ಬಳ್ಳಾರಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕುರ್ಚಿಗಾಗಿ ಹಗಲುಗನಸು ಕಾಣುತ್ತಿದ್ದಾರೆ. ಅದಕ್ಕೆ ಏನೇನೋ ಮಾತನಾಡುತ್ತಿದ್ದಾರೆ ಎಂದು ಸಾರಿಗೆ, ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಟಾಂಗ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಯಿ ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಅವರು ಲಘುವಾಗಿ ಮಾತನಾಡ್ತಿದ್ದಾರೆ. ಸಿದ್ದರಾಮಯ್ಯ ಎಂದರೆ ಸಮಾಜವಾದಿ ಎನ್ನುವ ಮಾತಿತ್ತು. ಆದರೆ ಕುರ್ಚಿಗಾಗಿ ಸಿದ್ದರಾಮಯ್ಯ ಎನ್ನುವ ಹಾಗೆ ಆಗಿದೆ. ಕುರ್ಚಿಗಾಗಿ ಹಗಲುಗಸು ಕಾಣ್ತಿದ್ದಾರೆ ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಅಧಿಕಾರದ ಹಗಲುಗನಸಿನಿಂದ ಕಲಾಪ ವ್ಯರ್ಥ ಮಾಡಿದ್ರು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕೆ ಚಾಲನೆ – ಕಬ್ಬು ನಾಟಿ ಮಾಡಿದ ಕೌರವ

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಒಬ್ಬರ ಮುಖ ಮತ್ತೊಬ್ಬರು ನೋಡ್ತಿಲ್ಲ. ಖರ್ಗೆ ಪರಮೇಶ್ವರ್ ಯಾರು ಕೂಡ ಸಿದ್ದರಾಮಯ್ಯ ಕಣ್ಣಿಗೆ ಕಾಣ್ತಿಲ್ಲ. ಸ್ವಯಂ ಘೋಷಿತ ಸಿಎಂ ರೀತಿ ಸಿದ್ದರಾಮಯ್ಯ ಮಾತನಾಡ್ತಿದ್ದಾರೆ. ಮೂರು ಪಾಲಿಕೆಯಲ್ಲಿ ಕಾಂಗ್ರೆಸ್ ತಿರಸ್ಕಾರವಾಗಿದೆ. ಚಾಮುಂಡೇಶ್ವರಿ ಜನ ಸೋಲಿಸಿದ್ದಾರೆ.
ಬಾದಾಮಿ ಜನರು ಜೀವದಾನ ನೀಡಿ ಪುನರ್ಜನ್ಮ ನೀಡಿದ್ದಾರೆ. ಆದರೆ ಬಾದಾಮಿ ಜನರನ್ನು ಇದೀಗ ಮೂಲೆಗುಂಪು ಮಾಡಿದ್ದಾರೆ. ಬಾದಾಮಿಯ ಜನರು ಇವರನ್ನು ಯಾಕಾದರೂ ಗೆಲ್ಲಿಸಿದ್ದೇವೆ ಎನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲಿಬಾನ್ ಕೃತ್ಯ ಆರ್ ಎಸ್ ಎಸ್ ಗೆ ಹೋಲಿಸ್ತಾರೆ. ಆದ್ರೇ ಸಿದ್ದರಾಮಯ್ಯ ಅವರ ಮನಸ್ಥಿತಿಯೇ ತಾಲಿಬಾನಂತಿದೆ. ಕಾಂಗ್ರೆಸ್ ಅವರೇ ನಿಜವಾದ ತಾಲಿಬಾನ್ ನವರು. ತಾಲಿಬಾನಿಗರಿಗೂ ಕಾಂಗ್ರೆಸ್ ನವರಿಗೂ ಹೊಂದಾಣಿಕೆ ಆಗಲಿದೆ. ಕಾಂಗ್ರೆಸ್ ತಾಲಿಬಾನ್ ಸಂಸ್ಕೃತಿ ಹೊಂದಿದೆ. ಕಾಂಗ್ರೆಸ್ ದಿವಾಳಿತನದ ಪರಮಾವಧಿ ತಲುಪಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ:  ಕೆಜಿಎಫ್ ಎಸ್‍ಪಿ ಅಂಗರಕ್ಷಕನ ಮೇಲೆ ಹಲ್ಲೆ – ಐವರ ಬಂಧನ

ಕೇಂದ್ರ ಸರ್ಕಾರದ ಅಕ್ಕಿ ನೀಡೋ ಯೋಜನೆ ತಮ್ಮದು ಎನ್ನುತ್ತಾರೆ. ಅಕ್ಕಿಯನ್ನು ಸಿದ್ದರಾಮಯ್ಯ ಅವರ ಮನೆಯಿಂದ ತಂದುಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು. ಬೊಮ್ಮಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎಂದ ಶ್ರೀರಾಮುಲು, ಉಪಚುನಾವಣೆ ಬಗ್ಗೆ ಕೋರ್ ಕಮೀಟಿ ಬಗ್ಗೆ ಚರ್ಚೆ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಘೋಷಣೆ ಮಾಡ್ತೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *