ಸಿಎಂ ಇಬ್ರಾಹಿಂ ಬಿಜೆಪಿಗೆ ಬರುವುದಾದರೇ ನಾನು ಸ್ವಾಗತಿಸುತ್ತೇನೆ: ಶ್ರೀರಾಮುಲು

Public TV
1 Min Read

ಬಳ್ಳಾರಿ: ಸಿಎಂ ಇಬ್ರಾಹಿಂ ಬಿಜೆಪಿಗೆ ಬರುವುದಾದರೇ ನಾನು ಸ್ವಾಗತ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಿಎಂ ಇಬ್ರಾಹಿಂ ಅವರನ್ನು ಕಳೆದುಕೊಂಡು ದೊಡ್ಡ ನಷ್ಟ ಹೊಂದಲಿದೆ. ಇಬ್ರಾಹಿಂ ಸೇರಿದಂತೆ ಮುಸ್ಲಿಂ ಜನರನ್ನು ಕಾಂಗ್ರೆಸ್ ಓಟದ ಬ್ಯಾಂಕ್ ಆಗಿ ಬಳಸಿಕೊಂಡಿದೆ. ಸಿಎಂ ಇಬ್ರಾಹಿಂ ಬಿಜೆಪಿಗೆ ಬರುವುದಾದರೇ ನಾನು ಸ್ವಾಗತ ಮಾಡುತ್ತೇನೆ. ಪಕ್ಷಕ್ಕೆ ಸೇರಿಸಿಕೊಳ್ಳುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ. ಇದನ್ನೂ ಓದಿ: 2.18 ಕೋಟಿ ರೂ. ವಂಚಿಸಿ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿದ!

ಸಿಎಂ ಇಬ್ರಾಹಿಂ ಸರಸ್ವತಿ ಪುತ್ರ, ಕಾಂಗ್ರೆಸ್ ಪಕ್ಷದ ಸಿನಿಯರ್ ಮೋಸ್ಟ್ ಲೀಡರ್. ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಸ್ವಯಂ ಘೋಷಿತ ಹಿಂದುಳಿದ ವರ್ಗದ ನಾಯಕ ಇದಕ್ಕೆ ಉತ್ತರ ಕೊಡಬೇಕು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಕುಟುಕಿದರು. ಇದೇ ವೇಳೆ ದಲಿತ, ಹಿಂದುಳಿದ ವರ್ಗದವರು ಮುಸ್ಲಿಂ ಹೀಗೆ ಹಲವಾರು ವರ್ಗದ ನಾಯಕರನ್ನು ಬಳಸಿಕೊಂಡು ಕಾಂಗ್ರೆಸ್‍ನಲ್ಲಿ ಕೈ ಬಿಟ್ಟಿದ್ದಾರೆ. ದಲಿತ, ಹಿಂದುಳಿದ ವರ್ಗದವರು ಮುಸ್ಲಿಮರು ಇನ್ನೂ ಮೇಲೆ ಆದರೂ ಎಚ್ಚತ್ತುಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ಗುಡಿಸಲಿನ ಮೇಲೆ ಬಿದ್ದ ಟ್ರಕ್ – ಮೂವರು ಅಪ್ರಾಪ್ತ ಸಹೋದರಿಯರು ಬಲಿ

ಬಿಜೆಪಿ ನಾಯಕರು ಕಾಂಗ್ರೆಸ್ ಬರುವ ವಿಚಾರ: ಡಿಕೆ ಶಿವಕುಮಾರ್ ಅವರು ಬಾಯಿ ಚಪಲಕ್ಕೆ ಹೀಗೆ ಮಾತನಾಡುತ್ತಾರೆ. ಕಾಂಗ್ರೆಸ್‍ನಲ್ಲಿ ಬಾಯಿ ಚಪಲ ಇರುವವರು ಬಹಳ ಜನರಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್‍ಗೆ ಯಾರೂ ಹೋಗುವುದಿಲ್ಲ. ಆಪರೇಷನ್ ಕಮಲ ಸುಳ್ಳು. ಹಾಗೆ ನೋಡಿದರೆ ಸ್ವಾತಂತ್ರ್ಯ ಬಂದ ಬಳಿಕ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಧಾನಿ ಆಗಬೇಕಿತ್ತು. ಪಟೇಲ್ ಅವರ ಬದಲಿಗೆ ಬೇರೆಯವರನ್ನು ಪ್ರಧಾನಿ ಮಾಡುವ ಮೂಲಕ ಕಾಂಗ್ರೆಸ್ ಆಪರೇಷನ್ ಮಾಡಿದೆ. ಆಪರೇಷನ್ ಎನ್ನುವ ಪದ ಕಾಂಗ್ರೆಸ್‍ಗೆ ಅನ್ವಯಸುತ್ತದೆ ಎಂದು ಟಾಂಗ್ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *