ಇದೊಂದು ಬಾರಿ ನನ್ನನ್ನು ಗೆಲ್ಲಿಸಿ – ಚುನಾವಣೆಗೂ ಮುನ್ನವೇ ಶ್ರೀರಾಮುಲುಗೆ ಢವಢವ

Public TV
1 Min Read

ಚಿತ್ರದುರ್ಗ: ಚುನಾವಣೆಗೂ ಮುನ್ನವೇ ಸಚಿವ ಶ್ರೀರಾಮುಲುಗೆ ಢವಢವ ಶುರುವಾಗಿದ್ದು, ಇದೊಂದು ಬಾರಿ ನನ್ನನ್ನು ಗೆಲ್ಲಿಸಿ ಎಂದು ಮೊಳಕಾಲ್ಮೂರಿನ ಮತದಾರರಲ್ಲಿ ವಿನಮ್ರ ಮನವಿ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದಲ್ಲಿ ಉನ್ನತಿಕರಿಸಿದ ಪ್ರೌಢಶಾಲೆಯನ್ನು ಉದ್ಘಾಟಿಸಿದ ಬಳಿಕ ವೇದಿಕೆ ಮೇಲೆ ಮಾತನಾಡಿದ ಅವರು, ಕೋನಾಪುರ ಗ್ರಾಮಸ್ಥರ ಹಲವು ವರ್ಷಗಳ ಕನಸು ಈಡೇರಿಸಿದ ಸಂತೃಪ್ತಿ ನನಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಉನ್ನತೀಕರಿಸಿದ ಶಾಲೆಗೆ ಪೈಪೋಟಿ ಏರ್ಪಟ್ಟರೂ ಸಹ ಸರ್ಕಾರದ ಹಂತದಲ್ಲಿ ಶ್ರಮಿಸಿ ಈ ಗ್ರಾಮಕ್ಕೆ ಶಾಲೆ ತರಲು ಬಹಳಷ್ಟು ಶ್ರಮ ಪಟ್ಟಿದ್ದೇನೆ ಎಂದರು.  ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಯುವತಿಯ ಕೊಲೆ

ಮುಂಬರುವ ವಿಧಾನಸಭಾ ಚುನಾವಣೆಗೆ ಮೊಳಕಾಲ್ಮೂರು ಕ್ಷೇತ್ರದಿಂದ ನಾನು ಸ್ಪರ್ಧಿಸಲಿದ್ದೇನೆ. ಆದ್ದರಿಂದ ತಾವುಗಳು ಇನ್ನೊಂದು ಸಲ ಅವಕಾಶ ಮಾಡಿಕೊಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು. ಹಾಗೆಯೇ ಹಿಂದಿನ ಶಾಸಕರಿಗಿಂತ ನಾನು ಹೆಚ್ಚು ಕೆಲಸ ಮಾಡಿದ್ದು, ಇನ್ನೊಂದು ಸಲ ಗೆಲ್ಲಿಸಿದರೆ, ಕ್ಷೇತ್ರದಲ್ಲಿ ಬಾಕಿಯಿರುವ ಉಳಿದೆಲ್ಲಾ ಕೆಲಸ ಮಾಡಿಕೊಡುತ್ತೇನೆ. ಬಳಿಕ ಈ ಜಿಲ್ಲೆಯಿಂದ ಹೊರಗೆ ಹೋಗುತ್ತೇನೆಂದು ಹೇಳಿದರು.

ಶ್ರೀರಾಮುಲು ಅವರು ಜನರನ್ನು ಮನವಿ ಮಾಡಿರುವ ವೀಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಥಳೀಯ ಪ್ರತಿಸ್ಪರ್ಧಿಗಳ ಭಯ ಶ್ರೀರಾಮುಲು ಮನದಲ್ಲಿ ಕಾಡುತ್ತಿರುವ ಪರಿಣಾಮ ಈ ರೀತಿ ಸಚಿವರು ಮನವಿ ಮಾಡಿರಬಹುದೆಂಬ ಬಿಸಿ-ಬಿಸಿ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಪ್ರೀತಿಸಿದವಳ ಕೊಂದು ದೇಹವನ್ನು ಪೀಸ್, ಪೀಸ್ ಮಾಡ್ದ – ಪತ್ರಕರ್ತ ಅರೆಸ್ಟ್

ಕಾರ್ಯಕ್ರಮದಲ್ಲಿ ಡಿಡಿಪಿಐ ರವಿಶಂಕರ್ ರೆಡ್ಡಿ ತಾಲೂಕು ಪಂಚಾಯಿತಿ ಇಓ ಜಾನಕಿರಾಮ್ ಬಿಇಓ ಸಿ.ಎಸ್ ವೆಂಕಟೇಶ ತಮ್ಮೆನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಿ.ಎಲ್. ಗುರುಲಿಂಗಪ್ಪ ಬಿಜೆಪಿ ಮಂಡಲದ ಅಧ್ಯಕ್ಷ ಡಾ. ಮಂಜುನಾಥ್ ಇದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *