ಕೆಲಸ ಮಾಡಿಸಿಕೊಳ್ಳೋಕೆ ಅಧಿಕಾರಿಗಳಿಗೆ ದುಡ್ಡು ಕೊಡ್ತೀನಿ- ಶಾಸಕ ರಾಜೇಗೌಡ ಹೇಳಿಕೆ ವೈರಲ್

By
1 Min Read

ಚಿಕ್ಕಮಗಳೂರು: ಅಧಿಕಾರಗಳಿಗೆ ಕೆಲಸ ಮಾಡಿಸಿಕೊಳ್ಳೋಕೆ ದುಡ್ಡು ಕೊಡ್ತೀನಿ. ಟಿಪ್ಸ್ ಕೊಟ್ಟು ಕೆಲಸ ಮಾಡಿಸಿಕೊಳ್ತೀವಿ ಎಂದು ಶೃಂಗೇರಿ ಶಾಸಕ  ರಾಜೇಗೌಡ (Raje Gowda) ಹೇಳಿರುವ ವೀಡಿಯೋವೊಂದು ವೈರಲ್ ಆಗಿದೆ.

ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ವೀಡಿಯೋ ಇದಾಗಿದೆ. ಕೆರೆ ಮತ್ತು ನೆಮ್ಮಾರು ಗ್ರಾಮಪಂಚಾಯ್ತಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದರು. ಸದ್ಯ ಈ ವೀಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ.

ವಿಡಿಯೋದಲ್ಲಿ ಏನಿದೆ..?: ನಾನು ಕೂಡ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇನೆ. ಮಲೆನಾಡಿನವರು ಸಹೃದಯಿಗಳು, ಯಾರು ಹಾಗೆ ಕೆಲಸ ಮಾಡಿಸಿಕೊಳ್ಳಲ್ಲ. ಟಿಪ್ಸ್ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ. ಲಂಚಕ್ಕೂ….ಟಿಪ್ಸ್ ಗೂ ಭಾರೀ ವ್ಯತಾಸವಿದೆ. ಅವರ ಕೆಲಸ ಮಾಡಿಕೊಟ್ರೆ ಟಿಪ್ಸ್ ಕೊಡ್ತಾರೆ, ಯಾರು ಹಾಗೇ ಹೋಗಲ್ಲ. ನಾನು ನನ್ನ ಕೆಲಸ ಮಾಡಿದ್ರೆ ಹಣ ಕೊಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಜೋಕಾಲಿಯಾಡ್ತಿದ್ದ ಶಿಕ್ಷಕಿ ಎರಡನೇ ಮಹಡಿಯಿಂದ ಬಿದ್ದು ಸಾವು

ರಾಜೇಗೌಡ ಮಾತಿನ ವಿಡಿಯೋವನ್ನು ಬಿಜೆಪಿ (BJP) ಟ್ವೀಟ್ ಮಾಡಿದ್ದು, ಎಟಿಎಂ ಸರ್ಕಾರದಲ್ಲಿ ಕೆಲಸ ಮಾಡಿಕೊಳ್ಳಲು ಶಾಸಕರೂ ಲಂಚ ಕೊಡಬೇಕು ಎಂದು ತಿಳಿಸಿದ್ದಾರೆ. ಇದು ಎಟಿಎಂ ಸರ್ಕಾರ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Web Stories

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್