ಪೊಲೀಸ್ ನಾರಾಯಣನಾದ ಖುಷಿಯಲ್ಲಿ ರಕ್ಷಿತ್ ಶೆಟ್ಟಿ!

Public TV
1 Min Read

ನಿರ್ದೇಶಕನಾಗಿ, ನಟನಾಗಿ ಹಲವಾರು ಹೊಸ ಪ್ರಯತ್ನದ ಮೂಲಕವೇ ಕಾಲೂರಿ ನಿಂತಿರುವವರು ರಕ್ಷಿತ್ ಶೆಟ್ಟಿ. ಕಿರಿಕ್ ಪಾರ್ಟಿಯ ನಂತರ ರಕ್ಷಿತ್ ನಟನೆಯ ಬಹು ನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲೂ ಕೂಡಾ ರಕ್ಷಿತ್ ಅವರದ್ದು ಹೊಸತನವಿರೋ ಪಾತ್ರ. ಈ ಚಿತ್ರದಲ್ಲವರು ಪೊಲೀಸ್ ಅಧಿಕಾರಿ ನಾರಾಯಣನಾಗಿ ಮಿಂಚಿರುವ ಖುಷಿಯಲ್ಲಿದ್ದಾರೆ!

ಇದುವರೆಗೂ ಥರ ಥರದ ಒಂದಷ್ಟು ಪಾತ್ರಗಳಿಗೆ ಜೀವ ತುಂಬಿರೋ ರಕ್ಷಿತ್ ಈ ಚಿತ್ರದಲ್ಲಿ ಖಾಕಿ ತೊಟ್ಟು ನಟಿಸಿದ್ದಾರೆ. ಅದು ಬುದ್ಧಿವಂತಿಕೆಯ ಜೊತೆಗೇ ಹಾಸ್ಯ ಪ್ರಜ್ಞೆ ತುಂಬಿರೋ ವಿಶಿಷ್ಟವಾದ ಪಾತ್ರವಂತೆ. ಪೊಲೀಸ್ ಧಿರಿಸಿನಲ್ಲಿ ತಮ್ಮ ಕೈಗೇ ಬೇಡಿ ಹಾಕಿಕೊಂಡಿರೋ ವಿಶಿಷ್ಟವಾದ ಪೋಸ್ಟರಿನಲ್ಲಿ ರಕ್ಷಿತ್ ಮಜವಾಗಿಯೇ ಕಾಣಿಸಿಕೊಂಡಿದ್ದಾರೆ.

ಸಚಿನ್ ರವಿ ನಿರ್ದೇಶನದ ಈ ಚಿತ್ರ ಕಿರಿಕ್ ಪಾರ್ಟಿಯನ್ನೇ ಮೀರಿಸುವಂಥಾ ಗೆಲುವೊಂದನ್ನು ದಾಖಲಿಸೋ ನಿರೀಕ್ಷೆ ಈಗಾಗಲೇ ಎಲ್ಲೆಡೆ ಹರಡಿಕೊಂಡಿದೆ. ಅದಕ್ಕೆ ಸರಿಯಾಗಿ ಹೀಗೆ ಒಂದೊಂದೇ ವಿಚಾರಗಳನ್ನು ಹಂತ ಹಂತವಾಗಿ ಹೊರ ಬಿಡುತ್ತಾ ಚಿತ್ರ ತಂಡ ಮತ್ತಷ್ಟು ಕುತೂಹಲ ಹುಟ್ಟುವಂತೆ ಮಾಡುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *