ಗ್ರಾಮೀಣ ಜನರ ನೆರವಿಗೆ ನಿಂತ ಸಿದ್ದಾರ್ಥ ಆಸ್ಪತ್ರೆ

Public TV
1 Min Read

ನೆಲಮಂಗಲ: ಗ್ರಾಮೀಣ ಭಾಗದ ಜನರ ಆರೋಗ್ಯದ ನೆರವಿಗೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಒಡೆತನದ ಸಿದ್ದಾರ್ಥ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಉನ್ನತೀಕರಿಸಿದ ವೈದ್ಯಕೀಯ ಉಪಕರಣಗಳನ್ನು ಲೋಕಾರ್ಪಣೆ ಮಾಡಲಾಯಿತು.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಟಿ ಬೇಗೂರು ಬಳಿಯ ಸಿದ್ದಾರ್ಥ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್ ಲೋಕಾರ್ಪಣೆ ಮಾಡಿದರು. ಈ ವೇಳೆ ಬಡ ಹಾಗೂ ಗ್ರಾಮೀಣ ಜನರ ಅನುಕೂಲಕ್ಕಾಗಿ, ಸಿಟಿ ಸ್ಕ್ಯಾನ್,Tomography. 800ma.x – Ra ಉಪಕರಣಗಳು ಇದ್ದು, ಕೊರೊನಾ ಮೂರನೇ ಅಲೆಯ ಬಗ್ಗೆ ಎಚ್ಚೆತ್ತಿರುವ ಆಡಳಿತ ಮಂಡಳಿ ಕೊರೊನಾ RTPCR ಟೆಸ್ಟ್ ದೃಢಪಡಿಸಲು ಈ ಉಪಕರಣಗಳು ಸಹಾಯವಾಗಲಿದೆ. ಇದನ್ನೂ ಓದಿ:  ಬಸ್ ನಿಲ್ದಾಣದಲ್ಲಿ ಸಿಕ್ಕ ಚೀಲದಲ್ಲಿ ಸಿಕ್ತು ನವಜಾತ ಶಿಶು

ಕೊರೊನಾ ರೋಗಿಗಳಿಗೆ ಬೇಕಾಗಿರುವ ಬೆಡ್ ಹಾಗೂ ಆಕ್ಸಿಜನ್ ವೆಂಟಿಲೇಟರ್ ಸಮಸ್ಯೆ ನೀಗಿಸಲು ಸಿದ್ದಾರ್ಥ ಸಂಸ್ಥೆ ಮುಂದಾಗಿದೆ. 30 ಸೆಕೆಂಡ್‍ನಲ್ಲಿ ಸಿಟಿ ಸ್ಕ್ಯಾನ್ ಮೂಲಕ ಕೊರೊನಾ ಸೋಂಕು ಧೃಡಪಡಿಸಲು ಸಹಕಾರಿಯಾಗುವಂತೆ ಅತ್ಯಾಧುನಿಕ ಉಪಕರಣಗಳು ಇದ್ದು, 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಇರುವ ಏಕೈಕ ಆಧುನಿಕ ಉಪಕರಣ ಕೇಂದ್ರವಾಗಿ ಸಿದ್ಧಾರ್ಥ ಆಸ್ಪತ್ರೆ ಹೊರಹೊಮ್ಮಿದೆ. ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್, ನೆಲಮಂಗಲ ಶಾಸಕ ಡಾ, ಶ್ರೀನಿವಾಸ್ ಮೂರ್ತಿ, ಸಿದ್ದಾರ್ಥ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಆಡಳಿತ ಮಂಡಳಿ ಅಧಿಕಾರಿಗಳು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *