ಬೆಂಗಳೂರು: ಪಬ್ಲಿಕ್ ಟಿವಿಯಲ್ಲಿ ಪ್ರತಿನಿತ್ಯ ಬೆಳಗ್ಗೆ ಪ್ರಸಾರವಾಗುವ ರಾಶಿ ಭವಿಷ್ಯ ಕಾರ್ಯಕ್ರಮದಲ್ಲಿ ಶ್ರೀ ರೇಣುಕಾರಾಧ್ಯ ಗುರೂಜಿ, ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗ್ತಾರೆ ಎಂದು 15 ದಿನಗಳ ಹಿಂದೆಯೇ ಭವಿಷ್ಯ ನುಡಿದಿದ್ದರು.
ಸಿಎಂ ಅಭ್ಯರ್ಥಿಗಳು ಮೂವರಲ್ಲಿ ಕುಮಾರಸ್ವಾಮಿ ಅವ್ರಿಗೆ ಮುಖ್ಯಮಂತ್ರಿಯಾಗುವ ರಾಜಯೋಗ ಒಂದು ಭಾಗ ಎಲ್ಲರಿಗಿಂತ ಹೆಚ್ಚಿದೆ. ತಾತ್ಕಾಲಿಕ ಮಿತ್ರತ್ವ ಬಾಂಧವ್ಯದಲ್ಲಿ ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ. ಕುಮಾರಸ್ವಾಮಿಗೆ ಅದೃಷ್ಟ ಎಂಬುವುದು ಅನಿರಿಕ್ಷಿತವಾಗಿ ತಾನಾಗಿಯೇ ಒಲಿದು ಬರಲಿದ್ದು, ಮೂವರ ಜಾತಕ ಪರಿಶೀಲನೆ ಮಾಡಿದಾಗ ಕುಮಾರಸ್ವಾಮಿ ಅವ್ರಿಗೆ ಮಾತ್ರ ಸಿಎಂ ಆಗುವ ಗುರುವಿನ ಬಲ ಹೆಚ್ಚಿದೆ ಅಂತಾ ವಿವರಿಸಿದ್ರು.
ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಗುರೂಜಿ, ನಾವು ಹೇಳಿದ ಹಾಗೆ ಆಗಿದೆ ಅಂತಲ್ಲ, ನಮ್ಮ ಗುರು, ನಮ್ಮ ಭಗವತಿ ನುಡಿಸಿದಂತೆ ಆಗಿದೆ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದಿದ್ದು, ರಾಜ್ಯದ ಜನತೆ ಒಳ್ಳೆಯ ಆಡಳಿತ ಕೊಡಲಿ ಅಂತಾ ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಅಂತಾ ಶುಭ ಹಾರೈಸಿದರು.
ಎಷ್ಟು ದಿನ ಹೆಚ್.ಡಿ.ಕುಮಾರಸ್ವಾಮಿ ಎಷ್ಟು ದಿನ ಆಡಳಿತ ಮಾಡ್ತಾರೆ ಅಂತಾ ಪ್ರಶ್ನೆಗೆ ಉತ್ತರಿಸಿದ ಗುರೂಜಿ, ಈ ಸದ್ಯ ಅದನ್ನು ಹೇಳಲಿಕ್ಕೆ ಬರಲ್ಲ. ಅವರು ಪ್ರಮಾಣ ವಚನ ಸ್ವೀಕರಿಸುವ ಸಮಯದ ಆಧಾರದ ಮೇಲೆ ಮಾತ್ರ ಹೇಳಲಿಕ್ಕೆ ಸಾಧ್ಯವಾಗುತ್ತದೆ. ಪ್ರಮಾಣ ವಚನ ಸ್ವೀಕರಿಸಿದ ಗಂಟೆ, ನಿಮಿಷ ಗಳಿಗೆಯ ಲೆಕ್ಕದಲ್ಲಿ ಸರ್ಕಾರದ ಅಳಿವು ಉಳಿವಿನ ಬಗ್ಗೆ ನೋಡಬಹುದು ಆಂತಾ ಸ್ಪಷ್ಟಪಡಿಸಿದ್ರು.