ಸ್ಯಾಂಡಲ್ ವುಡ್ನ ರೋರಿಂಗ್ ಸ್ಟಾರ್ ಶ್ರೀಮುರಳಿಗೆ (Sri Murali) ಇಂದು (ಡಿ.17) ಹುಟ್ಟು ಹಬ್ಬದ ಸಂಭ್ರಮ. 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶ್ರೀಮುರಳಿ, ನಾಗವಾರ ರಸ್ತೆಯ SNN ಅಪಾರ್ಟ್ಮೆಂಟ್ ನ ಕ್ಲಬ್ ನಲ್ಲಿ ಹುಟ್ಟು ಹಬ್ಬವನ್ನ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ.
ಹುಟ್ಟುಹಬ್ಬದ (Sri Murali Birthday) ಪ್ರಯುಕ್ತ ಉಗ್ರಾಯುಧಮ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ ಚಿತ್ರತಂಡ. ಈ ವರ್ಷ ಪರಾಕ್ ಹಾಗೂ ಉಗ್ರಾಯುಧಮ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ನಟ ಶ್ರೀಮುರಳಿ. ಕಳೆದ ವರ್ಷ ತೆರೆಕಂಡು ಸೌಂಡ್ ಮಾಡಿದ ಬಘಿರ ಸಿನಿಮಾದಲ್ಲಿ ನಟಿಸಿದ್ದ ಶ್ರೀಮುರಳಿ, 42ನೇ ಹುಟ್ಟುಹಬ್ಬವನ್ನ ಸರಳವಾಗಿ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ.
ಈ ವರ್ಷ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. 2003ರಲ್ಲಿ ತೆರೆಕಂಡ ಚಂದ್ರಚಕೋರಿ ಸಿನಿಮಾ ಮೂಲಕ ನಾಯಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಶ್ರೀಮುರಳಿಗೆ 2014ರಲ್ಲಿ ತೆರೆಕಂಡ ಉಗ್ರಂ ಸಿನಿಮಾ ರಂಗಕ್ಕೆ ಗ್ರ್ಯಾಂಡ್ ಕಮ್ ಬ್ಯಾಕ್ ಆಗುವಂತೆ ಮಾಡಿದೆ. ಜೊತೆಗೆ ಇತ್ತೀಚೆಗೆ ತೆರೆಕಂಡ ಬಘೀರ ಕೂಡ ಸಕ್ಸಸ್ ತಂದುಕೊಟ್ಟಿತು.



