ದುಬೈ: ಏಷ್ಯಾ ಕಪ್ ಟಿ-20 ಕ್ರಿಕೆಟ್ (Asia Cup) ಟೂರ್ನಿಯಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯುತ್ತಿರುವ ವೇಳೆ ಶ್ರೀಲಂಕಾ ಆಟಗಾರ (Sri Lanka cricketer )ದುನಿತ್ ವೆಲ್ಲಾಳಗೆ (Dunith Wellalage) ಅವರ ತಂದೆ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಬಂದಿದೆ.
ಬಿ ಗುಂಪಿನ ಅಂತಿಮ ಲೀಗ್‌ನಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ದುನಿತ್ ಅವರ ತಂದೆ ಸುರಂಗಾ ವೆಲ್ಲಾಳಗೆ ನಿಧನರಾಗಿರುವ ಸುದ್ದಿ ಬಂದಿತ್ತು. ಪಂದ್ಯ ಮುಗಿದ ಬಳಿಕ ಲಂಕಾ ಕೋಚ್ ಜಯಸೂರ್ಯ, ದುನಿತ್ ಅವರಿಗೆ ಮೈದಾನದಲ್ಲಿ ವಿಷಯ ತಿಳಿಸಿದರು. ಇದನ್ನೂ ಓದಿ: Asia Cup 2025 | ಮತ್ತೊಮ್ಮೆ ರೋಚಕ ಹಣಾಹಣಿ – ಸೂಪರ್ ಸಂಡೇ ಭಾರತ-ಪಾಕ್ ಮುಖಾಮುಖಿ
ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಜಯಸೂರ್ಯ ಹಾಗೂ ಮ್ಯಾನೇಜರ್ ದುನಿತ್‌ರನ್ನು ಸಮಾಧಾನ ಮಾಡಿದ್ದಾರೆ. ದುನಿತ್ ಅವರ ತಂದೆ ಸುರಂಗಾ ಕೂಡ ಕ್ರಿಕೆಟ್ ಆಡುತ್ತಿದ್ದರು. ಆದರೆ ಅವರು ರಾಷ್ಟ್ರೀಯ ಟೂರ್ನಿಗಳಿಗೆ ಆಯ್ಕೆಯಾಗಿರಲಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಎಲ್ಲಾ ಬೇಡಿಕೆಗಳು ವಿಫಲ – ಇದ್ದ ಅಲ್ಪಸ್ವಲ್ಪ ಮಾನವನ್ನೂ ಕಳೆದುಕೊಂಡ ಪಾಕ್, ಹೈಡ್ರಾಮಾ ನಂತ್ರ ಪಂದ್ಯ ಶುರು