ಭಾರತ ಪಾಕ್‍ಗೆ ರಿಸರ್ವ್ ಡೇ – ಶ್ರೀಲಂಕಾ, ಬಾಂಗ್ಲಾ ಅಭಿಮಾನಿಗಳ ತಕರಾರು

Public TV
2 Min Read

– ಇಂಡಿಯಾ ಪಾಕ್ ಸೂಪರ್ 4 ರಿಸರ್ವ್ ಡೇಗೂ ಮಳೆ ಸುರಿಯುವ ಭೀತಿ

ನವದೆಹಲಿ: ಸೆ.10ರ ಸೂಪರ್ ಫೋರ್ ಪಂದ್ಯದ ವೇಳೆ ಮಳೆಯ ಭೀತಿಯಿಂದ ಪಾಕ್ (Pakistan) ಹಾಗೂ ಭಾರತ (Team India) ತಂಡಕ್ಕೆ ಮಾತ್ರ ರಿಸರ್ವ್ ಡೇ ಘೋಷಿಸಿರುವುದು ಭಾರೀ ಚರ್ಚೆಗೂ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್‍ಗೆ (ACC) ಶ್ರೀಲಂಕಾ (Sri Lanka) ಹಾಗೂ ಬಾಂಗ್ಲಾ  (Bangladesh) ಕ್ರಿಕೆಟ್ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಸೆ.1ಂ ರಂದು ಕೊಲಂಬೋದಲ್ಲಿ ನಡೆಯಲಿರುವ ಭಾರತ ಮತ್ತು ಪಾಕ್ ಸೂಪರ್ 4 ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಸೆ.11ನ್ನು ರಿಸರ್ವ್ ಡೇ ಆಗಿ ನಿಗದಿಪಡಿಸಲಾಗಿದೆ. ಆದರೆ ಎರಡೇ ತಂಡಗಳಿಗೆ ಈ ಆಯ್ಕೆ ನೀಡಿರುವುದು ಬಾಂಗ್ಲಾ ಹಾಗೂ ಶ್ರೀಲಂಕಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಎಸಿಸಿಯನ್ನು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ನಾಯಿ ಮರಿ ಮುದ್ದಾಡಿ ಸುದ್ದಿಯಾದ ಕೊಹ್ಲಿ

ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸಿಸಿ ಸೂಪರ್ ಫೋರ್ ಪ್ರವೇಶಿಸಿರುವ ಎಲ್ಲಾ ತಂಡಗಳ ಒಪ್ಪಿಗೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ. ಏಷ್ಯಾ ಕಪ್ ಸೂಪರ್ 4 ಹಂತದ ಭಾರತ-ಪಾಕಿಸ್ತಾನ ಸ್ಪರ್ಧೆಯ ಮೀಸಲು ದಿನವನ್ನು ಸೂಪರ್ 4 ಸ್ಪರ್ಧಾತ್ಮಕ ತಂಡಗಳ ಎಲ್ಲಾ ನಾಲ್ಕು ಸದಸ್ಯ ಮಂಡಳಿಗಳೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳಲಾಗಿದೆ. ಎಲ್ಲರೂ ಒಪ್ಪಿದ ಬಳಿಕವೇ ಈ ಬದಲಾವಣೆಯನ್ನು ಮಾಡಲಾಗಿದೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿದ್ದ ತಾರತಮ್ಯದ ವಿಚಾರದ ಗೊಂದಲಕ್ಕೆ ಎಸಿಸಿ ತೆರೆ ಎಳೆದಿದೆ.

ಶ್ರೀಲಂಕಾದ ಕ್ರಿಸ್ ಸಿಲ್ವರ್‍ವುಡ್ ಮತ್ತು ಬಾಂಗ್ಲಾದೇಶದ ಮುಖ್ಯ ಕೋಚ್ ಚಂಡಿಕಾ ಹತುರುಸಿಂಗಾ ಅವರು ರಿಸರ್ವ್ ದಿನವನ್ನು ಘೋಷಿಸಿದ ಬಳಿಕ ಆಶ್ಚರ್ಯ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದರು. ಪಂದ್ಯಾವಳಿಯ ನಡುವೆ ನಿಯಮ ಬದಲಾವಣೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ ಇದು ಸೂಕ್ತ ನಿರ್ಧಾರವಲ್ಲ ಎಂದು ಅವರು ಹೇಳಿದ್ದರು.

ಈಗ ರಿಸರ್ವ್ ಡೇಗೂ ಮಳೆ ಸುರಿಯುವ ಲಕ್ಷಣ ಗೋಚರಿಸಿದೆ. ಸೆ.10 ರಂದು 90% ಮಳೆ ಬರುವ ಸಾಧ್ಯತೆ ಇದ್ದರೆ, ಸೆ.11 ರಂದು 75% ಮೋಡ ಕವಿಯಲಿದ್ದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಜೊತೆ ಗಾಲ್ಫ್ ಆಡಿದ ಧೋನಿ!

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್