ಬೆಂಗಳೂರಿನ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ತಾಳಮದ್ದಳೆ, ಕಾರ್ತಿಕ ದೀಪೋತ್ಸವ, ಪಲ್ಲಕ್ಕಿ ಉತ್ಸವ

Public TV
1 Min Read

ಬೆಂಗಳೂರು: ಮಾಗಡಿ ರಸ್ತೆಯ ಕೊಡಿಗೆಹಳ್ಳಿಯಲ್ಲಿರುವ (Kodigehalli) ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ (Janashakti Subramanya Temple) ಕಾರ್ತಿಕ ಮಾಸದ ಪ್ರಯುಕ್ತ ಡಿ.3 ಭಾನುವಾರ ರಾತ್ರಿ ಕಾರ್ತಿಕ ದೀಪೋತ್ಸವ (Kartika Deepotsav) ಮತ್ತು ಪಲ್ಲಕ್ಕಿ ಉತ್ಸವ (Pallaki Utsava) ನಡೆಯಲಿದೆ.

ಈ ಸಂದರ್ಭದಲ್ಲಿ ಮಧ್ಯಾಹ್ನ 2:58 ರಿಂದ ಜ್ಞಾನಶಕ್ತಿ ಸುಬ್ರಹ್ಮಣ್ಯನಿಗೆ ʼಯಕ್ಷ ದೀಪೋತ್ಸವʼದ ಅಂಗವಾಗಿ ʼರಾಜಾ ಯಯಾತಿʼ ಯಕ್ಷಗಾನ ತಾಳಮದ್ದಳೆ (Yakshagana Talamaddale) ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವತರಾಗಿ ಪುತ್ತೂರು ರಮೇಶ್‌ ಭಟ್‌, ಮದ್ದಳೆಯಲ್ಲಿ ಅಕ್ಷಯ್‌ ರಾವ್‌ ವಿಟ್ಲ, ಚೆಂಡೆಯಲ್ಲಿ ಶಿಖಿನ್‌ ಶರ್ಮಾ ಶರವೂರು, ಚಕ್ರತಾಳದಲ್ಲಿ ಶಂಕರ ಜೋಯಿಸ ಸಹಕರಿಸಲಿದ್ದಾರೆ.   ಇದನ್ನೂ ಓದಿ: ಕಾರ್ತಿಕ ದೀಪೋತ್ಸವಂದು ದೀಪ ಬೆಳಗುವುದು ಯಾಕೆ? ಮಹತ್ವ ಏನು?

ಕಲಾವಿದರಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್‌, ವಾಸುದೇವರಂಗಾ ಭಟ್‌, ಸಂಕದಗುಂಡಿ ಗಣಪತಿ ಭಟ್‌, ಸುಧನ್ವ ದೇರಾಜೆ, ಶಶಾಂಕ ಅರ್ನಾಡಿ, ರಾಜೇಶ ಅಜ್ಜಾವರ ಭಾಗವಹಿಸಲಿದ್ದಾರೆ.  ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲೂ ಯೋಗಿ ಸರ್ಕಾರದ ಬುಲ್ಡೋಜರ್ ದಾಳಿ – ಕಟ್ಟಡಗಳು ಧ್ವಂಸ 

ತಾಳಮದ್ದಳೆ ಕಾರ್ಯಕ್ರಮ ಮುಗಿದ ಬಳಿಕ ರಾತ್ರಿ 8 ಗಂಟೆಗೆ ಕಾರ್ತಿಕ ದೀಪೋತ್ಸವ ನಂತರ ಪಲ್ಲಕ್ಕಿ ಉತ್ಸವ ನಡೆಯಲಿದೆ. ನ.14 ರಂದು ಕಾರ್ತಿಕ ಮಾಸದ ವಿಶೇಷ ಪೂಜೆ ಆರಂಭಗೊಂಡಿದ್ದು ಡಿ.12ರವರೆಗೆ ನಡೆಯಲಿದೆ. ಈ ವಿಶೇಷ ಮಾಸದಂದು ಪ್ರತಿ ದಿನ ಬೆಳಗ್ಗೆ ರುದ್ರ ಪಠಣ, ಪವಮಾನ ಅಭಿಷೇಕ ಹಾಗೂ ಸಾಯುಂಕಾಲ ಕಾರ್ತಿಕ ಪೂಜೆ ನಡೆಯುತ್ತಿದೆ.

 

Share This Article