ಕನ್ನಡದ ‘ಕಿಸ್’ ನಟಿ ಶ್ರೀಲೀಲಾ (Sreeleela) ತೆಲುಗು ಅಂಗಳದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚ್ತಿದ್ದಾರೆ. ಸ್ಟಾರ್ ನಟರಿಗೆ ಸಾಲು ಸಾಲು ಸಿನಿಮಾಗಳಿಗೆ ಹೀರೋಯಿನ್ ಆಗುವ ಮೂಲಕ ರಶ್ಮಿಕಾ, ಪೂಜಾ, ಕೃತಿ ಶೆಟ್ಟಿಗೆ ಶ್ರೀಲೀಲಾ ಠಕ್ಕರ್ ಕೊಡ್ತಿದ್ದಾರೆ. ಹೀಗಿರುವಾಗ ಶ್ರೀಲೀಲಾ ಕನ್ನಡ ಸಿನಿಮಾ ಮಾಡಲ್ವಾ ಎಂದು ಎದುರು ನೋಡ್ತಿದ್ದವರಿಗೆ ನಟಿ ಸಿಹಿ ಸುದ್ದಿ ನೀಡಿದ್ದಾರೆ.


ಈ ಚಿತ್ರ ಬಿಟ್ಟು ಇದೀಗ ಕನ್ನಡದ ಹೊಸ ಚಿತ್ರಕ್ಕೆ ಶ್ರೀಲೀಲಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯದಲ್ಲೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಿನಿಮಾ ಬಗ್ಗೆ ಅನೌನ್ಸ್ ಮಾಡೋದಾಗಿ ನಟಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಯಾವ ಹೀರೋಗೆ ಶ್ರೀಲೀಲಾ ಹೀರೋಯಿನ್ ಆಗಲಿದ್ದಾರೆ. ಸಿನಿಮಾ ಸಂಪೂರ್ಣ ಮಾಹಿತಿ ನೀಡೋದಾಗಿ ತಿಳಿಸಿದ್ದಾರೆ. ಈ ಮೂಲಕ ಕನ್ನಡಕ್ಕೆ ಮತ್ತೆ ಶ್ರೀಲೀಲಾ ಬರೋದಿಲ್ಲ ಎಂದವರಿಗೂ ನಟಿ ಉತ್ತರಿಸಿದ್ದಾರೆ.
