ವಿಜಯ್ ದಳಪತಿ ಸಿನಿಮಾದಲ್ಲಿ ಶ್ರೀಲೀಲಾ

Public TV
1 Min Read

ನ್ನಡದ ಬ್ಯೂಟಿ ಶ್ರೀಲೀಲಾ (Sreeleela) ತೆಲುಗಿನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಆದರೆ ಇತ್ತೀಚೆಗೆ ಸತತ ತೆಲುಗು ಸಿನಿಮಾಗಳ ಸೋಲಿನ ಬೆನ್ನಲ್ಲೇ ಕಾಲಿವುಡ್‌ನತ್ತ ‘ಕಿಸ್’ (Kiss Film) ನಟಿ ಮುಖ ಮಾಡಿದ್ದಾರೆ. ಮತ್ತೊಂದು ತಮಿಳು ಸಿನಿಮಾದಲ್ಲಿ ಸ್ಟಾರ್ ನಟ ವಿಜಯ್ ದಳಪತಿ ಜೊತೆ ತೆರೆಹಂಚಿಕೊಳ್ಳುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

ವಿಜಯ್ ಸದ್ಯ ‘ಗೋಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟನೆಯ ಬದಲು ಸ್ಪೆಷಲ್ ಹಾಡಿಗೆ ಕುಣಿಯಲು ಚಾನ್ಸ್ ಸಿಕ್ಕಿದೆ. ಮೊದಲೇ ಶ್ರೀಲೀಲಾ ಡ್ಯಾನ್ಸ್‌ನಲ್ಲಿ ಎತ್ತಿದ ಕೈ. ಹಾಗಾಗಿ ವಿಜಯ್ (Vijay Thalapathy) ಜೊತೆ ಸೊಂಟ ಬಳುಕಿಸಲು ಶ್ರೀಲೀಲಾ ಚಿತ್ರತಂಡ ಆಫರ್ ಕೊಟ್ಟಿದೆ ಎನ್ನಲಾಗಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬೀಳಲಿದೆ. ಅಲ್ಲಿಯವರೆಗೂ ಕಾಯಬೇಕಿದೆ. ಇದನ್ನೂ ಓದಿ:ಆಗಸ್ಟ್ 2ರಂದು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ರಿಲೀಸ್

ವಿಜಯ್ ಜೊತೆಗಿನ ಸಿನಿಮಾ ಮಾತ್ರವಲ್ಲ. ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್‌ಗೆ ನಾಯಕಿಯಾಗಿ ಶ್ರೀಲೀಲಾಗೆ ನಟಿಸುವ ಚಾನ್ಸ್ ಸಿಕ್ಕಿದೆ. ತೆಲುಗಿನ ಸಿನಿಮಾಗಳಿಂದ ಔಟ್ ಆದ್ಮೇಲೆ ಸದ್ಯ ತಮಿಳಿನ 2 ಪ್ರಾಜೆಕ್ಟ್‌ಗಳನ್ನು ನಟಿ ಒಪ್ಪಿಕೊಂಡಿದ್ದಾರೆ.

ಅಜಿತ್ ಕುಮಾರ್ (Ajith Kumar) ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಶ್ರೀಲೀಲಾರನ್ನು ಸಂಪರ್ಕಿಸಿದೆ ಚಿತ್ರತಂಡ. ನಟಿ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ. ಮೇ 1ರಂದು ಅಜಿತ್ ಹುಟ್ಟುಹಬ್ಬದಂದು ಅಧಿಕೃತ ಮಾಹಿತಿ ಹೊರಬೀಳಲಿದೆ. ‘ವಿದಾ ಮುಯಾರ್ಚಿ’ ಚಿತ್ರೀಕರಣದಲ್ಲಿ ನಟ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.


ಕೆಲದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ತಮಿಳು ಸಿನಿಮಾದಲ್ಲಿ ನಟಿಸುವ ಇಂಗಿತವನ್ನು ಶ್ರೀಲೀಲಾ ವ್ಯಕ್ತಪಡಿಸಿದ್ದರು. ಇದೀಗ ವಿಜಯ್ ಮತ್ತು ಅಜಿತ್ ಕುಮಾರ್ ಜೊತೆಗಿನ ಸಿನಿಮಾ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Share This Article