ಬೆಂಗಳೂರಿನ ಬೆಡಗಿಗೆ ಖುಲಾಯಿಸಿದ ಅದೃಷ್ಟ- ಮುಂದೇನು ಮಾಡ್ತಾರೆ ಶ್ರೀಲೀಲಾ?

Public TV
1 Min Read

ನ್ನಡದ ಹುಡುಗಿ, ಬೆಂಗಳೂರಿನ ಬೆಡಗಿ ಶ್ರೀಲೀಲಾ (Sreeleela) ಅವರಿಗೆ ಇದೀಗ ಟಾಲಿವುಡ್‌ನಲ್ಲಿ (Tollywood) ಅದೃಷ್ಟ ಖುಲಾಯಿಸಿದೆ. ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳ ಸೋಲನ್ನು ಕಂಡ ‘ಕಿಸ್’ ನಟಿಗೆ ಈಗ ‘ಗುಂಟೂರು ಖಾರಂ’ ಸಿನಿಮಾದಿಂದ ಯಶಸ್ಸು ಸಿಕ್ಕಿದೆ.

ಕಿಸ್, ಭರಾಟೆ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ಶ್ರೀಲೀಲಾ ಬಳಿಕ ತೆಲುಗಿಗೆ ಹಾರಿದ್ದರು. ಧಮಾಕಾ’ ಚಿತ್ರದ ಸಕ್ಸಸ್ ಬಳಿಕ ‘ಸ್ಕಂದ’, ‘ಆದಿಕೇಶವ’, ‘ಎಕ್ಸ್ಟ್ರಾ ಆರ್ಡಿನರಿ ಮ್ಯಾನ್’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಸೋಲಿನಿಂದ ಕಂಗೆಟ್ಟ ನಟಿಗೆ ‘ಗುಂಟೂರು ಖಾರಂ’ ಚಿತ್ರದಿಂದ ಯಶಸ್ಸು ಸಿಕ್ಕಿದೆ. ಇದನ್ನೂ ಓದಿ:ಗುದ್ದಲಿ ಪೂಜೆ ನೆರವೇರಿಸಿದ ವಿನೋದ್ ರಾಜ್- 55 ಲಕ್ಷ ಮೊತ್ತದಲ್ಲಿ ಲೀಲಾವತಿ ಸ್ಮಾರಕ

ಜನವರಿ 12ರಂದು ರಿಲೀಸ್ ಆದ ‘ಗುಂಟೂರು ಖಾರಂ’ (Guntur Kaaram) ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದರು. ಶ್ರೀಲೀಲಾ ನಟನೆ ಮತ್ತು ಡ್ಯಾನ್ಸ್, ಚಿತ್ರದ ಕಥೆ ಬಗ್ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಪ್ರಿನ್ಸ್- ಶ್ರೀಲೀಲಾ ಜೋಡಿ ಮೋಡಿ ಮಾಡುತ್ತಿದೆ.

ರಶ್ಮಿಕಾ(Rashmika Mandanna), ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ (Krithi Shetty) ಠಕ್ಕರ್ ಕೊಟ್ಟು ಮತ್ತೆ ಸಕ್ಸಸ್ ರೇಸ್‌ನಲ್ಲಿದ್ದಾರೆ ಶ್ರೀಲೀಲಾ. ಈಗ ಮತ್ತೆ ಶ್ರೀಲೀಲಾಗೆ ಸ್ಟಾರ್ ನಟರ ಚಿತ್ರಗಳು ಅರಸಿ ಬರುತ್ತಿದೆ. ಇದರ ನಡುವೆ ನಟಿ, ಎಂಬಿಬಿಎಸ್ ಫೈನಲ್ ಇಯರ್ ಓದುತ್ತಿದ್ದಾರೆ. ಎಕ್ಸಾಂ ಹತ್ತಿರವಿರುವ ಕಾರಣ ಬ್ರೇಕ್ ತೆಗೆದುಕೊಳ್ಳುತ್ತಾರೆ ಎಂಬ ಸುದ್ದಿಯೂ ಇದೆ.

ಅದೃಷ್ಟ ಕೈ ಹಿಡಿದಿರೋ ಸಮಯದಲ್ಲಿ ಕನ್ನಡದ ಬ್ಯೂಟಿ ಮತ್ತೆ ಸಿನಿಮಾಗಳನ್ನು ಮಾಡುತ್ತಾರಾ? ಅಥವಾ ಎಜುಕೇಷನ್‌ಗೆ ಒತ್ತು ಕೊಟ್ಟು ವಿರಾಮ ತೆಗೆದುಕೊಳ್ತಾರೆ ಕಾಯಬೇಕಿದೆ. ಡಿಮ್ಯಾಂಡ್‌ ಇರೋವಾಗಲೇ ಹುಡುಕಿ ಬಂದಿರೋ ಅದೃಷ್ಟದ ಕಡೆ ತಿರುಗಿ ನೋಡಬೇಕಲ್ಲವೇ? ಹಾಗಾದ್ರೆ ‘ಕಿಸ್‌’ ನಟಿ ಮುಂದೆ ಏನ್ಮಾಡ್ತಾರೆ ಕಾದುನೋಡೋಣ.

Share This Article