ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್ ವ್ಯಾಕ್ಸಿನ್ ಸೆಪ್ಟೆಂಬರ್​​​ಗೆ ಲಭ್ಯ – ಬೆಲೆ 750 ರೂ.

Public TV
2 Min Read

ನವದೆಹಲಿ: ಭಾರತದಲ್ಲಿ ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ ಲೈಟ್ ಸೆಪ್ಟೆಂಬರ್ ಗೆ ಲಭ್ಯವಾಗಲಿದೆ. ಈ ಲಸಿಕೆ ಸಿಂಗಲ್ ಡೋಸ್ ಆಗಿದ್ದು, 750 ರೂ. ಬೆಲೆ ನಿಗದಿಪಡಿಸಲಾಗಿದೆ ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ತಯಾರಿಕಾ ರಷ್ಯನ್ ಡೆರೆಕ್ಟ್ ಇನ್‍ವೆಸ್ಟಮೆಂಟ್ ಫಂಡ್ (ಆರ್ ಡಿಎಫ್)ನ ಪಾರ್ಟನರ್ ಕಂಪನಿ ಪೈನಸಿಯಾ ಬಯೋಟೆಕ್ ಭಾರತದಲ್ಲಿ ಬಳಕೆಗೆ ತುರ್ತು ಅನುಮತಿಯನ್ನು ಕೇಳಿದೆ.

ರಷ್ಯಾದ ಲಸಿಕೆಯಾಗಿರುವ ಸ್ಪುಟ್ನಿಕ್ ವಿಗೆ ಏಪ್ರಿಲ್ 12ರಂದು ಭಾರತ ತುರ್ತು ಅನುಮೋದನೆ ನೀಡಿತ್ತು. ಸದ್ಯ ಈ ಲಸಿಕೆ 65 ದೇಶಗಳಲ್ಲಿ ನೀಡಲಾಗುತ್ತಿದೆ. ಏಪ್ರಿಲ್ ನಲ್ಲಿ ಅನುಮತಿ ದೊರೆತರೂ ಮೇನಲ್ಲಿ ಈ ಲಸಿಕೆಯನ್ನ ದೇಶದ ಜನರಿಗೆ ನೀಡಲು ಆರಂಭಿಸಲಾಯ್ತು. ಜೂನ್, ಜುಲೈನಲ್ಲಿ ವ್ಯಾಕ್ಸಿನ್ ಪೂರೈಕೆಯನ್ನು ಏರುಪೇರಾಗಿದ್ದರಿಂದ ಲಸಿಕಾಕರಣ ಕೊಂಚ ನಿಧಾನಗತಿಯಲ್ಲಿದೆ. ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಸ್ಪುಟ್ನಿಕ್ ವಿ ಲಸಿಕಾಕರಣ ವೇಗ ಪಡೆದುಕೊಳ್ಳಲಿದೆ ಎಂದು ವರದಿಯಾಗಿದೆ.

ಏನಿದು ಸ್ಪುಟ್ನಿಕ್ ಲೈಟ್?
ಸ್ಪುಟ್ನಿಕ್ ಲೈಟ್ ಹೊಸ ಲಸಿಕೆ ಅಲ್ಲ. ರಷ್ಯಾ ನೀಡುತ್ತಿರುವ ಸ್ಪುಟ್ನಿಕ್ ವಿ ಯ ಎರಡು ಡೋಸ್ ಗಳ ಮೊದಲನೇ ಡೋಸ್. ಸ್ಪುಟ್ನಿಕ್ ವಿಯ ಎರಡು ಡೋಸ್ ಗಳು ಬೇರೆ ಬೇರೆ ವೈರಲ್ ಫ್ಯಾಕ್ಟರ್ ಗಳಲ್ಲಿದೆ. ಸ್ಪುಟ್ನಿಕ್ ವಿ ಮೊದಲ ಡೋಸ್ ಶೇ.79.4ರಷ್ಟು ಪರಿಣಾಮಾಕಾರಿಯಾಗಿದ್ದರಿಂದ ಇದಕ್ಕೆ ಸ್ಪುಟ್ನಿಕ್ ಲೈಟ್ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದವರೆಲ್ಲ ಬಾಹುಬಲಿ: ಪ್ರಧಾನಿ ಮೋದಿ

ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಷಿನ್ ಲಸಿಕೆಯ ಎರಡು ಡೋಸ್ ಪಡೆಯಬೇಕು. ಎರಡೂ ಡೋಸ್ ಪಡೆದ್ರೂ ಇದರ ಪರಿಣಾಮ ಶೇ.80. ಹಾಗಾಗಿ ಸ್ಪುಟ್ನಿಕ್ ವಿಯ ಮೊದಲನೇ ಡೋಸ್ ಲೈಟ್ ಇವರೆಡಕ್ಕಿಂತೂ ಹೆಚ್ಚು ಪರಿಣಾಮಕಾರಿ ಎಂದು ಪ್ರಯೋಗಲಾಯದಲ್ಲಿ ಸಾಬೀತಾಗಿದೆ. ಕಳೆದ ವಾರ ಭಾರತದಲ್ಲಿ ಜಾನ್‍ಸನ್ ಆ್ಯಂಡ್ ಜಾನ್‍ಸನ್ ಸಿಂಗಲ್ ಡೋಸ್ ಲಸಿಕೆ ಬಳಕೆಗೆ ಭಾರತ ಅನುಮತಿ ನೀಡಿದೆ. ಇದನ್ನೂ ಓದಿ: ಮುಂದಿನ ತಿಂಗಳೇ ಮಕ್ಕಳಿಗೆ ಕೊರೊನಾ ಲಸಿಕೆ ಸಾಧ್ಯತೆ: ಐಸಿಎಂಆರ್

ಸ್ಪುಟ್ನಿಕ್ ಲೈಟ್ ಲಾಭಗಳೇನು?
* ಈ ಲಸಿಕೆ ಶೇ.79.4 ಪರಿಣಾಮಕಾರಿಯಾಗಿದ್ದು, ಎರಡದಿಂದ ಎಂಟು ಡಿಗ್ರಿ ತಾಪಮಾನದಲ್ಲಿ ಶೇಖರಿಸಡಬಹುದಾಗಿ ದೆ.
* ಶೇ.100ರಷ್ಟು ಜನರಲ್ಲಿ 10 ದಿನಗಳಲ್ಲಿಯೇ 40 ಪಟ್ಟು ಆಂಟಿಬಾಡಿಗಳ ಉತ್ಪಾದನೆ ಆಗಲಿದೆ.
* ಕೊರೊನಾ ವೈರಸ್ ನ ಎಲ್ಲ ರೂಪಾಂತರಿಗಳ ವಿರುದ್ಧ ಸ್ಪುಟ್ನಿಕ್ ಲೈಟ್ ಕೆಲಸ ಮಾಡಲಿದೆ.
* ವೈರಸ್ ಎಸ್-ಪ್ರೋಟಿನ್ ವಿರುದ್ಧ ಇಮ್ಯೂನ್ ರೆಸ್ಪಾನ್ಸ್ ಡೆವಲಪ್ ಆಗಲಿದೆ.

Share This Article
Leave a Comment

Leave a Reply

Your email address will not be published. Required fields are marked *