ಮೊದಲ ಬಾರಿಗೆ ದೇಶದಲ್ಲಿ ‘ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌’ ಆಯೋಜನೆ: ಅನುರಾಗ್‌ ಠಾಕೂರ್‌

Public TV
2 Min Read

– ಡಿ.10 ರಿಂದ 17 ರವರೆಗೆ ನಡೆಯುತ್ತೆ ಈವೆಂಟ್‌

ನವದೆಹಲಿ: ಪ್ರತಿಭೆ ಗುರುತಿಸುವ, ಯುವ ಮತ್ತು ಮಹತ್ವಾಕಾಂಕ್ಷಿ ಪ್ಯಾರಾ-ಅಥ್ಲೀಟ್‌ಗಳಿಗೆ ಅವಕಾಶವನ್ನು ಸೃಷ್ಟಿಸುವ ದೂರದೃಷ್ಟಿ ಮೊದಲ ಬಾರಿಗೆ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ ( Khelo India Para Games) ಆಯೋಜಿಸಲಾಗುವುದು ಎಂದು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಘೋಷಿಸಿದ್ದಾರೆ.

ಡಿಸೆಂಬರ್ 10 ರಿಂದ 17 ರವರೆಗೆ ಮೊದಲ ಬಾರಿಗೆ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ನವದೆಹಲಿಯ ವಿವಿಧ ಸ್ಥಳಗಳಲ್ಲಿ ನಡೆಯಲಿದೆ ಎಂದು ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ಮೂರು ಕ್ರೀಡಾಂಗಣಗಳಲ್ಲಿ (ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) ಒಟ್ಟು 7 ವಿಭಾಗಗಳಲ್ಲಿ ಕ್ರೀಡೆ ಆಯೋಜಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಆಟಗಾರರಿಗೆ ನನ್ನ ಯಶಸ್ಸನ್ನು ಅರಗಿಸಿಕೊಳ್ಳಲಾಗುತ್ತಿಲ್ಲ – ಶಮಿ ತಿರುಗೇಟು

ದೇಶದಲ್ಲಿ ಪ್ಯಾರಾ-ಸ್ಪೋರ್ಟ್ಸ್ ಅನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಉದ್ದೇಶವಾಗಿದೆ. ಇದು ಪ್ರತಿಭಾವಂತ ಪ್ಯಾರಾ-ಅಥ್ಲೀಟ್‌ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಕ್ರೀಡಾಪಟುಗಳ ಕೌಶಲಗಳನ್ನು ವೃದ್ಧಿಸಲು ಇಂತಹ ಕ್ರೀಡೆಗಳು ಸಹಕಾರಿ ಎಂದು ಹೇಳಿದ್ದಾರೆ.

ಸೇವಾ ಕ್ರೀಡಾ ನಿಯಂತ್ರಣ ಮಂಡಳಿ ಸೇರಿದಂತೆ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 1,350 ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಚೊಚ್ಚಲ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದು ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಶೂಟಿಂಗ್, ಪ್ಯಾರಾ ಆರ್ಚರಿ ಸೇರಿದಂತೆ ಏಳು ವಿಭಾಗಗಳಲ್ಲಿ ಕ್ರೀಡಾಪಟುಗಳ ಪಾಲ್ಗೊಳ್ಳಲಿದ್ದಾರೆ. ಫುಟ್ಬಾಲ್, ಪ್ಯಾರಾ-ಬ್ಯಾಡ್ಮಿಂಟನ್, ಪ್ಯಾರಾ ಟೇಬಲ್ ಟೆನಿಸ್ ಮತ್ತು ಪ್ಯಾರಾ ವೇಟ್ ಲಿಫ್ಟಿಂಗ್ ಕೂಡ ಇರಲಿದೆ. IG ಸ್ಟೇಡಿಯಂ, ತುಘಲಕಾಬಾದ್‌ನ ಶೂಟಿಂಗ್ ರೇಂಜ್ ಮತ್ತು JLN ಸ್ಟೇಡಿಯಂಗಳಲ್ಲಿ ಸ್ಫೋರ್ಟ್ಸ್‌ ನಡೆಯಲಿವೆ. ಇದನ್ನೂ ಓದಿ: ಇಂದಿನಿಂದ ಭಾರತ-ಆಸೀಸ್‌ T20 ಸರಣಿ – ODI ನಲ್ಲಿ ಫ್ಲಾಪ್‌ ಆದ್ರೂ T20ಯಲ್ಲಿ ಅಬ್ಬರಿಸ್ತಾರಾ ಸೂರ್ಯ?

ಇತ್ತೀಚಿನ ಹ್ಯಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್ ತಾರೆಯರಾದ ಶೀತಲ್ ದೇವಿ, ಭಾವಿನಾ ಪಟೇಲ್, ಏಕ್ತಾ ಭಯ್, ನೀರಜ್ ಯಾದವ್, ಸಿಂಗ್‌ರಾಜ್, ಮನೀಶ್, ಸೋನಾಲ್, ರಾಕೇಶ್ ಕುಮಾರ್ ಮತ್ತು ಸರಿತಾ ಸೇರಿದಂತೆ ಇತರರು ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ನ ಮೊದಲ ಆವೃತ್ತಿಯಲ್ಲಿ ತಮ್ಮ ರಾಜ್ಯಗಳನ್ನು ಪ್ರತಿನಿಧಿಸುವ ನಿರೀಕ್ಷೆಯಿದೆ.

ಹ್ಯಾಂಗ್‌ಝೌನಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅಭೂತಪೂರ್ವ 111 ಪದಕಗಳನ್ನು ಗೆದ್ದ ಭಾರತೀಯ ಪ್ಯಾರಾ-ಅಥ್ಲೀಟ್‌ಗಳ ಸಾಧನೆ ಶ್ಲಾಘನೀಯ ಎಂದು ಸಚಿವರು ಬಣ್ಣಿಸಿದ್ದಾರೆ. ಪ್ಯಾರಾಲಿಂಪಿಕ್ ಕ್ರೀಡೆಯಲ್ಲಿ ಹೆಚ್ಚಿನ ಅಭಿವೃದ್ಧಿಯು ನಮ್ಮ ಪ್ರಮುಖ ಅಜೆಂಡಾವಾಗಿದೆ. ಮೊದಲ ಬಾರಿಗೆ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಆಯೋಜಿಸುತ್ತಿರುವುದು ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೃಷ್ಟಿಯ ಮತ್ತೊಂದು ದೊಡ್ಡ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಿ20-ಐಗೆ ರೋಹಿತ್ ಶರ್ಮಾ ನಿವೃತ್ತಿ? ಬಿಸಿಸಿಐ ಜೊತೆ ಚರ್ಚೆ

2018 ರಿಂದ ಒಟ್ಟು 11 ಖೇಲೋ ಇಂಡಿಯಾ ಗೇಮ್ಸ್ ಯಶಸ್ವಿಯಾಗಿ ನಡೆದಿವೆ. ಇವುಗಳ ಪೈಕಿ ಐದು ಖೇಲೋ ಇಂಡಿಯಾ ಯೂತ್ ಗೇಮ್ಸ್, ಮೂರು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಮತ್ತು ಮೂರು ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಸೇರಿವೆ. ಈ ಕ್ರೀಡಾಕೂಟಗಳು ದೇಶದಾದ್ಯಂತ ಪ್ರತಿಭೆಗಳನ್ನು ಗುರುತಿಸುವಲ್ಲಿ ಪ್ರಮುಖವಾಗಿವೆ. ಪ್ರತಿಷ್ಠಿತ ಬಹು-ಶಿಸ್ತಿನ ಈವೆಂಟ್‌ಗಳಲ್ಲಿ ಭಾರತದ ಪ್ರದರ್ಶನಕ್ಕೆ ಸಹಾಯ ಮಾಡಿವೆ ಎಂದು ಠಾಕೂರ್ ಬಣ್ಣಿಸಿದ್ದಾರೆ.

Share This Article