ಚಂದ್ರಯಾನ ಯಶಸ್ಸಿಗಾಗಿ ರುದ್ರಾಭಿಷೇಕ, ಮಹಾಮೃತ್ಯುಂಜಯ ಹೋಮ – ಶ್ರೀಶೈಲ ಜಗದ್ಗುರುಗಳಿಂದಲೂ ಶುಭಹಾರೈಕೆ

Public TV
2 Min Read

ಚಿಕ್ಕೋಡಿ: ಚಂದ್ರಯಾನ-3 (Chandrayaan-3) ಯಶಸ್ವಿಯಾಗಿ‌ ಚಿಕ್ಕೋಡಿ (Chikkodi) ತಾಲೂಕಿನ ಯಡೂರ ಗ್ರಾಮದ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ಮಹಾಮೃತ್ಯುಂಜಯ ಹೋಮ, ಜಯಾದಿ ಹೋಮ ನೇರವರಿಸಲಾಯಿತು. ಮತ್ತೊಂದೆಡೆ ಶ್ರೀಶೈಲ ಜಗದ್ಗುರು 1008 ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳೂ ಶುಭಕೋರಿದರು.

ಶ್ರೀಶೈಲ್ ಜಗದ್ಗುರು 1008 ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ಮಾರ್ಗದರ್ಶನದಂತೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ‌ಯಡೂರ ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಸಿದ್ದಲಿಂಗೇಶ್ವರ ವೈದಿಕ ಪಾಠ ಶಾಲೆಯ ಪ್ರಾಚಾರ್ಯರಾದ ಶ್ರೀಶೈಲ್ ‌ಹಿರೇಮಠ ಹಾಗೂ ವೇದಮೂರ್ತಿ ಮಲ್ಲಯ್ಯ ಜಡೆ ನೇತೃತ್ವದಲ್ಲಿ ಹಾಗೂ ವೈದಿಕ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ದೇವಸ್ಥಾನದ ಸನ್ನಿದಾನದಲ್ಲಿ ರುದ್ರಾಭಿಷೇಕ, ಮಹಾಮೃತ್ಯುಂಜಯ ಹೋಮ,ಜಯಾದಿ ಹೋಮವು ಅತ್ಯಂತ ಭಕ್ತಿಭಾವದಿಂದ ಜರುಗಿತು.

ಈ ಕುರಿತು ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಮಾತನಾಡಿದ ಶ್ರೀಗಳು, ಇಂದು ಶ್ರೀಶೈಲ್ ಮಲ್ಲಿಕಾರ್ಜುನ ಜ್ಯೋತಿರ್ಲಿಂಗಕ್ಕೆ ವಿಶೇಷಪೂಜೆ,ವಿಶೇಷ ಮಂಗಳಾರತಿ‌ ನೇರವರಿಸಲಾಗುವುದು. ಭವ್ಯಭಾರತ ಆಶಾಕಿರಣವಾದ ಚಂದ್ರಯಾನ-3 ಚಂದ್ರನ ಮೇಲೆ ಇಳಿಯಲಿದೆ. ಚಂದ್ರಯಾನ-2ರಂತೆ ಕೊನೇ ಘಳಿಗೆಯಂತೆ ವಿಫಲವಾಗದೇ ಚಂದ್ರಯಾನ-3 ಯಶಸ್ವಿಯಾಗಲಿ. ಚಂದ್ರಯಾನ-3 ಚಂದ್ರನನ್ನ ತಲುಪಿ ನಮ್ಮ ವಿಜ್ಞಾನಿಗಳು ಹೊಸ ಹೊಸ ಸಂಶೋಧನೆ ಮಾಡಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: Chandrayaan-3: ಬಾಹ್ಯಾಕಾಶ ಯೋಜನೆಗಳಿಗೆ ನೂರಾರು ಕೋಟಿ ವ್ಯಯ – ಭಾರತಕ್ಕೇನು ಲಾಭ?

ಮತ್ತೊಂದೆಡೆ 108 ವೇದ ವಟುಗಳು ರುದ್ರ ಹಾಗೂ ಗಣ ಹೋಮ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹಿರೇಮಠದ ಯಾಗ ಶಾಲೆಯಲ್ಲಿ ಹೋಮ ಆಯೋಜನೆ ಮಾಡಲಾಗಿದ್ದು ಹುಕ್ಕೇರಿ ಹಿರೇಮಠದ 108 ವೇದ ವಟುಗಳಿಂದ ಚಂದ್ರಯಾನ ಯಶಸ್ವಿಗಾಗಿ ಹೋಮ ಹವನ ಮಾಡಲಾಯಿತು‌. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆದ ಹೋಮವನ್ನ ವೇದ ಗುರುವಾದ ಉದಯ ಶಾಸ್ತ್ರೀಗಳ ನೇತೃತ್ವದಲ್ಲಿ ನಡೆಸಲಾಯಿತು. ನಮ್ಮ ದೇಶದ ಧ್ವಜ ಹಿಡಿದು ಮಂತ್ರ ಪಠಣ ಹಾಗೂ ಹೋಮ ನೆರವೇರಿಸಿದ ವಟುಗಳು, ಗೋಮಾತೆಗೂ ಪೂಜೆ ಸಲ್ಲಿಸಿ ಚಂದ್ರಯಾನ ಯಶಸ್ವಿಗೆ ಪ್ರಾರ್ಥನೆ ಮಾಡಿದ್ದಾರೆ. ಇದನ್ನೂ ಓದಿ: 146 ಪ್ರಯತ್ನಗಳ ಪೈಕಿ 69 ಚಂದ್ರಯಾನಗಳು ಯಶಸ್ವಿ – ಸಾವಿರಾರು ಕೋಟಿ ಖರ್ಚು ಮಾಡುವ ಯೋಜನೆಯ ಪ್ರಮುಖ ಉದ್ದೇಶವೇನು?

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್