ಭೀಕರ ರಸ್ತೆ ಅಪಘಾತದಿಂದ ಮಗು ಸೇರಿ ಒಂದೇ ಕುಟುಂಬ 8 ಮಂದಿ ದಾರುಣ ಸಾವು

Public TV
1 Min Read

ಚಂಡೀಗಢ: ಭೀಕರ ರಸ್ತೆ ಅಪಘಾತದಲ್ಲಿ ಪುಟ್ಟ ಮಗು ಸೇರಿ 8 ಮಂದಿ ಮೃತಪಟ್ಟಿರುವ ಘಟನೆ ಹರಿಯಾಣದ ಜಜ್ಜರ್ ಜಿಲ್ಲೆಯ ಬಹದ್ದೂರ್ ಗಢ್ ನಲ್ಲಿ ನಡೆದಿದೆ.

ಈ ದುರಂತ ಕೆಎಂಪಿ ಎಕ್ಸ್ ಪ್ರೆಸ್ ವೇ ಹೈವೇಯಲ್ಲಿ ಸಂಭವಿಸಿದೆ. ಕಾರು ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ 8 ಮಂದಿ ದಾರುಣವಾಗಿ ಮೃತಪಟ್ಟರೆ ಓರ್ವ ಗಾಯಗೊಂಡಿದ್ದಾರೆ. ಕಾರಿನಲ್ಲಿ ಒಟ್ಟು 11 ಮಂದಿ ಇದ್ದು, ಉತ್ತರಪ್ರದೇಶದ ಕಡೆ ಪ್ರಯಾಣ ಬೆಳೆಸುತ್ತಿದ್ದರು. ಇದೀಗ ಕಾರಿನಲ್ಲಿದ್ದ 8 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಘಟನಾ ಸ್ಥಳಕ್ಕೆ ಬಹುದ್ದೂರ್ ಗಢ್ ಪೊಲೀಸರು ಭೇಟಿ ನೀಡಿ ಮೃತದೇಹಗಳ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಲದ್ಲಿ ಮತ್ತೊಂದು ಮಗು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಳಿಕ ಟ್ರಕ್ ಚಾಲಕ ಪರಾರಿಯಾಗಿದ್ದು, ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಯಾವೆಲ್ಲ ತಂಡಗಳು ಈವರೆಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿವೆ?

Share This Article
Leave a Comment

Leave a Reply

Your email address will not be published. Required fields are marked *