ಬಿಸಿಲ ಬೇಗೆಗೆ ಸ್ಪೆಷಲ್‌ ಮಸಾಲೆ ಮಜ್ಜಿಗೆ

Public TV
1 Min Read

ಬಿಸಿಲಿಗೆ ಏರಿದ್ದ ತಾಪವನ್ನು ತಣಿಸಿ ದೇಹವನ್ನು ಬಿಸಿಲಿನಲ್ಲಿಯೂ ಲವವಲಿಕೆಯಿಂದಿಡುವ ಜ್ಯೂಸ್ ಕುಡಿಯಬೇಕು ಎಂದು ಅಂದುಕೊಳ್ಳುವುದು ಸಹಜ. ಬೇಸಿಗೆ ಸಮಯದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಸ್ಪೆಷಲ್‌ ಮಸಾಲೆ ಮಜ್ಜಿಗೆ ಮಾಡಿ ಸವಿಯಿರಿ.

ಬೇಕಾಗುವ ಸಾಮಗ್ರಿಗಳು:
* ಪುದೀನಾ ಎಲೆಗಳು- 1 ಕಪ್
* ಮೊಸರು- ಅರ್ಧ ಕಪ್
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಹಸಿಮೆಣಸು – 2
* ಕಾಳುಮೆಣಸಿನ ಪುಡಿ – ಅರ್ಧ ಚಮಚ
* ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
* ಪುದೀನಾ, ಕೊತ್ತಂಬರಿ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ರುಬ್ಬಿಟ್ಟುಕೊಳ್ಳಬೇಕು. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

* ಮೊಸರು, ಹಸಿಮೆಣಸು, ಕಾಳುಮೆಣಸಿನ ಪುಡಿ, ಉಪ್ಪು ಸೇರಿಸಿ. ನಂತರ ಅರ್ಧ ಕಪ್ ನೀರು ಮಿಶ್ರಣ ಮಾಡಬೇಕು.

* ಈ ಮಿಶ್ರಣವನ್ನು ಈಗ ಟೀ ಸೋಸುವ ಸೋಸುಕ ಬಳಸಿ ಸೋಸಿ.

* ನಂತರ ಒಂದು ಗ್ಲಾಸ್‍ಗೆ ತಯಾರಿಸಿದ ಜೂಸ್, ಐಸ್ ತುಂಡುಗಳನ್ನು ಸೇರಿಸಿದರೆ ರುಚಿಯಾದ ಮಸಾಲೆ ಮಜ್ಜಿಗೆ ಸಿದ್ಧವಾಗುತ್ತದೆ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

Share This Article
Leave a Comment

Leave a Reply

Your email address will not be published. Required fields are marked *