ಅಮೆರಿಕದಲ್ಲಿ ಸಿಗುತ್ತೆ ವಿಶೇಷ ದೀಪಿಕಾ ದೋಸೆ!

Public TV
1 Min Read

ಮುಂಬೈ: ಅಮೆರಿಕದ ರೆಸ್ಟೋರೆಂಟ್ ಒಂದು ದೋಸೆಗೆ `ದೀಪಿಕಾ ದೋಸೆ’ ಎಂದು ಹೆಸರಿಟ್ಟ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮೆರಿಕದ ಟೆಕ್ಸಾಸ್ ರೆಸ್ಟೋರೆಂಟ್ ಒಂದು ದೋಸೆಗೆ ದೀಪಿಕಾ ಪಡುಕೋಣೆ ದೋಸೆ ಎಂದು ಹೆಸರಿಟ್ಟಿದೆ. ದೀಪಿಕಾ ಪಡುಕೋಣೆ ಅಭಿಮಾನಿಯೊಬ್ಬರು ಆ ರೆಸ್ಟೋರೆಂಟ್‍ನ ಮೆನು ಕಾರ್ಡ್‍ನ ಫೋಟೋ ತೆಗೆದು ಅದನ್ನು ಟ್ವೀಟ್ ಮಾಡಿದ್ದಾರೆ. ದೀಪಿಕಾ ಈ ಟ್ವೀಟ್‍ಗೆ ಪ್ರತಿಕ್ರಿಯಿಸಿ, “ವರ್ಷ ಪ್ರಾರಂಭಿಸಲು ಇದು ಸಾಕು. ಹ್ಯಾಪಿ ನ್ಯೂ ಇಯರ್” ಎಂದು ಟೈಪಿಸಿ ರೀ- ಟ್ವೀಟ್ ಮಾಡಿದ್ದಾರೆ.

https://twitter.com/deepikapadukone/status/1080180850631749637?ref_src=twsrc%5Etfw%7Ctwcamp%5Etweetembed%7Ctwterm%5E1080180850631749637&ref_url=https%3A%2F%2Fwww.hindustantimes.com%2Fbollywood%2Fthere-s-a-dosa-named-after-deepika-padukone-and-husband-ranveer-singh-has-a-spicy-comeback%2Fstory-GMjhpDBvGs1fUzy7vMEF4J.html

ಈ ವಿಚಾರ ತಿಳಿದ ಮತ್ತೊಬ್ಬ ಅಭಿಮಾನಿ, “ಪುಣೆಯಲ್ಲಿ ನೀವು ಪರಾಟಾ ಥಾಲಿ ಆಗಿದ್ದೀರಿ” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ದೀಪಿಕಾ ನಗುವ ಎಮೋಜಿ ಹಾಕಿ ರೀ-ಟ್ವೀಟ್ ಮಾಡಿದ್ದಾರೆ.

https://twitter.com/deepikapadukone/status/1080311208824123394

ಇದೇ ವೇಳೆ ದೀಪಿಕಾ ಪತಿ, ನಟ ರಣ್‍ವೀರ್ ಸಿಂಗ್ ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ದೀಪಿಕಾ ಪಡುಕೋಣೆ ದೋಸೆ ಎಂದು ಮೆನು ಇರುವ ಫೋಟೋ ಹಾಕಿ, “ಈಗ ನಾನು ಇದನ್ನು ತಿನ್ನುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಬಾಲಿವುಡ್ ಹಾಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ನವೆಂಬರ್ ತಿಂಗಳಿನಲ್ಲಿ ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದರು. ಈಗ ಈ ಜೋಡಿ ಹನಿಮೂನ್‍ಗೆ ಹೋಗಿದೆ.

ಮದುವೆ ನಂತರ ದೀಪಿಕಾ ಹಾಗೂ ರಣ್‍ವೀರ್ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರಿಂದ ಅವರು ತಮ್ಮ ಹನಿಮೂನ್‍ಗೂ ಕೂಡ ಪ್ಲಾನ್ ಮಾಡಿರಲಿಲ್ಲ. ಈಗ ದೀಪ್‍ವೀರ್ ತಮ್ಮ ಹನಿಮೂನ್‍ಗೆ ಹೋಗಿದ್ದು, ಯಾವ ದೇಶಕ್ಕೆ ಹೋಗಿದ್ದಾರೆ ಎನ್ನುವ ಎಂಬ ಮಾಹಿತಿ ದೊರೆತಿಲ್ಲ.

ರಣ್‍ವೀರ್ ಹಾಗೂ ದೀಪಿಕಾ ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಕೊಂಕಣಿ ಸಂಪ್ರದಾಯ ಹಾಗೂ ಹಾಗೂ ನವೆಂಬರ್ 15ರಂದು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಬೆಂಗಳೂರಿನಲ್ಲಿ ಒಂದು ಬಾರಿ ಹಾಗೂ ಮುಂಬೈನಲ್ಲಿ ಎರಡೂ ಬಾರಿ ಈ ಜೋಡಿ ಅದ್ಧೂರಿಯಾಗಿ ಆರತಕ್ಷತೆಯನ್ನು ಮಾಡಿಕೊಂಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *