ಹಾಯ್ ತೇಜಸ್ವಿ..!
ಪ್ರೀತಿ ಬಗ್ಗೆ ತುಂಬಾ ಬರಿತಿಯಾ ತೇಜಸ್ವಿ.. ನಿನ್ನ ಪ್ರತಿ ಪತ್ರವೂ ಒಂದು ಪ್ರೇಮ ಕಾವ್ಯದ ಥರನೇ ಇರುತ್ತೆ.. ಆದ್ರೆ ಪ್ರೇಮ ಅಂದ್ರೆ ನನ್ನನ್ನ ಹೊಗಳೋದು ಮಾತ್ರಾನಾ? ಅಥವಾ ನಿನ್ನ ಪ್ರೇಮವನ್ನ ವೈಭವೀಕರಿಸೋದು ಮಾತ್ರನಾ? ಅದರಾಚೆಗೂ ಒಂದು ಬದುಕಿದೆ. ಅದು ತನ್ನೆಲ್ಲಾ ಸಾಕಾರತಗೆ ಬೇರೇನೋ ಕೇಳುತ್ತೆ.. ಅದು ನಿನ್ನ ಪ್ರೇಮದ ತ್ಯಾಗವೂ ಆಗಿರಬಹುದು? ಅಂಥಹ ಸಾಧನೆಗೆ ನೀನ್ಯಾಕೆ ಮನಸ್ಸು ಮಾಡ್ತಿಲ್ಲ?
ನೀನು ಹೇಳಿದ ಹಾಗೆ ʻನಾ ನಿನಗೆ ನೀ ನನಗೆʼ ಎಂಬ ಕರಾರಿಗೆ ನನ್ನ ಸಹಿ ಹಾಕಿಬಿಡ್ಲಾ? ನಿನಗಿಂತ ಒಂದೊಳ್ಳೆ ಅವಕಾಶ ಬಂದ್ರೆ ಆಯ್ಕೆ ಮಾಡ್ಕೋಳ್ಲಾ? ಇದಕ್ಕೆ ನಿನ್ನ ಹತ್ರ ಉತ್ತರ ಇದಿಯಾ? ಒಂದು ಕಡೆ ನನ್ನ ಕನಸುಗಳು.. ಇನ್ನೊಂದು ಕಡೆ ನಾನು ಹಂಬಲಿಸುವ ವ್ಯಕ್ತಿ, ಅದೆಲ್ಲವನ್ನೂ ಸಾಕಾರಗೊಳಿಸುವ ಅವಕಾಶ.. ಯಾಕೆ ನನಗೂ ಹಂಬಲ ಇರಬಾರದು? ನಿನಗೂ ನನಗಿಂತ ಉತ್ತಮ ಅವಕಾಶ ಸಿಕ್ರೆ ಸುಮ್ನಿರ್ತಿಯಾ? ಇದನ್ನೂ ಓದಿ: ದೂರಾದ ರಾಧಾಕೃಷ್ಣರನ್ನು ಜಗತ್ತು ಪ್ರೇಮದಿಂದಲೇ ಗುರುತಿಸೋದು!

ಹಾಗೇನಾದ್ರೂ ಆದ್ರೆ ಈ ಪ್ರೇಮದ ಅಮಲಿನಿಂದ ನೀನು ಹೊರಗೆ ಬರ್ತಿಯಾ ಅಂದ್ಕೋತಿನಿ? ಒಮ್ಮೆ ಯೋಚನೆ ಮಾಡು ನನ್ನ ಬಗ್ಗೆ ಇರೋ ಪ್ರೀತಿ ನಿನ್ನ ಮೇಲೆ ನಿನಗೂ ಇರಬೇಕು. ಒಂದು ಕಡೆ ನಿನ್ನ ಆಸೆ.. ಒಂದು ಕಡೆ ಪ್ರೀತಿಯನ್ನ ತಕ್ಕಡಿಯಲ್ಲಿ ಇರಸಿದ್ರೆ.. ಅದು ಸಮಾನವಾಗಿ ತೂಗಬೇಕು. ಇನ್ನೂ ಒಂದು ವಿಚಾರ.. ನಮ್ಮ ಪ್ರೀತಿಯನ್ನ ನಮ್ಮ ಕುಟುಂಬ ಆಗಲಿ, ನಿಮ್ಮ ಕುಟುಂಬ ಆಗಲಿ ಒಪ್ಪಲೇ ಬೇಕು ಎನ್ನುವ ಕರಾರು ಏನಿದೆ? ಅದಕ್ಕಾಗಿ ನಿನ್ನದಾಗಲಿ, ನನ್ನದಾಗಲಿ ತಯಾರಿ ಏನಿದೆ ತೇಜಸ್ವಿ? ಇದನ್ನೂ ಓದಿ: ಅವಳ ಮೂಗಿನ ತುದಿ ಕೋಪ ನಂಗಿಷ್ಟ!
ಇನ್ನೂ ವಯಸ್ಸು ನಿಲ್ಲೋದಿಲ್ಲ.. ಈಗಾಗಲೇ ಇಂಜಿನಿಯರ್ ಒಬ್ಬ ನಮ್ಮ ಮನೆಯಲ್ಲಿ ವಿಚಾರಿಸಿದ್ದಾನಂತೆ.. ಈ ವರ್ಷ ಮದುವೆ ಮಾಡ್ತಾರಂತಾ ಅಂತ? ನನಗೂ ಅವನ ಐಶ್ವರ್ಯದ ಕಡೆ ಮನಸ್ಸೇಕೆ ಜಾರಬಾರುದು? ಇನ್ನೂ ಪ್ರೀತಿಯ ಹೆಸರಲ್ಲಿ ದಿನದೂಡದೇ ಈಗ ಇರೋ ಕೆಲಸಕ್ಕಿಂತ ಇನ್ನೂ ಒಂದೊಳ್ಳೆ ಕೆಲಸಕ್ಕೆ ಯಾಕೆ ಸೇರಬಾರದು? ಈಗ ಇರೋದಕ್ಕಿಂತ ಹೆಚ್ಚು ದುಡ್ಡು ಮಾಡಬಾರದು..? ಈಗ ಇದ್ದಂತೆ ಇದ್ರೆ ʻನನಗೆ ನೀನಿರುವಂತೆ ನಿನ್ನನ್ನು ಒಪ್ಪಿಕೊಳ್ಳೋದುʼ ಅಷ್ಟು ಸುಲಭ ಅಲ್ಲ.. ನಿನಗೆ ಅನ್ನಿಸಬಹುದು ಈಗಿಲ್ಲದ ಪ್ರೇಮ ಕೈತುಂಬಾ ಸಂಬಳ ಬರುವಾಗ ಬಂದುಬಿಡತ್ತಾ ಅಂತ.. ನಾನು ಅದಕ್ಕೆಲ್ಲ ಉತ್ತರಿಸಲ್ಲ..! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?

ಈ ನನ್ನ ಆಲೋಚನೆ ಪ್ರೇಮದ್ದೇ ತೇಜಸ್ವಿ.. ಇದು ಪ್ರೇಮದ ಆಚೆಯ ಬದುಕಿನದ್ದೂ ಹೌದು! ಹಾಗಂತ ಧಿಡಿರ್ ಆಂತ ಏನೋ ಮಾಡಿ ನನ್ನನ್ನ ಉಳಿಸಿಕೊಳ್ಳೋ ಪ್ರಯತ್ನ ಬೇಡ.. ನನ್ನ ನಸೀಬಲ್ಲಿ ನೀನಿದ್ರೆ, ನನಗೆ ಖಂಡಿತಾ ಸಿಕ್ಕೇ ಸಿಗ್ತೀಯಾ. ಮುಂದೆ ಇದೆಲ್ಲ ಮ್ಯಾಟ್ರ್ ಆಗುತ್ತೆ.. ಆಗ ಪ್ರೀತಿ ಅನ್ನೋದು ಒಂದು ಸಮಸ್ಯೆಯೇ ಆಗಿ ನಿನಗೆ ಕಾಡಬಹುದು? ಯೊಚನೆ ಮಾಡು. ಇದನ್ನೂ ಓದಿ:ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
ನಮ್ಮ ಕುಟುಂಬ, ಆರ್ಥಿಕ ಪರಿಸ್ಥಿತಿ, ಸ್ನೇಹಿತರು ಇದೆಲ್ಲದರ ಮಧ್ಯೆ ಎದ್ದು ಬರುವ ಬಿರುಗಾಳಿ, ಅಬ್ಬರದ ಅಲೆಗಳಿಗೆ ನಮ್ಮ ಪ್ರೇಮದ ನೌಕೆ ಮುಳುಗಬಾರದು ಅಲ್ವಾ..? ನಿನ್ನ ನಿರೀಕ್ಷೆಯಂತೆ ನನ್ನ ನೋಡ್ಕೋತಿಯಾ? ಅಥವಾ ನನ್ನ ನಿರೀಕ್ಷೆತಯಂತೆ ನಾನು ನಿನ್ನ ಜೊತೆ ಬದುಕ್ತಿನಾ? ಇದೆಲ್ಲ ಪ್ರಶ್ನೆ ಪ್ರೇಮದಲ್ಲಿ ಚರ್ಚೆ ಆಗ್ಬೇಕಲ್ವಾ?
ನೀನೇ ನನ್ನ ಗೌರವ, ನನ್ನ ಅಂತಸ್ತು ಅಂತ ಬರೆದ ನಿನ್ನ ಸಾಲುಗಳಿಂದ ಹೊಟ್ಟೆ ತುಂಬತ್ತಾ..? ನಿನಗೋ ನನಗೋ ಒಂದು ಅಮಲು ಏರಬಹುದು ಅಷ್ಟೇ.. ಅಥವಾ ಆ ಸಾಲು ನಿನ್ನಂಥವರಿಗೆ ʻತೇಜಸ್ವಿಯ ಪ್ರೇಮ ಗ್ರೇಟ್ ಅನ್ನೋ ಫೀಲ್‌ನ ಕೊಡಬಹುದು.. ಅದನ್ನ ಬದುಕು ಸ್ವೀಕರಿಸುತ್ತಾ?
ಇದೆಲ್ಲ ವಾಸ್ತವದ ಪ್ರೇಮ ತೇಜಸ್ವಿ… ಇಲ್ಲಿ ನಕ್ಷತ್ರಗಳ್ನ ತಂದು ಜಡೆಗೆ ಅಲಂಕರಿಸೋದು.. ಕವಿತೆಲಿ ಹಾಡಿ ಹೊಗಳೋದು ಇರಲ್ಲ.. ನನ್ನದು ಬದುಕು..! ಆ ಬದುಕಿಗೆ ನಿನ್ನನ್ನು ಸೇರಿಸೋ ರೀತಿ ಇದು..! ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!

