ಹೃದಯದಂಗಳಕೆ ಒಲವ ರಂಗೋಲಿ ನೀನು..!

2 Min Read

ಹಾಯ್‌ ರಂಜು.. ಆಗಿದ್ದಾಗಲಿ.. ಇವತ್ತು ನಿಂಗೆ ಪ್ರಪೋಸ್‌ (Propose) ಮಾಡ್ಲೇ ಬೇಕು ಅಂತ ನಿರ್ಧಾರ ಮಾಡಿದ್ದೆ. ಎಷ್ಟು ದಿನ ಅಂತ ನಿನ್ನನ್ನ ಮನಸ್ಸಲ್ಲಿ ತುಂಬಿಕೊಂಡು ಕನಸಿನ ಗಾಳಿ ಗೋಪುರ ಕಟ್ಟಲಿ.. ಅದಕ್ಕೆ ಫೈನಲ್‌ ಆಗಿ ಈ ನಿರ್ಧಾರಕ್ಕೆ ಬಂದೆ.

ಅದ್ಯಾಕೋ ಗೊತ್ತಿಲ್ಲ ರಂಜು… ನೀನು ಮೊದಲನೇ ನೋಟದಲ್ಲಿ ಇಷ್ಟ ಆಗ್ಬಿಟ್ಟೆ.. ಅವತ್ತು ನಮ್ಮ ಫಸ್ಟ್‌ ಪಿಯುಸಿ ಮೊದಲನೇ ದಿನ. ನೀನು ಮೊದಲನೇ ಬೆಂಚ್‌ಲ್ಲಿ ಕೂತಿದ್ದೆ.. ಸುಮಾರು 60 ಜನ ಇದ್ರೂ ನಾನು ಎಂಟ್ರಿ ಕೊಟ್ಟಾಗ ನನ್ನ ಕಣ್ಣಿಗೆ ಕಂಡಿದ್ದು ನೀನು ಮಾತ್ರ.. ನಿನ್ನ ನಗು ಮಾತ್ರ..! ಅದೆಷ್ಟು ಚೆಂದ ನಗಾಡ್ತಿಯಾ.. ಅದೆಲ್ಲಿ ಕಲಿತೆ ಅಂತ ಕೇಳ್ಬೇಕು ಅನ್ನಿಸ್ಬಿಟ್ಟಿತ್ತು ಅವತ್ತು.. ಆದ್ರೆ ಮೊದಲನೇ ಭೇಟಿಯಲ್ಲೇ ಇದೆಲ್ಲ ಬೇಕಾ ಅಂತ ಸುಮ್ನಾದೆ. ಇದನ್ನೂ ಓದಿ: ಇದಕ್ಕೆಲ್ಲ ಯಾವ ಸಂಬಂಧದ ಹೆಸರಿಡ್ಬೇಡ ಪ್ಲೀಸ್‌!

ನಿನ್ನನ್ನ ನೋಡಿದಾಗ ಆ ಕ್ಷಣಕ್ಕೆ ನನಗೆ ಅನ್ಸಿದ್ದು ನನ್ನ ಲೈಫ್‌ ಪಾರ್ಟ್ನರ್‌ ಅಂತ ಆದ್ರೆ ಇವಳೇ ಆಗಿರಬೇಕು ದೇವ್ರೇ ಅಂದ್ಕೊಂಡಿದ್ದೆ.. ಆಗ ನೀನಿನ್ನೂ ಅಪರಿಚಿತೆ.. ನಿನ್ನ ಬಗ್ಗೆ ನನಗೇನೂ ಗೊತ್ತಿರಲಿಲ್ಲ.. ನಿನಗೂ ಅಷ್ಟೇ.. ಆದ್ರೂ ಸುಮಾರು 3-4 ನಿಮಿಷ ಒಬ್ಬರನ್ನೊಬ್ಬರು ಅದೆಷ್ಟು ದಿಟ್ಟಿಸಿ ನೋಡಿದ್ವಿ ಗೊತ್ತಾ? ನಿನಗೂ ನೆನಪಿರುತ್ತೆ..!

ಆ ದಿನ ಕ್ಲಾಸ್‌ ಮುಗಿಸಿ ಬಂದವನೂ ಮೂರು ಕಲ್ಲು ತಗೊಂಡು, ಒಂದು ಕರೆಂಟ್‌ ಕಂಬಕ್ಕೆ ಟಾರ್ಗೆಟ್‌ ಮಾಡಿ ಹೊಡೆದಿದ್ದೆ.. ಅದ್ರಲ್ಲಿ ಮೂರು ಬಿದ್ರೆ ನನ್ನ ಲವ್‌ (Love) ಸಕ್ಸಸ್‌ ಆಗುತ್ತೆ.. ಇಲ್ದಿದ್ರೆ ಇಲ್ಲ ಅಂತ.. ಯಾರೋ ಅಪರಿಚಿತರೂ 3 ಎಣಿಸೋದ್ರೊಳಗೆ ನನ್ನ ಕಡೆ ತಿರುಗಿದ್ರೆ ನೀನು ನನಗೆ ಸಿಕ್ಕಿ ಬಿಡ್ತೀಯಾ ಅಂತ ನನ್ನ ಮನಸ್ಸು.. ಹೃದಯದ ಜೊತೆ ಚಾಲೆಂಜ್‌ ಮಾಡ್ತಿತ್ತು.. ಆಗೆಲ್ಲ ಗೆದ್ದಿತ್ತು ಹೃದಯ..! ಈಗ ನಿನ್ನ ಮುಂದೆ ಅದೆಲ್ಲ ಬೇಡಿಕೆ ಇಡ್ಬೇಕು ಅಂತ ಆಸೆ..

ನಿಂಗೊತ್ತಾ ಅವತ್ತೇ ನಾನು ಮೊದಲನೇ ಕವಿತೆ (Poem) ಬರೆದಿದ್ದು.. ನೀನವತ್ತು ನಿನ್ನಿಷ್ಟದ ಬಣ್ಣದ್ದೇ ಪರ್ಪಲ್‌ ಚೂಡಿ ಹಾಕಿದ್ದೆ.. ನನಗೂ ಆ ಡ್ರೆಸ್‌ ತುಂಬಾ ಇಷ್ಟ ಆಗಿತ್ತು.. ಆ ನವಿಲಿನ ಬಣ್ಣದಲ್ಲಿ ನಿನ್ನನ್ನ ನೋಡಿ.. ʻಮಾಯಾ ಮಯೂರಿʼ ಅಂದಿದ್ದೆ ನೆನಪಿತ್ತಾ..? ಹೀಗೆ ದಿನ ನಿನ್ನನ್ನ ನೂರೆಂಟು ಇಂತಹ ತುಂಟ ಹೆಸರಲ್ಲಿ ಕರೆಯಬೇಕು ಅಂತ ಆಸೆ ನನಗೆ.. ಆ ಪರ್ಮಿಷನ್‌ ಕೇಳ್ಬೇಕು ಅಂತಾನೇ ಈ ಅರ್ಜಿ ..!

ಅರ್ಜಿ ಹಾಕೋದು ನನ್ನ ಪಾಲಿಗೆ ಬಂದಿದ್ದು.. ಅದನ್ನ ಪುರಸ್ಕರಿಸೋದು ಬಿಡೋದು ನಿನಗೆ ಬಿಟ್ಟಿದ್ದು.. ನನಗೆ ತುಂಬಾ ಓವರ್‌ ಕಾನ್ಫಿಡೆನ್ಸ್‌.. ಅರ್ಜಿ ತಿರಸ್ಕಾರಗೊಳ್ಳಲ್ಲ ಅಂತ..! ಬಹುಶಃ ಎಲ್ಲಾ ಪ್ರೇಮಿಗಳ (Lovers) ಪಾಡು ಇದೇ ಆಗಿರಬಹುದು? ಆದ್ರೆ ನನ್ನ ಪಾಲಿಗೆ ನಿನೊಂಥರ ವಿಶೇಷವೇ..! ಆ ಕಾಲೇಜಲ್ಲಿ ಬೇರೆಯವರು ಇದ್ರೂ.. ಯಾಕೆ ನನ್ನ ಕಣ್ಣು ಅವರ ಮೇಲೆ ಬೀಳಲಿಲ್ಲ? ನಿನಗೂ ಇದೇ ಕಲ್ಪನೆಗಳು ಮೂಡಿರುತ್ತೆ ಅನ್ನೋ ಬಲವಾದ ನಂಬಿಕೆಯೇ ಈ ಸಾಲುಗಳ ಜೀವಾಳ..! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?

ಈ ಪ್ರೇಮದ ರಂಗೋಲಿಗೆ (Rangoli) ಚುಕ್ಕಿ ಇಟ್ಟಿದ್ದೇನೆ.. ಮತ್ತೆ ಚುಕ್ಕಿಗಳಿಗೆ ಗೆರೆಗಳನ್ನ ಜೋಡಿಸಿ.. ಸಂಬಂಧದ ಸುಂದರವಾದ ಅಂಗಳದಲ್ಲಿ ಚಿತ್ರ ಬಿಡಿಸೋದಕ್ಕೆ ಹೃದಯವನ್ನ ನಿನಗೊಪ್ಪಿಸಿದ್ದೇನೆ… ನನ್ನ ಮೊದಲ ಕಾನ್ವರ್ಸೇಷನ್‌.. ನಿನ್ನ ಜೊತೆ.. ಅದು ಈ ಅಕ್ಷರಗಳಲ್ಲಿ.. ಸದಾ ನಿನ್ನ ಅಕ್ಕರೆಯ ಒಲವಿಗಾಗಿ ಹಂಬಲಿಸುವ…

– ಗೋಪಾಲಕೃಷ್ಣ

Share This Article