ಪ್ರೇಮದೂರಿಗೆ ನೀನೇ ದಾರಿ ತೋರಿಸಬೇಕು!

1 Min Read

ಹಾಯ್‌ ಮೈ ಡಿಯರ್‌ ಬೆಸ್ಟ್‌ ಫ್ರೆಂಡ್‌.. ನೀನ್ಯಾಕೆ ನನ್ನ ಕಣ್ಣಿಗೆ ಬಿದ್ದೆ…? ನಮ್‌ ಏರಿಯಾದಲ್ಲಿ ಅದೆಷ್ಟೋ ಹುಡುಗಿಯರಿದ್ರೂ ನನಗೆ ಇಷ್ಟ ಆಗಿದ್ದು ನಿನ್ನೊಬ್ಬಳ ನಗು. ಅದೆಷ್ಟು ಚೆನ್ನಾಗಿ ನಗಾಡ್ತಿಯಾ ನೀನು. ಸಾಧ್ಯನೇ ಆಗ್ತಿಲ್ಲ ನಿನ್ನಿಂದ ತಪ್ಪಿಸಿಕೊಂಡು ಹೋಗೋಕೆ. ನನ್ನನ್ನ ಅದೆಷ್ಟು ಬಿಗಿಯಾಗಿ ಸೆರೆಹಿಡಿದಿದಿಯಾ ನೀನು.

ನಿನಗೆ ನಾನ್‌ ಏನೋ ಹೇಳ್ಬೇಕಿತ್ತು.. ಆದ್ರೆ ಹೇಗೆ ಹೇಳೋದು ಅಂತಾನೆ ಗೊತ್ತಾಗ್ತಿಲ್ಲ. ಎಲ್ಲಾ ವಿಚಾರಗಳನ್ನೂ ಪಟಪಟ ಅಂತ ಮಾತಾಡೋ ನಮಗೆ, ಇದೊಂದು ವಿಚಾರ ಯಾಕಿಷ್ಟು ಕಾಡೋದು..? ಬಹುಶಃ ನಿನಗೂ ಹೀಗೆನಾ ಅಂತ..? ಆದ್ರೂ ಇವತ್ತೆಲ್ಲ ನಿನಗೆ ಹೇಳ್ತಿನಿ. ಇದನ್ನೂ ಓದಿ: ಹೂ ಅರಳೋಕೆ ಶುಭ ಅಶುಭಗಳ ಮುಹೂರ್ತವೇ ಇಲ್ಲ..!

ಈಗೀಗ ನೀನು ಮುಟ್ಟಿದ ವಸ್ತು.. ನೀನು ಓಡಾಡಿದ ಜಾಗ ಎಲ್ಲಾ ನನ್ನ ಜೀವದ ಭಾಗವೇ ಆಗ್ಬಿಟ್ಟಿದ್ದಾವೆ.. ನಿನ್ನ ಬರ್ತಡೇಗೆ ನೀನು ಕೊಟ್ಟ ಚಾಕ್ಲೆಟ್‌ ಕವರ್‌ ಅದೆಷ್ಟು ಜೋಪಾನ ಮಾಡಿಟ್ಟಿದ್ದೇನೆ ಗೊತ್ತಾ..? ನಿನ್ನ ಹತ್ರ ಮಾತಾಡ್ಬೇಕು ಅನ್ನಿಸಿದಾಗಲೆಲ್ಲ ಅದರ ಜೊತೆ ಮೌನ ಸಂಭಾಷಣೆ. ಆಗೆಲ್ಲ ನನ್ನ ಮನಸ್ಸಿಗೆ ಏನೋ ಸಮಾಧಾನ. ಬಹುಶಃ ಪ್ರೀತಿ ಅಂದ್ರೆ ಹೀಗೆ ಸೀರಿಯಸ್‌ ತಮಾಷೆನಾ ಅಂತ ಒಮ್ಮೊಮ್ಮೆ ಅನುಮಾನ ಕೂಡ ಕಾಡುತ್ತೆ..!

ನಿನ್ನ ಜೊತೆ ಇನ್ನಷ್ಟು ಆಪ್ತವಾನಾಗಬೇಕು ಅಂತ ಆಸೆ.. ಅದೆಷ್ಟು ಅಂದ್ರೆ ನಿನ್ನ ಕಣ್ಗಳ ಕಡಲ ಆಳದಲ್ಲಿ ಇಳಿಯಬೇಕು.. ಆ ಪ್ರೇಮದ ಕಡಲಲ್ಲಿ ಅಡಗಿರೋ ನಿನ್ನ ತುಟಿ ಚಿಪ್ಪಲ್ಲಿ ಸಿಗೋ ಮುತ್ತುಗಳನ್ನು ಆರಿಸಿ ಪೋಣಿಸಿ ಒಲವನ್ನು ಅಲಂಕರಿಸಬೇಕು.. ಅದಕ್ಕೆಲ್ಲ ನೀನೇ ದಾರಿ ತೋರಿಸಬೇಕು.

ಆ ದಾರಿ ಗೊತ್ತಿಲ್ಲ ಅನ್ಬೇಡ ಮತ್ತೆ.. ನನ್ನ ಕಲ್ಲೆದೆಯಲ್ಲೂ ಪ್ರೇಮದ ಹುಲ್ಲು ಚಿಗುರಿಸಿದ ನಿನಗೆ ಆ ಪ್ರೇಮದೂರಿನ ದಾರಿ ಖಂಡಿತ ಗೊತ್ತು..! ಕರೆದ್ಕೊಂಡು ಹೋಗ್ತಿಯಾ ಅಲ್ಲಿಗೆ..? ನಿನ್ನ ಕೈಹಿಡಿದು ಸಾಗುವ ರಾಶಿ ರಾಶಿ ಆಸೆಗಳ ನಿರೀಕ್ಷೆ ಹೊತ್ತು ಕಾಯ್ತಾ ಇರ್ತಿನಿ. ಇದನ್ನೂ ಓದಿ: ನಿನ್ನ ಜಡೆಯಿಂದ ಜಾರಿದ ಪ್ರೇಮ ಪುಷ್ಪದ ಕಂಪು..!

-ಗೋಪಾಲಕೃಷ್ಣ

Share This Article