ಹಾಯ್ ಚಿನ್ನಪ್ಪ.. ನಿನ್ನ ಮೇಲೆ ಬರೆದು ಬಿಡಬಹುದಾದ ಅದೆಷ್ಟೋ ಸಾಲುಗಳನ್ನು ನನ್ನಲ್ಲೇ ಇಟ್ಕೊಂಡು ಉಳಿದು ಬಿಟ್ಟಿದ್ದೇನೆ.. ಬಹುಶಃ ಇದು ನಾನು ಬರೆಯುತ್ತಿರುವ ಕೊನೆಯ ಪತ್ರವೇನೋ..? ಹೀಗೆ ಹೇಳಿ ಮತ್ತೆ ಮತ್ತೆ ಬರೆಯುವ ಹುಚ್ಚು ಹಿಡಿಸಿದ್ದು ನೀನು.. ನಿನ್ನ ಮೇಲೆ ಒಂಚೂರು ಬೇರೆ ಯಾವ ಫೀಲಿಂಗ್ಸ್ ಇಲ್ಲ.. ಆದ್ರೂ ನೀನೊಂತರ ಸ್ಪೆಷಲ್..!
ನಿನ್ನ ಕುರುಚಲು ಗಡ್ಡದ ಮೇಲೆ ನನಗೆ ಏನೋ ಕ್ರಷ್..! ಅದ್ಯಾಕೆ.. ನೀನು ನನ್ನ ಫ್ರೆಂಡಾ.. ನೋ ವೇ ಚಾನ್ಸೇ ಇಲ್ಲ.. ನನ್ನ ಬದುಕಲ್ಲಿ ಏನೇ ಆದ್ರೂ ನಿನಗೆ ಮೊದಲು ಹೇಳ್ಬೇಕು.. ಅದು ದುಃಖ, ಸುಖ.. ಏನೇ ಆದ್ರೂ.. ಈ ಭಾವನೆಗೆ ಏನರ್ಥ..? ನನ್ನನ್ನ ನಿನ್ನ ಜೊತೆ ಹಿಡಿದಿರೋ ಈ ನಂಟಿನ ಅರ್ಥವಾದ್ರೂ ಏನು? ನಿನ್ನ ಧ್ವನಿ.. ನಿನ್ನ ಫೋಟೋ.. ನಿನ್ನ ನಗು ನನಗೆ ಏನೋ ಸಮಾಧಾನ ಕೊಡುತ್ತೆ.. ನಿನ್ನ ಧ್ವನಿಗೆ.. ಆ ಕೃಷ್ಣನ ಕೊಳಲಿಗೆ ಗೋಕುಲದ ದನ ಕರುಗಳೆಲ್ಲ ಮರುಳಾದಂತೆ ಮರುಳಾಗ್ಬೀಡ್ತಿನಿ..! ಇದನ್ನೂ ಓದಿ: ಅವತ್ತು ನೆಟ್ಟ ಪಾರಿಜಾತ ಗಿಡ ಹೂ ಬಿಟ್ಟಿದೆ ಗೋಪಾಲ…!
ನನಗೆ ನೀನು ಏನಾಗ್ಬೇಕು? ನೀನ್ಯಾರು? ಸುಮ್ನೇ ನೋಡೋರಿಗೆ ಫ್ರೆಂಡ್ ಆಗಿ… ಒಳಗೆ ಲವ್ ಹಾಗೆಲ್ಲ ಇಲ್ಲ… ಅಣ್ಣ ಅಂತ ಕರೆದು ಬಿಡ್ಲಾ.. ಅದಲ್ಲ ನೀನು..? ಹಾಗಾದ್ರೆ ಯಾರು ನಾವಿಬ್ರೂ.. ಬೆಸ್ಟಿ.. ಈ ಕಾನ್ಸೆಪ್ಟ್ ಚೆನ್ನಾಗಿಲ್ಲ ಕಣೋ.. ಇದಕ್ಕೆಲ್ಲ ಉತ್ತರಗಳು ಸಿಗಬಾರದು. ಹೀಗೆ ಕೊನೆವರೆಗೂ ನಾವಿಬ್ರು.. ಇದೇ ಗೊಂದಲದಲ್ಲಿ ಇರಬೇಕು.. ಅದೇ ಏನೋ ಚೆಂದ. ನಮ್ಮಲ್ಲಿ ಯಾವುದೇ ಕರಾರು ಇರಬಾರದು..! ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
ನನಗೆ ನೀನು ಆಕಸ್ಮಿಕವಾಗಿ ಸಿಗ್ಬೇಕು.. ದಿನ.. ಹಾಗೇ ಟೀ ಹೀರಬೇಕು.. ಒಂದಷ್ಟು ಹೊತ್ತು ಮಾತಾಡ್ಬೇಕು.. ನಾನು ಹೊರಡ್ಲಾ ಅಂತ ನೀನು ಕೇಳ್ಬಾರದು.. ನಾನು ಹೋಗ್ಲಾ ಅಂತ ನಾನು ಕೇಳಲ್ಲ.. ನೀನು ಮನೆಗೆ ಹೋಗ್ಬೇಕು.. ನಾನು ಮನೆಗೆ ಹೋಗ್ಬೇಕು.. ಮತ್ತೆ ಇಬ್ರಿಗೂ ನಾವು ನೆನಪಾಗಬಾರದು..! ಹಾಗಂತ ಕರಾರು ಮಾಡಿಕೊಂಡು ಸಿಗಬಾರದು… ನಿನಗೂ ಇದು ಅನ್ವಯ.. ಆದ್ರೆ ಎಲ್ಲಾ ನಾನು ಹೇಳಿದ ಹಾಗೇ ಆಗ್ಬೇಕು..! ನನ್ನ ಬರಹ ನಿನಗೊಂದು ಕಾರ್ಟೂನ್ ಅನ್ನಿಸ್ತಿದಿಯಾ.. ಅರ್ಥ ಇಲ್ಲದ್ದು.. ತಮಾಷೆ ಅಂತ..?
ಹಾಗೆಲ್ಲ ತಮಾಷೆ ಅಲ್ಲ.. ನಾನೇನು ಸಮರ್ಥನೆ ಕೊಡಲ್ಲ.. ಒಂದು ಸಂಬಂಧಕ್ಕೆ ಸಾವಿದೆ.. ನಮ್ಮಿಬ್ರಿಗೂ ಅದರಲ್ಲಿ ಸಿಕ್ಕು ನರಳೊ ಕಷ್ಟ ಇರಬಾರದು.. ನನಗೆ ನನ್ನ ಅಪ್ಪನನ್ನ ನೋಡಿದ ನೆನಪೇ ಇಲ್ಲ.. ಅಂಬೆಗಾಲಿಡುವಾಗಲೇ ಹೊರಟು ಹೋದ್ರಂತೆ.. ಅಮ್ಮ ಚಿಕ್ಕ ಅಂಗಡಿ ಮಾಡ್ಕೊಂಡು ಜೀವನ ಮಾಡ್ತಿದ್ರೂ.. ಒಂದು ದಿನ ಅದೇ ಅಂಗಡಿಯಲ್ಲಿ ಹಾವು ಕಚ್ಚಿತ್ತು.. ಮೊದಲಿಗೆ ಹಾವು ಕಾಣಿಸ್ಲೇ ಇಲ್ವಂತೆ.. ಇಲಿ ಅಂತ ನೆಗ್ಲೆಕ್ಟ್ ಮಾಡಿದ್ರೂ… ಆಮೇಲೆ ಆರೋಗ್ಯ ಸಮಸ್ಯೆ ಆಗಿ ಆಸ್ಪತ್ರೆಗೆ ಕರೆದುಕೊಂಡು ಬರೋ ಅಷ್ಟ್ರಲ್ಲೇ ಎಲ್ಲಾ ಮುಗಿದು ಹೋಯ್ತು… ಇನ್ನು ಅಕ್ಕ.. ನನ್ನ ಟಾಸ್ಕ್ ಮಾಸ್ಟರ್.. ಅವಳು ಹಾಗೆ ಕಾರಣವೇ ಹೇಳದೇ ಹೊರಟು ಹೋಗ್ಬಿಟ್ಲು.. ನಾನು ಒಳ್ಳೆಯವಳಲ್ಲ ಅದಕ್ಕೆ ನನ್ನ ಜೊತೆ ಯಾರೂ ಇಲ್ಲ.. ನೀನು ಇರಬೇಡ..!
ಎದುರಿಗೆ ಸಿಕ್ಕಾಗ ಸ್ಮೈಲ್ ಮಾಡು.. ನಾನು ನಿನ್ನ ಮನಸ್ಸಲ್ಲೇ ತಬ್ಬಿ.. ಮುತ್ತಿಡ್ತೀನಿ… ನೀನು ನನ್ನ ಮೇಲೆ ಯಾವುದೇ ಭಾವನೆಗಳನ್ನೂ ಇಟ್ಕೋಬೇಡ.. ಇದಕ್ಕೆ ನಾನಂತ್ರೂ ಪ್ರೇಮ.. (Love) ಸ್ನೇಹ.. (Friendship) ಮತ್ತೊಂದು ಅಂತ ಹೆಸರು ಕೊಡಲ್ಲ.. ನೀನು ಕೊಡ್ಬೇಡ.. ಪ್ಲೀಸ್.. ಒಂದು ಟೀ ಕುಡಿದು.. ಜೊತೆಗೆ ಊಟ ಮಾಡಿ.. ಹೊರಡಲು ಪ್ರೇಮವೇ ಆಗಬೇಕಿಲ್ಲ.. ಹಾಗಂತ ನಿನ್ನನ್ನ ಯಾವ ರೀತಿಯಲ್ಲೂ ಕಳೆದ್ಕೊಳ್ಳೋಕೆ ಇಷ್ಟಪಡಲ್ಲ.. ನಿನ್ನನ್ನ ಪಡೆದುಕೊಳ್ಳೋದ್ಕು ಇಷ್ಟ ಇಲ್ಲ..! ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!
ನೋಡು ನನ್ನ ಪತ್ರ ಹೇಗೆ ಆರಂಭವಾಗಿ ಹೇಗೆ ಕೊನೆ ಆಯ್ತು.. ನನಗೆ ನಿಜವಾಗಿಯೂ ನಿನ್ನನ್ನು ಬಂಧಿಸಿ ಬಿಡುವ ಆಸೆ ಇದೆ.. ಆದ್ರೂ ನನ್ನ ಕೈಗಳು ನಿನ್ನನ್ನು ಬಂಧಿಸಿಬಿಡಲ್ಲ.. ಒಳಗೆ ಬಂದು ಬಿಡು ಅಂತ ಕರೆದುಬಿಡಲ್ಲ.. ನನ್ನ ಗೊಂದಲಗಳಿಗೆ ನಿನ್ನ ಬದುಕು ಛಿದ್ರವಾದರೆ ನಾನಂತೂ ಹೊಣೆಯಲ್ಲ.. ಆದ್ರೂ ಆಸೆ ಇದೆ.. ನಿನ್ನ ಜೊತೆ ಸ್ವಲ್ಪ ದೂರ ನಡೆಯಬೇಕು ಅಂತ.. ನಾನೇ ಮಾಡಿದ ಊಟ ನಿನಗೆ ಕೈಯ್ಯಾರೆ ಬಡಿಸಬೇಕು ಅಂತ… ಇದಕ್ಕೆಲ್ಲ ಯಾವ ಸಂಬಂಧದ ಹೆಸರಿಡ್ಬೇಡ ಪ್ಲೀಸ್! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?



