ದ್ರಾವಿಡ್ ಫೋನ್ ಕಾಲ್ ರಹಸ್ಯ ಬಿಚ್ಚಿಟ್ಟ ಹನುಮ ವಿಹಾರಿ

Public TV
1 Min Read

ಲಂಡನ್: ಓವೆಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಯುವ ಆಟಗಾರ ಹನುಮ ವಿಹಾರಿ (56 ರನ್, 124 ಎಸೆತ, 7 ಬೌಂಡರಿ, 1 ಸಿಕ್ಸ್) ತಮ್ಮ ಮೊದಲ ಅರ್ಧ ಶತಕದ ಹಿಂದೆ ರಾಹುಲ್ ರ ಒಂದು ಫೋನ್ ಕಾಲ್ ಸಾಕಷ್ಟು ಪ್ರಭಾವ ಬೀರಿದ್ದು, ನನ್ನಲ್ಲಿ ಶಕ್ತಿ ತುಂಬಿತ್ತು ಎಂದು ಹೇಳಿದ್ದಾರೆ.

ಓವೆಲ್ ಟೆಸ್ಟ್ ನ 3ನೇ ದಿನದಾಟದ ವೇಳೆ ಟೀಂ ಇಂಡಿಯಾವನ್ನು ಭಾರೀ ಅಂತರದ ಹಿನ್ನಡೆಯಿಂದ ತಪ್ಪಿಸಲು ನೆರವಾದ ವಿಹಾರಿ, ಜಡೇಜಾ 86* (156 ಎಸೆತ, 11 ಬೌಂಡರಿ, 1 ಸಿಕ್ಸ್) ರೊಂದಿಗೆ ಭರ್ಜರಿ ಬ್ಯಾಟಿಂಗ್ ನಡೆಸಿ ಅರ್ಧಶತಕ ಸಿಡಿಸಿದ್ದರು. ದಿನದಾಟದ ಬಳಿಕ ಮಾತನಾಡಿದ ವಿಹಾರಿ ಟೆಸ್ಟ್ ತಂಡಕ್ಕೆ ಆಯ್ಕೆ ಬಳಿಕ ರಾಹುಲ್ ದ್ರಾವಿಡ್ ರೊಂದಿಗೆ ನಡೆಸಿದ ಮಾತು ನನಗೆ ಶಕ್ತಿ ತುಂಬಿದ್ದು, ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಲು ನೆರವಾಯಿತು ಎಂದು ಹೇಳಿದ್ದಾರೆ.

ನನ್ನ ಪಾದಾರ್ಪಣೆ ಪಂದ್ಯದ ಮುನ್ನ ಅವರಿಗೆ ಕರೆ ಮಾಡಿ ಕೆಲ ಸಮಯ ಮಾತನಾಡಿದ್ದೆ. ಆ ಮಾತು ನನ್ನಲ್ಲಿನ ಹಿಂಜರಿಕೆಯನ್ನು ದೂರ ಮಾಡಿ ಶಕ್ತಿ ತುಂಬಿತ್ತು. ಅವರು ಕ್ರಿಕೆಟ್ ಗೇಮ್ ಲೆಜೆಂಡ್. ಅವರ ಪ್ರತಿಯೊಂದು ಸಲಹೆಯೂ ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಎಂದರು.

ದ್ರಾವಿಡ್ ಅವರು ನನ್ನ ಬ್ಯಾಟಿಂಗ್ ತಂತ್ರಗಾರಿಕೆ ಕುರಿತು ಮೆಚ್ಚಿದ್ದರು, ಅಲ್ಲದೇ ಮೈದಾನದಲ್ಲಿ ನಿನ್ನ ಆಟವನ್ನು ಆನಂದಿಸು ಎಂದು ಸಲಹೆ ನೀಡಿದ್ದರು. ನನ್ನ ಜೀವನದಲ್ಲಿ ದ್ರಾವಿಡ್ ಕೋಚ್ ಮಾಡುತ್ತಿದ್ದ ಟೀಂ ಇಂಡಿಯಾ ಎ ತಂಡದ ಅವಧಿಯ ಜರ್ನಿ ಪ್ರಮುಖವಾದದ್ದು ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

ವಲ್ಡ್ ಕ್ಲಸ್ ಬೌಲರ್ ಗಳಾದ ಜೇಮ್ಸ್ ಆ್ಯಂಡರ್ ಸನ್, ಬ್ರಾಡ್ ಬೌಲಿಂಗ್ ಎದುರಿಸಲು ನಾಯಕ ಕೊಹ್ಲಿ ಅವರ ಬೆಂಬಲವೂ ಈ ವೇಳೆ ಪ್ರಮುಖವಾಗಿದ್ದು, ಜಡೇಜಾರೊಂದಿಗೆ ಉತ್ತಮ ಜೊತೆಯಾಟ ನೀಡಲು ಕಾರಣವಾಯಿತು. ಮುಂದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಅಧಿಕ ರನ್ ಗಳಿಸುವುದು ನನ್ನ ಗುರಿಯಾಗಿದೆ ಎಂದು ಹನುಮ ವಿಹಾರಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *