ರಾಜ್ಯಪಾಲರ ನಡಾವಳಿ ಬಗ್ಗೆ ಮಾತನಾಡದಂತೆ ಸ್ಪೀಕರ್ ಖಾದರ್ ರೂಲಿಂಗ್

1 Min Read

ಬೆಂಗಳೂರು: ವಿಧಾನಸಭೆಯಲ್ಲಿ ರಾಜ್ಯಪಾಲರ (Governor) ನಡಾವಳಿ ಬಗ್ಗೆ ಯಾರೂ ಮಾತನಾಡಬಾರದು, ಆಗಿರುವ ಘಟನೆಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಅಂತಾ ಸ್ಪೀಕರ್ ಯು.ಟಿ ಖಾದರ್ (UT Khader) ರೂಲಿಂಗ್ ಕೊಟ್ಟಿದ್ದಾರೆ.

ಜಂಟಿ ಅಧಿವೇಶನದಂದು ರಾಜ್ಯಪಾಲರ ನಡೆ ಚರ್ಚೆಗೆ, ರಾಜ್ಯಪಾಲರ ವಿರುದ್ಧ ನಡೆದುಕೊಂಡವರ ಸಸ್ಪೆಂಡ್‌ಗೆ ಆಗ್ರಹಿಸಿದ್ದ ಬಗ್ಗೆ ಸ್ಪೀಕರ್ ರೂಲಿಂಗ್ ಕೊಟ್ಟರು. ಇದನ್ನೂ ಓದಿ: ಮುಡಾ ಹಗರಣದಲ್ಲಿ ಸಿಎಂ ಕಳಂಕ ಮುಕ್ತ; ಲೋಕಾಯುಕ್ತ ಸಲ್ಲಿಸಿದ್ದ ʻಬಿ ರಿಪೋರ್ಟ್‌ʼ ಒಪ್ಪಿದ ಕೋರ್ಟ್‌

ಜನವರಿ 22 ರಂದು ಉಭಯ ಸದನದ ಬಗ್ಗೆ ಉದ್ದೇಶಿಸಿ ಮಾಡಿದ ಭಾಷಣದ ಸಂದರ್ಭದಲ್ಲಿ ನಡೆದ ಘಟನಾವಳಿಗಳು ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನೆ ಆಗಿದೆ. ಈ ಸದನದ ಸದಸ್ಯರಾಗಿರುವ ನಮ್ಮ ನಡೆತೆ ಹಾಗೂ ಅಭಿಪ್ರಾಯಗಳು ಸದಾಬಿರುಚಿ ಮತ್ತು ಸಂವಿಧಾನ ಬದ್ದವಾಗಿರಬೇಕು. ಸದಸ್ಯರು ಹಾಗೂ ಸದನದ ಗೌರವ ಎತ್ತಿ ಹಿಡಿಯಬೇಕು ಅಂತ ಹೇಳಿದ್ದಾರೆ.

ಇನ್ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಇದನ್ನ ಇಲ್ಲಿಗೇ ನಿಲ್ಲಿಸಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ಮುಂದುವರಿಸಬೇಕು. ಇನ್ನು ಮುಂದೆ ರಾಜ್ಯಪಾಲರ ನಡವಳಿಕೆ ಬಗ್ಗೆ ಚರ್ಚೆ ಮಾಡಬಾರದು ಅಂತಾ ಸ್ಪೀಕರ್ ರೂಲಿಂಗ್ ನೀಡಿದ್ರು. ಇದನ್ನೂ ಓದಿ: ಫಡ್ನವಿಸ್‌ನಿಂದ ರಾಜನಾಥ್ ಸಿಂಗ್ ವರೆಗೆ – ವಿಮಾನ, ಹೆಲಿಕಾಪ್ಟರ್ ದುರಂತದಲ್ಲಿ ಪಾರಾದ ಪ್ರಮುಖ ರಾಜಕಾರಣಿಗಳು!

Share This Article