ಸ್ಪಂದನಾ ಮೃತದೇಹ ಇಂದು ತಡ ರಾತ್ರಿ ಬೆಂಗಳೂರಿಗೆ, ಅಂತಿಮ ದರ್ಶನಕ್ಕೆ ಅವಕಾಶ

Public TV
1 Min Read

ಟ ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spadana) ಅವರ ನಿಧನ ಇಡೀ ಕುಟುಂಬಕ್ಕೆ ಮತ್ತು ಅನೇಕರಿಗೆ ಶಾಕ್ ನೀಡಿದೆ. ಹೃದಯಾಘಾತದಿಂದ ಸ್ಪಂದನಾ ನಿಧನರಾಗಿದ್ದಾರೆ. ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್‌ನಲ್ಲಿ ಮುಗಿದಿದ್ದು, ಮೃತ ದೇಹವನ್ನು ಇಂದು ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರಿಗೆ ತರಲಾಗುತ್ತಿದೆ.

ಸ್ಪಂದನಾ ಸಾವಿನ ಕುರಿತಂತೆ ಬ್ಯಾಂಕಾಕ್‌ನಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದಿದೆ. ಆಗಸ್ಟ್ 8ರ ತಡರಾತ್ರಿ ಸ್ಪಂದನಾ ದೇಹ ಆಗಮಿಸೋ ಸಾಧ್ಯತೆಯಿದೆ. ನೇರವಾಗಿ ವಿಮಾನ ನಿಲ್ದಾಣದ ಕಾರ್ಗೋಗೆ ಬರಲಿರೋ ಪಾರ್ಥಿವ ಶರೀರದ ಜೊತೆ ವಿಜಯ್ ರಾಘವೇಂದ್ರ ಕೂಡ ಬರಲಿದ್ದು, ನಾಳೆ ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮಲ್ಲೇಶ್ವರಂ ಆಟದ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡೋ ಪ್ಲ್ಯಾನ್ ಮಾಡಲಾಗಿದೆ.

ಸ್ಪಂದನಾ ಅವರು ಸಂಬಂಧಿಗಳ ಜೊತೆ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಈ ಆಘಾತಕಾರಿ ಘಟನೆ ನಡೆದಿದೆ. ಎಂದೂ ಬಾರದ ಲೋಕಕ್ಕೆ ಸ್ಪಂದನಾ ಹೋಗಿದ್ದಾರೆ.

ನಿನ್ನೆಯೇ ವಿಜಯ ರಾಘವೇಂದ್ರ ಕುಟುಂಬ ಮತ್ತು ಸ್ಪಂದನಾ ಅವರ ಕುಟುಂಬ ಬ್ಯಾಂಕಾಕ್‌ಗೆ ತೆರಳಿದೆ. ನಾಲ್ಕು ದಿನಗಳ ಹಿಂದೆಯಷ್ಟೇ ವಿಜಯ್ ಪತ್ನಿ ಸ್ಪಂದನಾ ಅವರು ತನ್ನ ಕಾಲೇಜು ಸ್ನೇಹಿತರೊಂದಿಗೆ ಥೈಲ್ಯಾಂಡ್‌ಗೆ ಪ್ರವಾಸ ಹೋಗಿದ್ದರು. ಭಾನುವಾರ ಸಂಜೆ ಶಾಫಿಂಗ್ ಮುಗಿಸಿ ಹೋಟೇಲ್‌ನತ್ತ ಹೋಗಬೇಕಾದರೆ ಸ್ಪಂದನಾ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ನೇಹಿತರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸ್ಪಂದನಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ:ವಾಮನ ಸಿನಿಮಾದ ‘ರಾಕ್ಷಸಿ’ ಹಾಡು ರಿಲೀಸ್ ಮಾಡಿದ ಅಭಿಷೇಕ್

ವಿಜಯ್- ಸ್ಪಂದನಾ ವಿವಾಹ ಮಹೋತ್ಸವಕ್ಕೆ 18 ದಿನ ಬಾಕಿ ಇರುವಾಗಲೇ ಈ ಆಘಾತಕಾರಿ ಘಟನೆ ನಡೆದಿದೆ. 2007 ಆಗಸ್ಟ್ 26ರಂದು ವಿಜಯ್- ಸ್ಪಂದನಾ ಜೋಡಿ ಹಸೆಮಣೆ ಏರಿತ್ತು. ಶೌರ್ಯ ಎಂಬ ಮುದ್ದಾದ ಮಗನಿದ್ದಾನೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್