ದಯವಿಟ್ಟು ಊಹಾಪೋಹ ಎಬ್ಬಿಸಬೇಡಿ, ಪರ್ಸನಲ್ ಲೈಫ್ ಇರತ್ತೆ: ಬಿ.ಕೆ ಹರಿಪ್ರಸಾದ್ ಮನವಿ

Public TV
1 Min Read

ಬೆಂಗಳೂರು: ದಯವಿಟ್ಟು ಊಹಾಪೋಹಗಳನ್ನು ಹಬ್ಬಿಸಬೇಡಿ. ಪರ್ಸನಲ್ ಲೈಫ್ ಇರುತ್ತೆ ಎಂದು  ಸ್ಪಂದನಾ ವಿಜಯ್ ಅವರ ತಂದೆ ಬಿ.ಕೆ ಶಿವರಾಂ ಸಹೋದರ ಬಿ.ಕೆ ಹರಿಪ್ರಸಾದ್ (B K Hariprasad) ಮನವಿ ಮಾಡಿಕೊಂಡಿದ್ದಾರೆ.

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್ (Spandana Vijay) ನಿಧನದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪಂದನಾ ತನ್ನ ಕಸಿನ್ಸ್ ಜೊತೆಗೆ ಟ್ರಿಪ್ ಹೋಗಿದ್ರು. ವಿಜಯ ರಾಘವೇಂದ್ರಗೆ ಚಿತ್ರೀಕರಣ ಇತ್ತು. ಅದನ್ನು ಮುಗಿಸಿಕೊಂಡು ಅವರು ಕೂಡ ಸೇರಿಕೊಂಡಿದ್ದಾರೆ ಎಂದರು.

ದಯವಿಟ್ಟು ಈ ಸಂಬಂಧ ಊಹಾಪೋಹಗಳಿಗೆ ಅವಕಾಶ ಕೊಡಬೇಡಿ. ಅವರ ಕಸಿನ್ಸ್ ಇದ್ರು. ವಿಜಯ ರಾಘವೇಂದ್ರ ಕೂಡ ಶೂಟಿಂಗ್ ಮುಗಿಸಿ ಅಲ್ಲಿಯೇ ಹೋಗಿದ್ದಾರೆ. ಪೋಸ್ಟ್ ಮಾರ್ಟಂ ರಿಪೋರ್ಟ್ ಆಗ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಅತ್ತಿಗೆ ಮಲಗಿದವರು ಎದ್ದೇಳಲಿಲ್ಲ ಅಂತ ನನಗೆ ಸಿಕ್ಕಿರುವ ಮಾಹಿತಿ : ನಟ ಶ್ರೀಮುರಳಿ

ಸ್ವಲ್ಪ ಆರೋಗ್ಯದಲ್ಲಿ ವೀಕ್ ಇದ್ದರು. ರೂಮರ್ರ್ಸ್ ಮಾಡಬೇಡಿ ಪರ್ಸನಲ್ ಲೈಫ್ ಇರುತ್ತೆ. ಮಗ ಸದ್ಯ ಇಲ್ಲೆ ಇದ್ದಾನೆ. ಅಂತ್ಯಕ್ರಿಯೆಯ ಬಗ್ಗೆ ಮೃತದೇಹ ಸಿಕ್ಕ ಬಳಿಕ ನಿರ್ಧಾರ ಮಡುತ್ತೇವೆ. ಮಂಗಳವಾರ ಮೃತದೇಹ ಬರುವ ಸಾಧ್ಯತೆ ಇದೆ ಎಂದು ಹರಿಪ್ರಸಾದ್ ತಿಳಿಸಿದರು.

ನಾಲ್ಕು ದಿನಗಳ ಹಿಂದೆಯಷ್ಟೇ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರು ತನ್ನ ಕಾಲೇಜು ಸ್ನೇಹಿತರೊಂದಿಗೆ ಥಾಯ್ ಲ್ಯಾಂಡ್‍ಗೆ ಪ್ರವಾಸ ಹೋಗಿದ್ದರು. ಭಾನುವಾರ ಸಂಜೆ ಶಾಫಿಂಗ್ ಮುಗಿಸಿ ಹೋಟೇಲ್ ನತ್ತ ಹೋಗಬೇಕಾದರೆ ಸ್ಪಂದನಾ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ನೇಹಿತರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸ್ಪಂದನಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇತ್ತ ವಿಷಯ ತಿಳಿಯುತ್ತಿದ್ದಂತೆ ವಿಜಯ ರಾಘವೇಂದ್ರ ಬ್ಯಾಂಕಾಕ್ ಗೆ ಪ್ರಯಾಣ ಬೆಳೆಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್