ಲಕ್‌ ನಿಂದ ಉಳಿದುಕೊಂಡಿರಲಿಲ್ಲ, ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಳ್ಳಲ್ಲ – ಮನಬಿಚ್ಚಿ ಮಾತನಾಡಿದ ಸ್ಪಂದನಾ

1 Min Read

ನಟಿ ಸ್ಪಂದನಾ ಸೋಮಣ್ಣ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ. 99 ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿದ್ದ ಸ್ಪಂದನಾ ಫಿನಾಲೆಗೆ 2 ವಾರ ಬಾಕಿ ಇರುವಾಗ ಹೊರಬಂದಿದ್ದಾರೆ. ಇಷ್ಟೂ ದಿನ ಲಕ್‌ನಿಂದ ಸ್ಪಂದನಾ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು ಅನ್ನೋದು ಭಾರೀ ಸಂಖ್ಯೆ ನೋಡುಗರ ಅಭಿಪ್ರಾಯವಾಗಿತ್ತು.

ಸಾಕಷ್ಟು ಜನ ಇದೇ ವಿಚಾರವಾಗಿ ಟೀಕೆ ಮಾಡಿದ್ದರು. ಬಿಗ್‌ ಮನೆಯಿಂದ ಹೊರ ಬಂದ ಬಳಿಕ ಸ್ಪಂದನಾ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ. ʻಪಬ್ಲಿಕ್‌ ಟಿವಿʼ ಜೊತೆಗೆ ಮನಬಿಚ್ಚಿ ಮಾತನಾಡಿದ್ದಾರೆ. ಲಕ್‌ನಿಂದ ಉಳಿದುಕೊಂಡಿದ್ದರೆ ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಟ್ ಆಗುತ್ತಿರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಮ್‌ ಕಡೆ ಬ್ರೇಸ್‌ಲೇಟ್‌ ಎಂಗೇಜ್‌ಮೆಂಟ್‌ಗೆ ಕೊಡ್ತಾರೆ: ಕಾವ್ಯ ತಂದೆ ಕೊಟ್ಟ ಗಿಫ್ಟ್‌ ಬಗ್ಗೆ ಸುದೀಪ್‌ ಬಳಿ ಗಿಲ್ಲಿ ಹೇಳಿದ್ದೇನು?

ಮುಂದುವರಿದು… ಬಿಗ್‌ ಬಾಸ್ ಮನೆಗೆ ಹೋಗಬೇಕಾದ್ರೆ ನೆಗೆಟೀವ್, ಪಾಸಿಟಿವ್ ಅಭಿಪ್ರಾಯ ಬರಬಹುದು ಅನ್ನೋ ಮೈಂಡ್‌ ಸೆಟ್‌ ಇಟ್ಕೊಂಡೇ ಹೋಗಿದ್ದೆ. ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಳ್ಳಲ್ಲ. ಮನೆಯಲ್ಲಿದ್ದ 13 ಜನರಲ್ಲೇ ಭಿನ್ನಾಭಿಪ್ರಾಯಗಳು ಇರೋದಾದ್ರೆ ಹೊರಗಡೆ ಅಷ್ಟು ಜನಕ್ಕೆ ಬೇರೆ ಬೇರೆ ಅಭಿಪ್ರಾಯ ಇರೋದ್ರಲ್ಲಿ ತಪ್ಪಿಲ್ಲ. ಲಕ್ ಇಂದ ಉಳಿದುಕೊಂಡಿದ್ರು ಅನ್ನೋದು ತಪ್ಪು. ಲಕ್‌ ನಿಂದ ಇದ್ದಿದ್ದರೆ ನಾಮಿನೇಟ್‌ ಆಗ್ತಿರಲಿಲ್ಲ ಅಲ್ವಾ? ಅಂತ ಪ್ರಶ್ನೆ ಮಾಡಿದ್ರು.

ಆರಂಭದಿಂದಲೂ ಸ್ಪಂದನಾ ಅದೃಷ್ಟದಿಂದಲೇ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದಾರೆ ಎಂದೇ ಟ್ರೋಲ್ ಆಗುತ್ತಿತ್ತು. ಇಂಥಹ ಕಾಮೆಂಟ್‌ಗಳೂ ಬರುತ್ತಿತ್ತು. ಜೊತೆಗೆ ಬಿಗ್‌ಬಾಸ್ ಕಂಟೆಸ್ಟಂಟ್ ಜಾನ್ವಿ ಕೂಡ ಸ್ಪಂದನಾ ಕಲರ್ಸ್‌ ಕನ್ನಡ ವಾಹಿನಿ ಮನೆಮಗಳು ಅನ್ನೋ ಕಾರಣಕ್ಕೆ ಮನೆಯಲ್ಲಿ ಉಳಿಸಿಕೊಂಡಿದ್ದಾರೆ ಎಂದು ಮಾತನಾಡಿದ್ದರು. ಇದನ್ನೂ ಓದಿ: BBK 12 | ಬಿಗ್‌ ಬಾಸ್‌ ಮನೆಯಿಂದ ಸ್ಪಂದನಾ ಔಟ್‌

Share This Article