‘ಕರಿಮಣಿ’ ಕಥೆ ಹೇಳಲು ಸಜ್ಜಾದ ಸ್ಪಂದನಾ ಸೋಮಣ್ಣ

Public TV
1 Min Read

ಟಿ ಸ್ಪಂದನಾ ಸೋಮಣ್ಣ (Spandana Somanna) ಅವರು ‘ಗೃಹಪ್ರವೇಶ’ ಸೀರಿಯಲ್ ಬಳಿಕ ‘ಕರಿಮಣಿ’ (Karimani) ಕಥೆ ಹೇಳಲು ಇದೀಗ ರೆಡಿಯಾಗಿದ್ದಾರೆ. ಸಿನಿಮಾ ಜೊತೆಗೆ ಕಿರುತೆರೆಯತ್ತ ನಟಿ ಮುಖ ಮಾಡಿದ್ದಾರೆ. ಇದನ್ನೂ ಓದಿ: ದರ್ಶನ್ ಜೊತೆಗಿನ ಸಮಸ್ಯೆ ಬೇಗ ಹುಡುಕಿಕೊಳ್ಳಿ ಅಂತಿದ್ದಾರೆ ಸುದೀಪ್ ಫ್ಯಾನ್ಸ್

ಈ ಧಾರಾವಾಹಿಯಲ್ಲಿ ಎರಡು ಮನಸ್ಸುಗಳನ್ನು ಒಂದು ಮಾಡುವ ಈ ‘ಕರಿಮಣಿ’ ಧಾರಾವಾಹಿಯಲ್ಲಿ ನಾಯಕಿ ಹಾಗೂ ನಾಯಕ ಇಬ್ಬರ ಆಲೋಚನೆಗಳು ಡಿಫರೆಂಟ್ ಆಗಿದ್ದು,‌ ಮುಂದೆ ಇಬ್ಬರು ಹೇಗೆ ಒಂದಾಗುತ್ತಾರೆ ಎಂಬ ಕುತೂಹಲವಿದೆ. ಯಾಕೆಂದರೆ ಪ್ರೊಮೋದಲ್ಲೇ ನಾಯಕಿ ಸಾಹಿತ್ಯಳ ಮದುವೆ ನಡೆಯುತ್ತಿದ್ದು, ನಾಯಕ ಕರ್ಣ ಈ ಮದುವೆಯನ್ನು ತಡೆಯಬೇಕು ಎಂದು ಹೊರಟಿದ್ದಾನೆ.

ಮನೆಗೆ ಹೆಣ್ಣು ಮಗಳ ಪ್ರಾಮುಖ್ಯತೆ ಎಷ್ಟಿರುತ್ತದೆ ಎಂಬುದು ತಿಳಿದಿರುವ ಕರ್ಣ, ಸಾಹಿತ್ಯ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದು, ಆಕೆ ಕೆಟ್ಟವಳು ಅವಳು ಮದುವೆಯಾಗಿ ಯಾರ ಮನೆಗೂ ಅನ್ಯಾಯವಾಗಬಾರದು ಎಂದಿದ್ದಾನೆ. ಸಾಹಿತ್ಯ ಮತ್ತು ಕರ್ಣ ಇಬ್ಬರ ಸಂಬಂಧವೇನು? ಇವರಿಬ್ಬರು ಕಥೆ ಏನು ಎಂಬುದು ಧಾರಾವಾಹಿ ಪ್ರಾರಂಭವಾದ ನಂತರವೇ ತಿಳಿಯಬೇಕಿದೆ. ಅಂದಹಾಗೆ, ವಾಹಿನಿಯಲ್ಲಿ ಪ್ರಸಾರ ಸಮಯ ಇನ್ನೂ ರಿವೀಲ್ ಮಾಡಿಲ್ಲ.

ಮೈಸೂರಿನ ಬೆಡಗಿ ಸ್ಪಂದನಾಗೆ ನಾಯಕನಾಗಿ ಅಶ್ವಿನ್ ಕಾಣಿಸಿಕೊಂಡಿದ್ದಾರೆ. ಸದ್ಯ ‘ಕರಿಮಣಿ’ ಸೀರಿಯಲ್ ತುಣುಕು ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ನಶೆಯ ನಾಕಾಶೆಯಲ್ಲಿ ‘ಸಾರಾಂಶ’ದ ನಿನಾದ

ಸದ್ಯ ‘ಸ್ಪಂದನಾ’ ಕನ್ನಡ ಸಿನಿಮಾಗಳ ಜೊತೆ ಪರಭಾಷೆಯ ಸೀರಿಯಲ್‌ನಲ್ಲಿಯೂ ನಟಿಸಿ ಬಂದಿದ್ದಾರೆ. ಇದೀಗ ಒಂದಿಷ್ಟು ಸಿನಿಮಾ ಕಥೆಗಳು ಮಾತುಕತೆ ಹಂತದಲ್ಲಿದೆ. ಇದರ ನಡುವೆ ‘ಕರಿಮಣಿ’ ಸೀರಿಯಲ್ ಮೂಲಕ ಬರುತ್ತಿರೋ ಸ್ಪಂದನಾ ಪ್ರೇಕ್ಷಕರ ಮನಗೆಲ್ಲುತ್ತಾರಾ ಕಾಯಬೇಕಿದೆ.

Share This Article