ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿದ ಸ್ಪಂದನಾ ಅಂತ್ಯಸಂಸ್ಕಾರ

Public TV
1 Min Read

ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅವರ ಅಂತ್ಯಕ್ರಿಯೆ ಇಂದು (ಆಗಸ್ಟ್ 9) ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿತು. ಈಡಿಗ ಪದ್ಧತಿಯಂತೆ ಸ್ಪಂದನಾ ಅವರ ಅಂತ್ಯಕ್ರಿಯೆ (Funeral) ಮಾಡಲಾಯಿತು. ಪತ್ನಿಯ ಅಂತಿಮ ವಿದಾಯದ ವೇಳೆ ವಿಜಯ ರಾಘವೇಂದ್ರ ಭಾವುಕರಾದರು. ಇದನ್ನೂ ಓದಿ:ಹರಿಶ್ಚಂದ್ರ ಘಾಟ್‍ನತ್ತ ಸ್ಪಂದನಾ ಪಾರ್ಥಿವ ಶರೀರದ ಮೆರವಣಿಗೆ

ಆಗಸ್ಟ್ 6ರಂದು ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಬ್ಯಾಂಕಾಕ್‌ನಿಂದ ಎಲ್ಲಾ ಪ್ರಕ್ರಿಯೆ ಮುಗಿಸಿ ನಿನ್ನೆ ತಡರಾತ್ರಿ ಸ್ಪಂದನಾ ಮೃತದೇಹ ತರಲಾಯಿತು. ಸ್ಪಂದನಾ ತಂದೆ ಬಿ.ಕೆ ಶಿವರಾಂ ಮನೆಯಲ್ಲಿ ಅಂತಿಮ ನಮನಕ್ಕೆ ಸಿದ್ಧತೆ ಮಾಡಲಾಗಿತ್ತು. ಸಿನಿಮಾ ರಂಗದ ಗಣ್ಯರು, ಆಪ್ತರು, ರಾಜಕೀಯ ಗಣ್ಯರು ಸ್ಪಂದನಾರ ಅಂತಿಮ ದರ್ಶನ ಪಡೆದರು.

ಮಧ್ಯಾಹ್ನ 3ರ ಬಳಿಕ ಮಲ್ಲೇಶ್ವರಂ ನಿವಾಸದಿಂದ ಹರಿಶ್ಚಂದ್ರ ಘಾಟ್‌ವರೆಗೂ ಸ್ಪಂದನಾರ ಅಂತಿಮ ಯಾತ್ರೆ ಮಾಡಲಾಯಿತು. ಬಳಿಕ ಈಡಿಗ ಸಂಪ್ರದಾಯದಂತೆ ಸ್ಪಂದನಾ ಅಂತ್ಯ ಸಂಸ್ಕಾರ ಮಾಡಲಾಗಿದೆ. ಪತಿ ರಾಘು- ಪುತ್ರ ಶೌರ್ಯ ಸ್ಪಂದನಾರ ಅಂತಿಮ ಕಾರ್ಯವನ್ನ ಸಲ್ಲಿಸಿದ್ದಾರೆ.

ಕಳೆದ ಒಂದು ವಾರದಿಂದ ಸ್ಪಂದನಾ ಸೋದರ ಸಂಬಂಧಿಗಳ ಜೊತೆ ಬ್ಯಾಂಕಾಕ್ ಪ್ರವಾಸದಲ್ಲಿದ್ದರು. ಭಾನುವಾರ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ರಾತ್ರಿ ಮಲಗಿದವರು ಎದ್ದೇಳಲಿಲ್ಲ ಎನ್ನುವ ಮಾಹಿತಿಯನ್ನು ನಟ ಶ್ರೀಮುರಳಿ ನೀಡಿದ್ದರು. ಹೃದಯಾಘಾತದಿಂದ ಸ್ಪಂದನಾ ನಿಧನರಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಭಾನುವಾರ ರಾತ್ರಿಯೇ ವಿಜಯ ರಾಘವೇಂದ್ರ ಬ್ಯಾಂಕಾಕ್‌ಗೆ ತೆರಳಿದ್ದರು.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್