2.03 ಕೋಟಿ ಆಸ್ತಿ ಘೋಷಿಸಿಕೊಂಡ ಸಾರಿಗೆ ಸಚಿವರ ಪುತ್ರಿ ಸೌಮ್ಯಾ ರೆಡ್ಡಿ

Public TV
1 Min Read

– 1.50 ಕೋಟಿ ರೂ. ಸಾಲ; ತಂದೆಯಿಂದಲೇ 56.28 ಲಕ್ಷ ಸಾಲ ಪಡೆದಿರೋ ಮಗಳು
– ಮಾಜಿ ಶಾಸಕಿ ಮೇಲೆ 6 ಕ್ರಿಮಿನಲ್‌ ಕೇಸ್‌

ಬೆಂಗಳೂರು: ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ (Sowmya Reddy) ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ (Congress) ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ 2.03 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ. ಬ್ಯಾಂಕ್ ಹಾಗೂ ವೈಯಕ್ತಿಕ ಸಾಲ ಒಟ್ಟು 1.50 ಕೋಟಿ ರೂ. ಇವರ ಮೇಲಿದೆ.

2022-23 ರಲ್ಲಿ ವಾರ್ಷಿಕ ಆದಾಯ 17.39 ಲಕ್ಷ ರೂ. ಇದೆ ಎಂದು ತಾವು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸೌಮ್ಯಾ ರೆಡ್ಡಿ ತಿಳಿಸಿದ್ದಾರೆ. ಪ್ರಸ್ತುತ ನಗದು ಹಣ 44,135 ರೂ. ಹಾಗೂ ಬ್ಯಾಂಕ್ ಖಾತೆಯಲ್ಲಿ 40,96,352 ರೂ. ಹಣ ಹೊಂದಿದ್ದಾರೆ. ಇದನ್ನೂ ಓದಿ: ಪತ್ನಿ ಸೇರಿ ಒಟ್ಟು 60.78 ಕೋಟಿ ರೂ. ಆಸ್ತಿ ಘೋಷಿಸಿದ ಸೋಮಣ್ಣ

19.85 ಲಕ್ಷ ರೂ. ಮೌಲ್ಯದ ಒಂದು ಇನ್ನೋವಾ ಕಾರು ಇವರ ಬಳಿಯಿದೆ. 5 ಕೆಜಿ ಬೆಳ್ಳಿ, 950 ಗ್ರಾಂ ಚಿನ್ನ (28,02,500 ಮೌಲ್ಯದ ಒಡವೆ) ಇದೆ. ಬೇಗೂರು ಬಳಿ 1.24 ಲಕ್ಷ ಮೌಲ್ಯದ ಪ್ಲಾಟ್ ಕೂಡ ಇದೆ. ಸಾರ್ವಜನಿಕ ಆಸ್ತಿ ಹಾನಿ ಸೇರಿದಂತೆ 6 ಪ್ರಕರಣಗಳು ಇವರ ಮೇಲಿದೆ.

1.07 ಕೋಟಿ ರೂ. ಚರಾಸ್ತಿ ಹಾಗೂ 1.24 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಸೌಮ್ಯಾ ರೆಡ್ಡಿ ಅವರ ಬಳಿ ಯಾವುದೇ ಕೃಷಿ ಭೂಮಿ, ಕೃಷಿಯೇತರ ಭೂಮಿ, ವಾಣಿಜ್ಯ ಸಂಕೀರ್ಣಗಳು ಇಲ್ಲ. ಇದನ್ನೂ ಓದಿ: ಕಾರು, ನಿವೇಶನ ಹೊಂದಿಲ್ಲ – 4.99 ಕೋಟಿ ರೂ. ಆಸ್ತಿ ಘೋಷಿಸಿದ ಯದುವೀರ್‌

ಸೌಮ್ಯಾ ರೆಡ್ಡಿ ಅವರು ಕೈ ಸಾಲ ಕೂಡ ಮಾಡಿದ್ದಾರೆ. ತಮ್ಮ ತಂದೆಯವರಿಂದಲೂ ಸಾಲ ಪಡೆದುಕೊಂಡಿದ್ದಾರೆ. ರಾಮಲಿಂಗಾ ರೆಡ್ಡಿ (Ramalinga Reddy) ತಮ್ಮ ಪುತ್ರಿಗೆ 56.28 ಲಕ್ಷ ರೂ. ಸಾಲ ನೀಡಿದ್ದಾರೆ.

Share This Article