ದೆವ್ವದ ಪಾತ್ರ ಮಾಡಲು ಒಪ್ಪಿಕೊಂಡ್ರಾ ಪೂಜಾ ಹೆಗ್ಡೆ?

Public TV
1 Min Read

ರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಸಾಲು ಸಾಲು ಸಿನಿಮಾಗಳ ಸೋಲನ್ನು ಕಂಡಿರುವ ಹಿನ್ನೆಲೆ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಹೊಸ ಬಗೆಯ ಪಾತ್ರಗಳನ್ನು ಮಾಡಲು ಮುಂದಾಗಿದ್ದಾರೆ. ತಮಿಳಿನ ಹೊಸ ಸಿನಿಮಾದಲ್ಲಿ ದೆವ್ವದ ಪಾತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪೂಜಾಗೆ ಕೆರಿಯರ್‌ನಲ್ಲಿ ಹೇಳಿಕೊಳ್ಳುವಂತಹ ಸಕ್ಸಸ್ ಸಿಗುತ್ತಿಲ್ಲ. ಆದರೆ ಅವರಿಗೆ ಬೇಡಿಕೆಯೇನು ಕಮ್ಮಿಯಾಗಿಲ್ಲ. ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಖ್ಯಾತ ನಟ ರಾಘವ್ ಲಾರೆನ್ಸ್ (Raghava Lawrence) ನಟನೆಯ ‘ಕಾಂಚನಾ ಪಾರ್ಟ್ 4’ನಲ್ಲಿ (Kanchana 4) ದೆವ್ವದ (Ghost) ಪಾತ್ರದಲ್ಲಿ ನಟಿಸಲು ಚಿತ್ರತಂಡ ನಟಿಯನ್ನು ಕೇಳಲಾಗಿದೆಯಂತೆ. ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದೆ. ಆದರೆ ನಟಿ ಒಪ್ಪಿಕೊಂಡ್ರಾ? ಎಂಬುದರ ಬಗ್ಗೆ ಅಧಿಕೃತ ಘೋಷಣೆಯಾಗಬೇಕಿದೆ.

ದೆವ್ವ ಪಾತ್ರವಾಗಿದ್ದರೂ ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದೆ. ಒಂದು ವೇಳೆ, ಈ ಪಾತ್ರ ಒಪ್ಪಿದ್ದೇ ಆದರೆ ಹೊಸ ಪಾತ್ರದಲ್ಲಿ ನಟಿ ಕಾಣಿಸಿಕೊಂಡಂತೆ ಆಗುತ್ತದೆ. ಜಸ್ಟ್‌ ವೈರಲ್‌ ಆಗುತ್ತಿರುವ ಸುದ್ದಿ ಕೇಳಿಯೇ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಪೂಜಾರನ್ನು ದೆವ್ವ ಪಾತ್ರದಲ್ಲಿ ನೋಡಲು ಕಾಯುತ್ತಿದ್ದಾರೆ. ಇದನ್ನೂ ಓದಿ:ಮಾಧ್ಯಮಗಳನ್ನು ನೋಡಿ ಅಸಭ್ಯ ಸನ್ನೆ ಮಾಡಿದ ದರ್ಶನ್

ಅಂದಹಾಗೆ, ಶಾಹಿದ್ ಕಪೂರ್ (Shahid Kapoor) ನಟನೆಯ ದೇವ ಚಿತ್ರದಲ್ಲಿ ಪೂಜಾ ಹೀರೋಯಿನ್ ನಟಿಸಿದ್ದಾರೆ. ತಮಿಳು ನಟ ಸೂರ್ಯ ನಟನೆಯ 44ನೇ ಚಿತ್ರಕ್ಕೂ ಇವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದಕ್ಕೆ, ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಮಾಡುತ್ತಿದ್ದಾರೆ.

Share This Article