– ಮಾಧ್ಯಮಗಳು ಸುಜಾತ ಭಟ್ ವಿಚಾರಣೆ ನಡೆಸದೇ ಇದ್ದರೆ ಸತ್ಯ ಹೊರ ಬರುತ್ತಿರಲಿಲ್ಲ
ಬೆಂಗಳೂರು: ಸೌಜನ್ಯ ತಾಯಿ (Soujanya Mother) ಕುಸುಮಾವತಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸುಜಾತ ಭಟ್ (Sujatha Bhat) ಅವರನ್ನು ಹೇಗೆ ಈ ಗುಂಪು ಷಡ್ಯಂತ್ರ ಮಾಡಿ ಧರ್ಮಸ್ಥಳದ (Dharmasthala) ವಿರುದ್ಧ ಅಪಪ್ರಚಾರ ಮಾಡಿತ್ತು. ಹೆಣ್ಣು ಮಕ್ಕಳ ವಿಚಾರ ಬಂದಾಗ ಸಮಾಜ ಬೇಗ ಕರಗುತ್ತದೆ. ಈ ಗುಂಪು ಇದನ್ನೇ ಗುರಾಣಿಯನ್ನಾಗಿ ಇಟ್ಟುಕೊಂಡು ಸುಜಾತ ಭಟ್ ಅವರನ್ನು ಮುಂದಿರಿಸಿ ದಿನ ದಿನೇ ಕಥೆ ಕಟ್ಟುತ್ತಿದ್ದರು ಎಂದು ಹೇಳಿದರು.
ಸೌಜನ್ಯ ಮೇಲೆ ಅತ್ಯಾಚಾರವಾಗಿದೆ. ಆ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ಅತ್ಯಾಚಾರ ಮಾಡಿದವರು ಜೈಲಿಗೆ ಹೋಗಬೇಕು ಎಂದು ನಾನು ಆಗ್ರಹ ಮಾಡುತ್ತೇನೆ. ಈ ಬದ್ಧತೆಯನ್ನು ಇಟ್ಟುಕೊಂಡೇ ನಾನು ಮಾತನಾಡುತ್ತಿದ್ದೇನೆ. ಈಗ ಹೇಗೆ ಮಾಸ್ಕ್ ಮ್ಯಾನ್, ಸುಜತಾ ಭಟ್ ಹೇಗೆ ಷಡ್ಯಂತ್ರದ ಭಾಗವಾಗಿದ್ದಾರೋ ಅದೇ ರೀತಿ ಸೌಜನ್ಯ ತಾಯಿ ಕುಸುಮಾವತಿ ಕೂಡ ಯಾವುದೋ ಷಡ್ಯಂತ್ರದ ಭಾಗವಾಗಿರುವುದು ಮೆಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಲರ್ ಕಲರ್ ಕಾಗೆ ಹಾರಿಸಿದ್ದ ಸಮೀರ್‌ಗೆ ಈಗ ಬಂಧನ ಭೀತಿ
ಸುಜತಾ ಭಟ್ ಅವರನ್ನು ಮಾಧ್ಯಮಗಳು ನಿರಂತರ ವಿಚಾರಣೆ ಮಾಡದೇ ಇದ್ದರೆ ಮುಂದೊಂದು ದಿನ ಸುಜಾತ ಭಟ್ ಹೀರೋಯಿನ್ ಆಗುತ್ತಿದ್ದರು. ಆದರೆ ಯಾವಾಗ ಮಾಧ್ಯಮಗಳು ನಿರಂತರ ವಿಚಾರಣೆ ಮಾಡಲು ಆರಂಭಿಸಿದವು ಆಗ ಸತ್ಯ ಹೊರ ಬಂದಿದೆ. ಮಾಧ್ಯಮಗಳು ನಿರಂತರ ವಿಚಾರಣೆ ಮಾಡುವುದಕ್ಕೂ ಸಮೀರ್ ವಿಡಿಯೋ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದ ಎಂದರು.
ಆರಂಭದಲ್ಲಿ ಭಾವನಾತ್ಮಕ ವಿಚಾರವನ್ನು ಮುಂದಿಡುತ್ತಾರೆ. ನಂತರ ಜೈನರ ವಿರುದ್ಧ ಜಾತಿ ಜಾತಿಗಳನ್ನು ಎತ್ತಿಕಟ್ಟಿ ಹಿಂದೂ ಸಮುದಾಯವನ್ನು ಒಡೆದು ಕುತಂತ್ರ ಮಾಡುತ್ತಿದ್ದರು ಸೂಲಿಬೆಲೆ ತಿಳಿಸಿದರು.