ದಿಲ್ಜಿತ್‍ಗೆ ಜೊತೆಯಾದಳು ತಾಪ್ಸಿ ಪನ್ನು!

Public TV
1 Min Read

– ಇದು ಹಾಕಿ ಪ್ಲೇಯರ್ ಫ್ಲಿಕರ್ ಸಿಂಗ್ ಕಥೆ

ಬೆಂಗಳೂರು: ತಾನು ಮಾಡೋ ಪಾತ್ರಗಳೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಭಿನ್ನವಾಗಿರ ಬೇಕು ಮತ್ತು ಸವಾಲಿನದ್ದಾಗಿರಬೇಕೆಂಬ ತುಡಿತ ಹೊಂದಿರೋ ಅಪ್ಪಟ ನಟಿ ತಾಪ್ಸಿ ಪನ್ನು. ಈಕೆ ಇದೀಗ ತನ್ನ ಮನದಿಂಗಿತಕ್ಕೆ ತಕ್ಕುದಾದೊಂದು ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಖ್ಯಾತ ಹಾಕಿ ಪ್ಲೇಯರ್ ಸಂದೀಪ್ ಸಿಂಗ್ ಅವರ ಜೀವನದ ನಿಜವಾದ ಘಟನೆಗಳನ್ನಾಧರಿಸಿದ ‘ಸೂರ್ಮಾ’ ಚಿತ್ರದಲ್ಲಿ ತಾಪ್ಸಿ ದಿಲ್ಜಿತ್ ದೂಸಾಂಜ್‍ಗೆ ಜೊತೆಯಾಗಿ ನಟಿಸುತ್ತಿದ್ದಾಳೆ.

ಹಾಕಿ ಆಟದಲ್ಲಿ ಫ್ಲಿಕರ್ ಸಿಂಗ್ ಎಂದೇ ಖ್ಯಾತನಾಗಿರೋ ಸಂದೀಪ್ ಸಿಂಗ್ ಪಾತ್ರ ದಿಲ್ಜಿತ್‍ಗೆ ಸವಾಲಿನದ್ದಾದರೆ, ಆತನಿಗೆ ಜೊತೆಯಾಗಿ ನಟಿಸೋ ಪಾತ್ರವೂ ತಾಪ್ಸಿ ಪಾಲಿಗೆ ಚಾಲೆಂಜ್. ಇದೀಗ ಈ ಚಿತ್ರದ ಹಾಡೊಂದು ಅನಾವರಣಗೊಂಡಿದೆ. ಇದನ್ನು ಸ್ವತಃ ದಿಲ್ಜಿತ್ ಹಾಡಿರೋದು ವಿಶೇಷ. ಈ ಚಿತ್ರ ಹಾಕಿ ಆಟಕ್ಕೆ ಸಂಬಂಧಿಸಿದ್ದಾದರೂ ಕೂಡಾ ಸಂಗೀತಕ್ಕೂ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟಿರುವುದು ಮತ್ತೊಂದು ವಿಶೇಷ.

ದಿಲ್ಜಿತ್ ಸಿಂಗ್ ಹಾಡಿರೋ ಈ ಚಿತ್ರದ ಹಾಡನ್ನು ಬರೆದಿರುವವರು ಖ್ಯಾತ ಕವಿ ಗುಲ್ಜಾರ್. ಇದಕ್ಕೆ ಶಂಕರ್ ಇಶಾನ್ ಲಾಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಂದರ್ಭದಲ್ಲಿಯೇ ದಿಲ್ಜಿತ್ ಕವಿ ಗುಲ್ಜಾರ್ ಅವರನ್ನು ಭೇಟಿಯಾದ ಬಗ್ಗೆಯೂ ಖುಷಿಗೊಂಡಿದ್ದಾರೆ. ಜಗತ್ತಿನಲ್ಲಿಯೇ ಡೇಂಜರಸ್ ಆಗಿರೋ ಡ್ರ್ಯಾಗ್ ಫ್ಲಿಕರ್ಸ್ ಮೂಲಕವೇ ಖ್ಯಾತರಾದ ಸಂದೀಪ್ ಸಿಂಗ್ ಜೀವನದಿಂದ ಸ್ಫೂರ್ತಿ ಪಡೆದಿರೋ ಈ ಚಿತ್ರದಲ್ಲಿ ತಾಪ್ಸಿಯ ಪಾತ್ರವೂ ಗಮನಾರ್ಹವಾಗಿದೆಯಂತೆ.

ತಾಪ್ಸಿ ಪನ್ನು ಸ್ವತಃ ಖುಷಿಯಿಂದ ಒಪ್ಪಿಕೊಂಡಿರೋ ಈ ಚಿತ್ರದ ಹಾಡೊಂದು ಇದೀಗ ಅನಾವರಣಗೊಂಡಿದೆ. ಈ ಚಿತ್ರ ಈ ವರ್ಷ ತಾಪ್ಸಿ ಅಕೌಂಟಿಗೆ ಮತ್ತೊಂದು ಹಿಟ್ ಚಿತ್ರವಾಗಿ ಜಮೆಯಾಗುತ್ತದೆಂಬ ಭರವಸೆ ಚಿತ್ರ ತಂಡದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *