ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು – ಬೆಂಗಳೂರು, ಹೈದರಾಬಾದ್‌ ನಡುವೆ ಸಂಚಾರ

Public TV
1 Min Read

ಬೆಂಗಳೂರು: ಶೀಘ್ರವೇ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಬರಲಿದೆ. ಹೈದರಾಬಾದ್ (Hyderabad) ಹಾಗೂ ಬೆಂಗಳೂರು (Bengaluru) ನಡುವೆ ಸಂಚರಿಸಲಿರುವ ಹೊಸ ರೈಲು ಆಗಸ್ಟ್ ಅಂತ್ಯಕ್ಕೆ ಸಂಚಾರ ಆರಂಭಿಸುವ ಸಾಧ್ಯತೆಯಿದೆ.

ಈಗಾಗಲೇ ರಾಜ್ಯದಲ್ಲಿ ಮೈಸೂರು – ಚೆನ್ನೈ ಹಾಗೂ ಬೆಂಗಳೂರು – ಧಾರವಾಡಗಳ ನಡುವೆ ಸಂಚರಿಸುವ ವಂದೇ ಭಾರತ್ ರೈಲುಗಳು ಇವೆ. ಇದೀಗ ಬೆಂಗಳೂರು – ಹೈದರಾಬಾದ್ ನಡುವೆ ಸಂಚಾರಕ್ಕೆ ಹೊಸ ರೈಲು ಸಜ್ಜುಗೊಳ್ಳುತ್ತಿದೆ. ಇದು 7 ಗಂಟೆ ಅವಧಿಯಲ್ಲಿ ಯಶವಂತಪುರದಿಂದ (Yeswanthpur) ಕಾಚಿಗುಡ ನಡುವೆ 610 ಕಿ.ಮೀ ಕ್ರಮಿಸಲಿದೆ.

ಹೊಸ ರೈಲು ಬೆಳಗ್ಗೆ ಕಾಚಿಗುಡದಿಂದ ಹೊರಟು ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ತಲುಪಲಿದೆ. ಬಳಿಕ 2 ಗಂಟೆಗೆ ಬೆಂಗಳೂರಿನಿಂದ ಹೊರಟು ರಾತ್ರಿ ವೇಳೆಗೆ ಕಾಚಿಗುಡ ತಲುಪಲಿದೆ. ಯಶವಂತಪುರ, ಧರ್ನಾವರಂ, ದೋನ್ ಕರ್ನೂಲ್ ನಗರ, ಗಡ್ವಾಲ ಜಂಕ್ಷನ್, ಮೆಹಬೂಬ್ ನಗರ, ಕಾಚಿಗುಡ ಮಾರ್ಗದಲ್ಲಿ ರೈಲು ಸಂಚರಿಸಲಿದೆ. ಇದನ್ನೂ ಓದಿ: ಎಸ್‍ಇಪಿ ಜಾರಿಗೆ ಸರ್ಕಾರದ ಸಿದ್ಧತೆ – ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ

ಈಗಾಗಲೇ ಕಾಚಿಗುಡದಿಂದ ದೋನ್‌ವರೆಗೆ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದೆ. ಶೀಘ್ರದಲ್ಲೇ ಯಶವಂತಪುರದವರೆಗೆ ಪ್ರಾಯೋಗಿಕ ಸಂಚಾರ ಪೂರ್ಣಗೊಳ್ಳಲಿದೆ. ಆಗಸ್ಟ್ ಅಂತ್ಯಕ್ಕೆ ಹೊಸ ವಂದೇ ಭಾರತ್ ರೈಲು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: 5 ಡಜನ್‍ಗೂ ಹೆಚ್ಚು ಇನ್ಸ್‌ಪೆಕ್ಟರ್‌ ವರ್ಗಾವಣೆಗೆ ತಡೆ – ಆದೇಶಕ್ಕೆ ದಿಢೀರ್‌ ತಡೆ ಹಿಡಿದಿದ್ದು ಯಾಕೆ?

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್