ರೀಲ್ಸ್ ರಾಣಿ ಸೋನುಗೆ ಜಾಮೀನು ಸಿಕ್ಕರೂ ಇಂದು ಜೈಲೇ ಗತಿ

Public TV
1 Min Read

ಕಾನೂನುಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ಶ್ರೀನಿವಾಸ್ ಗೌಡಗೆ (Sonu Srinivas Gowda) ಜಾಮೀನು ಮಂಜೂರು ಆಗಿದ್ದರು ಕೂಡ ಇಂದು ಸಹ ಜೈಲೇ ಗತಿ ಆಗಿದೆ. ಇಂದು (ಏ.5) ಸಂಜೆ 7 ಗಂಟೆಯೊಳಗೆ ಜಾಮೀನು ಪ್ರತಿ ತಲುಪಬೇಕಿತ್ತು. ಆದರೆ ಇನ್ನೂ ಸಹ ಜೈಲಧಿಕಾರಿಗಳಿಗೆ ಜಾಮೀನು ಪ್ರತಿ ತಲುಪಿಲ್ಲ. ಹಾಗಾಗಿ ನಾಳೆಯವರೆಗೂ ಸೋನು ಜೈಲಿನಲ್ಲೇ ಇರಲಿದ್ದು, ಪ್ರಕ್ರಿಯೆ ಪೂರ್ಣಗೊಂಡು ನಾಳೆ (ಏ.6) ಸಂಜೆ ವೇಳೆಗೆ ರಿಲೀಸ್ ಸಾಧ್ಯತೆ ಇದೆ. ಇದನ್ನೂ ಓದಿ:ಟಿಲ್ಲು ಸ್ಕ್ವೇರ್ ಸಕ್ಸಸ್ ನಂತರ ದುಬಾರಿ ನಟಿಯಾದ ಅನುಪಮಾ ಪರಮೇಶ್ವರನ್

ಬಿಗ್ ಬಾಸ್ ಸ್ಪರ್ಧಿ (Bigg Boss Kannada Ott) ಸೋನುಗೆ ನಿನ್ನೆ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಈ ಕುರಿತಾಗಿ ಆದೇಶ ಸಹ ಹೊರಡಿಸಲಾಗಿತ್ತು. ಜೈಲಿನಿಂದ ಇಂದು ಬಿಡುಗಡೆ ಸಾಧ್ಯತೆ ಎಂದು ಹೇಳಲಾಗಿತ್ತು. ಆದರೆ ಜಾಮೀನಿನ ಷರತ್ತುಗಳು ಪೂರೈಕೆಯಾಗದ ಹಿನ್ನೆಲೆ ಇಂದು ಕೂಡ ಜೈಲಿನಲ್ಲಿಯೇ ಉಳಿದುಕೊಳ್ಳುವಂತಾಗಿದೆ.

ಸೋನು ಶ್ರೀನಿವಾಸ್ ಗೌಡಗೆ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ (ಏ.4) ಜಾಮೀನು ಮಂಜೂರಾಗಿತ್ತು. ಪಿಡಿಜೆ ಕೋರ್ಟ್‌ನಿಂದ ಇಬ್ಬರು ಶ್ಯೂರಿಟಿ ಹಾಗೂ ಒಂದು ಲಕ್ಷ ರೂಪಾಯಿ ಬಾಂಡ್ ನೀಡಲು ಸೂಚಿಸಿ, ಷರತ್ತು ಬದ್ಧ ಜಾಮೀನು ನೀಡಿತ್ತು.

Share This Article