ಬಿಗ್ ಬಾಸ್ ಮನೆಯಿಂದ ಹುಡುಗರನ್ನು ಹೊರಗೆ ಹಾಕಬೇಕು: ಸೋನು ಶ್ರೀನಿವಾಸ್ ಗೌಡ

Public TV
1 Min Read

ಬಿಗ್ ಬಾಸ್ ಮನೆಯಲ್ಲಿ ಒಂದಲ್ಲಾ ಒಂದು ಬಿಗ್ ಟ್ವಿಸ್ಟ್ ಎದುರಾಗುತ್ತಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ರಂಗು ಜೋರಾಗಿದೆ. ಸ್ಪರ್ಧಿಗಳ ಜಟಾಪಟಿ ಕೂಡ ಜೋರಾಗಿದೆ. ಎರಡು ವಾರಗಳ ನಾಮಿನೇಷನ್ ಮತ್ತು ಎಲಿಮಿನೇಷನ್ ಬಗ್ಗೆ ಇದೀಗ ಸೋನು ಗೌಡ ಮಾತನಾಡಿದ್ದಾರೆ. ನಾವು ಈ ಮನೆಯಿಂದ ಹುಡುಗರನ್ನು ಹೊರಗೆ ಹಾಕಬೇಕು ಎಂದು ಸೋನು ಖಡಕ್ ಆಗಿ ಮಾತನಾಡಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಮನೆಯ ಸೆಂಟರ್ ಆಫ್ ಅಟ್ರಾಕ್ಷನ್ ಅಂದ್ರೆ ತಪ್ಪಾಗಬಾರದು. ಸಾಕಷ್ಟು ವಿಚಾರವಾಗಿ ನೋಡುಗರ ಗಮನ ಸೆಳೆಯುತ್ತಿರುವ ಸ್ಪರ್ಧಿಯಾಗಿದ್ದಾರೆ. ಸದ್ಯ ವಾರದ ಪಂಚಾಯಿತಿಯಲ್ಲಿ ಸೋನು ಮಾತನಾಡಿರುವ ಮಾತು ಸಖತ್ ಮಾಡುತ್ತಿದೆ. ದೊಡ್ಮನೆಯಲ್ಲಿ ಹೆಚ್ಚು ಚೆನ್ನಾಗಿ ಟಾಸ್ಕ್ ಮಾಡುತ್ತಿರುವುದು ಹುಡುಗಿಯರು. ಆದರೆ ಹೆಚ್ಚು ನಾಮಿನೇಟ್ ಆಗುತ್ತಿರುವುದು ಕೂಡ ಹುಡುಗಿಯರು. ಅಲ್ಲದೇ ಈವರೆಗೆ ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆದ ಇಬ್ಬರು ಕೂಡ ಹುಡುಗಿಯರು. ಈ ವಿಚಾರವನ್ನು ಮನೆಯೊಳಗೆ ಪ್ರಸ್ತಾಪಿಸಿರುವ ಸೋನು ಗೌಡ ಅವರು, ಮುಂದಿನ ಬಾರಿ ಹುಡುಗರನ್ನು ಮನೆಯಿಂದ ಹೊರಹಾಕಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ನಾಲ್ಕು ಗೋಡೆ ಮ‌ಧ್ಯೆ ಜಗಳವಾಡಿರೋದು, ಬೀದಿಗೆ ತರಬಾರದು: ಅನಿರುದ್ಧ್

ಸದ್ಯ ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಸ್ಪೂರ್ತಿ ಗೌಡ, ಕಿರಣ್ ಯೋಗೇಶ್ವರ್, ಅರ್ಜುನ್ ರಮೇಶ್, ಈಗಾಗಲೇ ಹೊರ ನಡೆದಿದ್ದಾರೆ. ಈಗ 12 ಜನರ ನಡುವೆ ಸಖತ್ ಪೈಪೋಟಿ ನಡೆಯುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಯಾರು ಮನೆಯಿಂದ ಹೊರಬರಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *