ಸೋನು ಶ್ರೀನಿವಾಸ್ ಗೌಡ ಅರೆಸ್ಟ್: ನನ್ನಿಂದ ತಪ್ಪಾಗಿಲ್ಲ ಎಂದ ರೀಲ್ಸ್ ರಾಣಿ

Public TV
1 Min Read

ಕ್ರಮವಾಗಿ ಮಗುವನ್ನು ಮನೆಯಲ್ಲಿಟ್ಟುಕೊಂಡಿರುವ ಆರೋಪದ ಮೇಲೆ ಬಂಧನವಾಗಿರುವ (Arrest) ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಪೊಲೀಸ್ ಠಾಣೆಯಲ್ಲಿ ಗೋಳಾಡುತ್ತಿದ್ದಾರೆ. ಮಗುವನ್ನು ಕರೆದುಕೊಂಡು ಬಂದಿರುವ ವಿಷಯದಲ್ಲಿ ನನ್ನಿಂದ ಯಾವುದೇ ತಪ್ಪು ಆಗಿಲ್ಲವೆಂದು ಹೇಳಿಕೊಂಡಿದ್ದಾರೆ.

ಮಗುವನ್ನು ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡಿರುವ ವಿಚಾರವಾಗಿ ನಿನ್ನೆ ರಾತ್ರಿ ದೂರು ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಪೊಲೀಸರು ಇಂದು ಬಂಧನ ಮಾಡಿದ್ದಾರೆ. ಪೊಲೀಸರು ಹಾಗೂ CWC ಅಧಿಕಾರಿಗಳಿಂದ ಸೋನು ವಿಚಾರಣೆ ನಡೆಯುತ್ತಿದ್ದು, ಮಗುವನ್ನು ದತ್ತು ಪಡೆದಿರುವುದರ ಬಗ್ಗೆ ಮಾಹಿತಿ ಕೇಳಿದ್ದಾರೆ.

ನಾನು ಮಗು ಕರೆದುಕೊಂಡು ಬಂದು  15 ದಿನ ಆಗಿದೆ. ಹಾಗೆ ಕರೆದುಕೊಂಡು ಬಂದಿರುವುದು ತಪ್ಪಾಗಿರುತ್ತೆ ಅಂತ ನನಗೆ ಗೊತ್ತಿಲ್ಲ. ಗೊತ್ತಿದ್ದರೆ, ನಾನು ಪ್ರೊಸಿಜರ್ ಮೂಲಕವೇ ದತ್ತು ಮಾಡಿಸಿಕೊಳ್ಳುತ್ತಿದ್ದೆ. ನಾನು ತಪ್ಪು ಮಾಡದಿದ್ರೂ ನನ್ನನ್ನ ಕರೆದುಕೊಂಡು ಬಂದಿದ್ದಾರೆ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಸೋನು ಗೌಡ ಮಾಡಿರುವ ತಪ್ಪಿನ ಅರಿವನ್ನು ಅಧಿಕಾರಿಗಳು ಮಾಡಿಸುತ್ತಿದ್ದು, ನಿಮಗೆ ಮಾಹಿತಿ ಕೊರತೆ ಇದೆ. ಪೊಲೀಸರು ತಪ್ಪು ಮಾಡದವರನ್ನ ಕರೆದುಕೊಂಡು ಬರೋದಿಲ್ಲ ಎಂದ ಅಧಿಕಾರಿಗಳು ತಿಳುವಳಿಕೆ ಹೇಳುತ್ತಿದ್ದಾರೆ. ಸದ್ಯ ಸೋನು ವಿಚಾರಣೆ ನಡೆಯುತ್ತಿದ್ದು, ಮುಂದೆ ಇದನ್ನು ಯಾವ ಹಂತಕ್ಕೆ ಅಧಿಕಾರಿಗಳು ತೆಗೆದುಕೊಂಡು ಹೋಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Share This Article