Bigg Boss-ಕಿಚ್ಚ ಸುದೀಪ್ ಅವರನ್ನು ಕ್ಷಮೆ ಕೇಳಿದ ಸೋನು ಶ್ರೀನಿವಾಸ್ ಗೌಡ

Public TV
1 Min Read

ನಿವಾರ ಮತ್ತು ಭಾನುವಾರದ ಕಿಚ್ಚನ ವಾರದ ಪಂಚಾಯತಿ ಬಿಗ್ ಬಾಸ್ ಮನೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಸಾಕ್ಷಿ ಆಯಿತು. ವಾರದಿಂದ ದೊಡ್ಮನೆಯಲ್ಲಿ ಏನೆಲ್ಲ ನಡೆಯಿತು ಎನ್ನುವ ಸಂಕ್ಷಿಪ್ತ ವಿವರಣೆ ಜೊತೆಗೆ ತಮ್ಮದೇ ಆದ ಕೆಲ ಅನುಭವಗಳನ್ನು ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯಲ್ಲಿ ಇದ್ದವರ ಜೊತೆ ಹಂಚಿಕೊಂಡರು. ಅದರಲ್ಲೂ ಶನಿವಾರ ಒಬ್ಬರನ್ನು ಮನೆಯಿಂದ ಆಚೆ ಕಳುಹಿಸಿದ ಸುದೀಪ್, ಭಾನುವಾರ ಎಂದಿನಂತೆ ತಮ್ಮದೇ ಶೈಲಿಯಲ್ಲಿ ಸ್ಪರ್ಧಿಗಳನ್ನು ಕಿಚಾಯಿಸಿದರು.

ಬಿಗ್ ಬಾಸ್ ಮನೆಯ ಭಾಗವೇ ಆಗಿರುವ ಎಸ್ ಆರ್ ನೋ ಆಟವನ್ನು ಸ್ಪರ್ಧಿಗಳೊಂದಿಗೆ ಆಡಿದ ಸುದೀಪ್, ಮೊದ ಮೊದಲು ತಮಾಷೆಯಾಗಿಯೇ ಎಲ್ಲವನ್ನೂ ತಗೆದುಕೊಂಡರು. ಒಳಗಿದ್ದವರಿಗೆ ಪ್ರಶ್ನೆಗಳನ್ನು ಕೇಳಿದರು. ಕಾಲೆಳೆಯುತ್ತಾ ಸಲಹೆಗಳನ್ನೂ ನೀಡಿದರು. ಅದರಲ್ಲೂ ಮಾತಾಡುತ್ತಾ ವಿಷಯದ ಹಾದಿ ತಪ್ಪಿಸುವವರು ಯಾರು? ಎಂಬ ಪ್ರಶ್ನೆ ಬಂದಾಗ ಬಹುತೇಕರು ಆರ್ಯವರ್ಧನ್ ಗುರೂಜಿಯತ್ತ ಬೆಟ್ಟು ಮಾಡು, ಕಾಲೆಳೆದರು. ನಂತರದಲ್ಲಿ ಸೋನು ಶ್ರೀನಿವಾಸ್ ಗೌಡ ವಿಷಯಕ್ಕೆ ಬಂದಾಗ, ವಿಷಯ ಗಂಭೀರವಾಯಿತು. ಇದನ್ನೂ ಓದಿ:ಹೆಣ್ಣು ಮಗುವಿಗೆ ತಂದೆಯಾದ `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಂದು ಗೌಡ

ಸೋನು ಶ್ರೀನಿವಾಸ್ ಗೌಡ ಅವರನ್ನು ಆರ್ಯವರ್ಧನ್ ಅವರ ಅಸಿಸ್ಟೆಂಟ್ ಆಗಿ ಮಾಡಿಬಿಡಿ ಎಂದು ಸಾನ್ಯ ಐಯರ್ ತಮಾಷೆಯಾಗಿಯೇ ಹೇಳಿದರು. ಅದರಿಂದ ಸೋನು ಗರಂ ಆದರು. ನನಗೆ ಹಾಗೆಲ್ಲ ಹೇಳಿದರೆ ಇಷ್ಟ ಆಗಲ್ಲ ಅಂದರು. ನಂತರ ರೂಪೇಶ್, ಜಸ್ವಂತ್ ಸೇರಿದಂತೆ ಹಲವರು ಸೋನು ಅವರ ಕುರಿತು ಮಾತನಾಡಿದಾಗ ಮತ್ತಷ್ಟು ಗರಂ ಆದರು ಸೋನು. ಆಗ ಸುದೀಪ್ ಮಧ್ಯೆ ಪ್ರವೇಶಿಸಿ, ಸೋನು ಅವರನ್ನು ತರಾಟೆಗೆ ತಗೆದುಕೊಂಡರು.

ಬೇರೆಯವರಿಗೆ ನೀವು ತಮಾಷೆ ಮಾಡಬಹುದು. ನಿಮಗೆ ತಮಾಷೆ ಮಾಡಿದರೆ ಕೋಪ ಯಾಕೆ? ಎಂದೇ ಮಾತು ಶುರು ಮಾಡಿದ ಕಿಚ್ಚ, ನೀವು ಹೀಗೆ ಸಿಟ್ಟು ಮಾಡಿಕೊಳ್ಳುತ್ತೇನೆ ಅನ್ನುವುದಾದರೆ, ಇಲ್ಲಿಗೆ ಈ ಶೋ ಮುಗಿಸಿ ಬಿಡುತ್ತೇನೆ ಎಂದು ಆಟವನ್ನು ನಿಲ್ಲಿಸಿಯೇ ಬಿಟ್ಟರು. ಸೋನು ತಮ್ಮಿಂದಾದ ತಪ್ಪಿಗೆ ಕಿಚ್ಚನಲ್ಲಿ ಕ್ಷಮೆ ಕೇಳಿದರು. ಆದರೂ, ಆಟ ಮುಂದುವರೆಯಲಿಲ್ಲ.

Live Tv

 

Share This Article
Leave a Comment

Leave a Reply

Your email address will not be published. Required fields are marked *