ನನಗೆ ಎರಡು ಬಾರಿ ರಾಜ್ಯಸಭಾ ಸೀಟ್ ಆಫರ್ ಬಂದಿತ್ತು: ಸೋನು ಸೂದ್

Public TV
1 Min Read

ಮುಂಬೈ: ಬಾಲಿವುಡ್ ನಟ ಸೋನು ಸೂದ್‍ರವರು ತಮಗೆ ಎರಡು ಬಾರಿ ರಾಜ್ಯಸಭಾ ಸ್ಥಾನ ನೀಡಲು ರಾಜಕೀಯ ಪಕ್ಷಗಳಿಂದ ಆಫರ್ ಬಂದಿತ್ತು ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಕಳೆದ ವಾರವಷ್ಟೇ ನಟ ಸೋನು ಸೂದ್‍ರವರ ಮುಂಬೈ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಎಲ್ಲಾ ವಿವಾದಗಳಿಂದ ಸದ್ಯ ಮುಕ್ತರಾಗಿರುವ ಅವರು ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ್ದಾರೆ. ಈ ವೇಳೆ ಸದ್ಯಕ್ಕೆ ನಾನು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ. ಭವಿಷ್ಯದಲ್ಲಿ ಅದು ಸಂಭವಿಸಿದರೆ ನಾನು ಸಂಪೂರ್ಣವಾಗಿ ನನ್ನನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ನನಗೆ ಎರಡು ಬಾರಿ ರಾಜ್ಯ ಸಭಾ ಸ್ಥಾನವನ್ನು ನೀಡಲು ಕೆಲವು ಪಕ್ಷಗಳಿಂದ ಆಫರ್ ಬಂದಿದೆ. ಆದರೆ ರಾಜಕೀಯ ಸೇರಿಕೊಂಡೆ ಜನರಿಗೆ ಸಹಾಯ ಮಾಡಬೇಕು ಅಂತಲ್ಲ ಎಂದಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ಸೋನು ಸೂದ್‍ರವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೂಡ ಭೇಟಿ ಮಾಡಿದ್ದರು. ಇದನ್ನೂ ಓದಿ: ಬಗೆದಷ್ಟು ಬಯಲಾಗ್ತಿದೆ ಐವರ ಡೆತ್ ಸೀಕ್ರೆಟ್ – ‘ಹಾಳಾಗ್ ಹೋಗ್ರಿ’ ಅಂದಿದ್ದಕ್ಕೇ ಆತ್ಮಹತ್ಯೆನಾ..? 

ಇದೇ ವೇಳೆ ದಾಖಲೆಗಳನ್ನು ಪ್ರಸ್ತುತಪಡಿಸುವ ಮೂಲಕ ಐಟಿ ಅಧಿಕಾರಿಗಳನ್ನು ಹೇಗೆ ಇಂಪ್ರೆಸ್ ಮಾಡಿದರು ಎಂಬುವುದರ ಬಗ್ಗೆ ವಿವರಿಸಿದ ಸೋನು ಸೂದ್, ಈ ರೀತಿಯ ದಾಖಲೆ, ವಿವರಗಳು, ಕಾಗದ ಪತ್ರಗಳನ್ನು ನೀವು ಎಂದಾದರೂ ನೋಡಿದ್ದೀರಾ ಎಂದು ಅವರನ್ನು ಪ್ರಶ್ನಿಸಿದೆ. ಅವರು ಎಲ್ಲವನ್ನು ನೋಡುತ್ತಿದ್ದಂತೆಯೇ ಸಂತೋಷ ಪಟ್ಟರು. ಜೊತೆಗೆ ಅಧಿಕಾರಿಗಳು ಇದು ಸುಗಮವಾದ 4 ದಿನಗಳ ಕಾಲ ನಡೆದ ಐಟಿ ದಾಳಿ ಅಂತ ಹೇಳಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಧಿಕಾರಿಗಳು ಇರುವುದೇ ನಮ್ಮ ಚಪ್ಪಲಿ ಎತ್ತಿಕೊಳ್ಳಲು: ಉಮಾಭಾರತಿ

Share This Article
Leave a Comment

Leave a Reply

Your email address will not be published. Required fields are marked *