ಸೋನಿಯಾಜೀ ಲೆಕ್ಕದಲ್ಲಿ ವೀಕ್: ಕೇಂದ್ರ ಸಚಿವ ಅನಂತಕುಮಾರ್

Public TV
1 Min Read

ನವದೆಹಲಿ: ಬುಧವಾರ ಸಂಸತ್ ಕಲಾಪದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್, ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಯವರು ಲೆಕ್ಕದಲ್ಲಿ ವೀಕ್ ಇದ್ದಾರೆ ಎಂದು ವ್ಯಂಗ್ಯಭರಿತ ಮಾತುಗಳನ್ನಾಡಿದ್ದಾರೆ.

ಶುಕ್ರವಾರ ಸಂಸತ್‍ನಲ್ಲಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಅವಿಶ್ವಾಸವನ್ನು ಮಂಡಿಸಲು ಮನವಿ ಮಾಡಿಕೊಂಡಿದ್ದಾರೆ. ಸಂಸತ್‍ನಲ್ಲಿ ನಮಗೆ ಬಹುಮತವಿಲ್ಲ ಅಂತಾ ಹೇಳಿದ್ದು ಯಾರು? ಶುಕ್ರವಾರ ಅವಿಶ್ವಾಸ ಗೊತ್ತುವಳಿಯಲ್ಲಿ ನಾವು ಜಯ ಸಾಧಿಸಲಿದ್ದೇವೆ ಎಂದು ಅನಂತಕುಮಾರ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋನಿಯಾ ಜಿಯವರು ಲೆಕ್ಕದಲ್ಲಿ ಬಹಳ ವೀಕ್ ಆಗಿದ್ದಾರೆ. ಅವರು 1996ರ ಲೆಕ್ಕಾಚಾರವನ್ನು ಹಾಕುತ್ತಿರಬಹುದೇನೊ? ಎಂದು ಪ್ರಶ್ನಿಸಿ, ಅಂದಿನ ಲೆಕ್ಕಾಚಾರ ಎನಾಯಿತು ಎಂದು ನಾವು-ನೀವೆಲ್ಲಾ ನೋಡಿದ್ದೇವೆ. ಆದರೆ ಇಂದು ಮೋದಿ ಸರ್ಕಾರಕ್ಕೆ ಸಂಸತ್ತಿನ ಒಳಗೂ ಮತ್ತು ಹೊರಗೂ ಸಹ ಬೆಂಬಲವಿದೆ. ನಮಗೆ ಎಲ್ಲ ಕಡೆಯಿಂದಲೂ ಬೆಂಬಲ ಸಿಗುವುದನ್ನು ನೀವು ನೋಡುತ್ತೀರಿ ಎಂದು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಹೇಳಿಕೆ ಏನು?
ಬುಧವಾರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ, ಕಾಂಗ್ರೆಸ್, ಸಮಾಜವಾದಿ ಪಾರ್ಟಿ(ಎಸ್‍ಪಿ), ತೆಲಗು ದೇಶಂ ಪಾರ್ಟಿ (ಟಿಡಿಪಿ) ಮತ್ತು ನ್ಯಾಷನಲ್ ಕಾನ್ಫರೆನ್ಸ್ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದವು. ಇವರ ಈ ಮಂಡನೆಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ರವರು ಅಂಗೀಕರಿಸಿ, ಶುಕ್ರವಾರ ಇದರ ಮೇಲೆ ಚರ್ಚೆ ನಡೆಸಲು ದಿನಾಂಕವನ್ನು ನಿಗದಿಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿಯವರು ನಮಗೆ ಬಹುಮತ ಇಲ್ಲವೆಂದು ಯಾರು ಹೇಳಿದ್ದು? ಎಂದು ಪ್ರಶ್ನಿಸಿ, ಶುಕ್ರವಾರ ನಾವು ಜಯ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಬಿಜೆಪಿ ನೇತೃತ್ವದ ಎನ್‍ಡಿಯ ಮೈತ್ರಿ ಒಕ್ಕೂಟದಲ್ಲಿ ಒಟ್ಟು 312 ಮಂದಿ ಸದಸ್ಯರನ್ನು ಹೊಂದಿದೆ. ಅಲ್ಲದೇ ಲೋಕಸಭೆಯ 535 ಸದಸ್ಯರ ಪೈಕಿ 274 ಸದಸ್ಯರನ್ನು ಬಿಜೆಪಿಯೇ ಹೊಂದಿದೆ. ಸರ್ಕಾರ ರಚಿಸಲು ಬಿಜೆಪಿಗೆ ಒಟ್ಟು 268 ಸ್ಥಾನಗಳು ಅವಶ್ಯಕವಾಗಿದೆ.

ಶಿವಸೇನೆಯ ಮುಖ್ಯಸ್ಥರಾದ ಉದ್ದವ್ ಠಾಕ್ರೆಯವರು ನಿರ್ಧಾರದ ಮೇಲೆ ಸೇನೆಯ ಸದಸ್ಯರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಶುಕ್ರವಾರ ನಡೆಯುವ ಅಧಿವೇಶನದಲ್ಲಿ ಎಐಡಿಎಂಕೆ ಹಾಗೂ ನವೀನ್ ಪಟ್ನಾಯಕ್ ರ ಬಿಜು ಜನತ ದಳ ಸಂಸತ್‍ನಿಂದ ದೂರ ಉಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *