`ನಾ ವಿಧವೆಯಾಗ್ತೀನಿ, ನಿನ್ನನ್ನೇ ಮದ್ವೆಯಾಗ್ತೀನಿ’ ಅಂದಿದ್ಳಂತೆ ಸೋನಂ ರಘುವಂಶಿ..!

Public TV
4 Min Read

– ಪ್ರಿಯತಮೆಯ ‘ವಿಧವಾ ಪ್ಲ್ಯಾನ್’ಗೆ ಒಪ್ಪಿಗೆ ನೀಡಿದ್ದ ಪ್ರಿಯಕರ ರಾಜ್

ಶಿಲ್ಲಾಂಗ್‌: ಇಂದೋರ್ ಮೂಲದ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಆರೋಪಿ ಪತ್ನಿ ಸೋನಂ ರಘುವಂಶಿಯ (Sonam Raghuvanshi) ಕರಾಳ ಮುಖಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ʻಬಾ ನಲ್ಲ ಮಧುಚಂದ್ರಕೆʼ ಅಂತ ಕರೆದೊಯ್ದು ಗಂಡನಿಗೆ ಚಟ್ಟಿದ ಸೋನಂ ಪ್ರಿಯಕರನಿಗಾಗಿ ವಿಧವೆ ಆಗೋದಕ್ಕೂ ರೆಡಿ ಇದ್ದಳಂತೆ ಅನ್ನೋದು ಪೊಲೀಸರ (Meghalaya Police) ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!

ವಿಧವೆಯಾಗಿ ನಿನ್ನನ್ನೇ ಮದ್ವೆಯಾಗ್ತೀನಿ
ಹೌದು. ಅಸಲಿಗೆ ರಾಜ ರಘುಂವಶಿಯನ್ನ (Raja Raghuvanshi) ಕೊಂದು ಇಡೀ ಪ್ರಕರಣವನ್ನ ದರೋಡೆಯಂತೆ ಬಿಂಬಿಸುವುದು ಪ್ಲ್ಯಾನ್‌ ಆಗಿತ್ತು. ಸೋಮಂ ಕೂಡ ಈ ಬಗ್ಗೆ ಪ್ರಿಯಕರ ರಾಜ್‌ ಕುಶ್ವಾಹಗೆ (Raj Kushwaha) ತಿಳಿಸಿದ್ದಳು. ರಾಜನನ್ನು ಕೊಂದು ಅದನ್ನ ದರೋಡೆಯಂತೆ ಬಿಂಬಿಸೋಣ. ನಾನು ವಿಧವೆಯಾದ್ಮೇಲೆ ನನ್ನ ತಂದೆ ನನ್ನನ್ನ ನಿನಗೇ ಕೊಟ್ಟು ಮದುವೆ ಮಾಡ್ತಾರೆ ಅಂತಲೂ ಹೇಳಿದ್ದಳಂತೆ ವಂಚಕಿ. ಇದಕ್ಕೆ ರಾಜ್‌ ಸಹ ಒಪ್ಪಿಕೊಂಡಿದ್ದನಂತೆ. ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

ಸೋನಂ ಮಾಸ್ಟರ್‌ ಪ್ಲ್ಯಾನ್‌ ಏನಿತ್ತು?
ಹೃದ್ರೋಗಿಯಾಗಿದ್ದ ಸೋನಂ ತಂದೆ ದೇವಿ ಸಿಂಗ್‌, ತನ್ನ ಕಾರ್ಖಾನೆಯಲ್ಲೇ ಕೆಲಸ ಮಾಡ್ತಿದ್ದ ರಾಜ್‌ಗೆ ಕೊಟ್ಟು ಮದ್ವೆ ಮಾಡಲು ಒಪ್ಪಿಕೊಳ್ಳಲ್ಲ ಅನ್ನೋದು ಸೋನಂಗೆ ಗೊತ್ತಿತ್ತು. ಹಾಗಾಗಿಯೇ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಳು. ಮೊದಲು ರಾಜನನ್ನ ಮದುವೆ ಆಗಿಬಿಡೋಣ, ಅವನನ್ನು ಕೊಂದಮೇಲೆ ವಿಧವೆ ಅನ್ನೋ ಮಮಕಾರದಲ್ಲಾದ್ರೂ ರಾಜ್‌ಗೆ ತನ್ನನ್ನು ಕೊಟ್ಟು ಮದುವೆ ಮಾಡುತ್ತಾರೆ ಎಂಬುದು ಅವಳ ಪ್ಲ್ಯಾನ್‌ ಆಗಿತ್ತು ಅನ್ನೋದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

ರಾಜ್‌ ತಾಯಿ ಹೇಳೋದೇನು?
ಸೋನಂ ಪ್ರಿಯಕರ ರಾಜ್‌ ಕುಶ್ವಾಹನ ತಾಯಿ ಮಾತನಾಡಿ, ನನ್ನ ಮಗ ನಿರಪರಾಧಿ, ಮುಗ್ಧ ಅಂತ ಕಣ್ಣೀರಿಟ್ಟಿದ್ದಾರೆ. ಅವನಿಗಿನ್ನೂ 20 ವರ್ಷ, ನನ್ನ ಮಗ ಆ ರೀತಿ ಮಾಡುವುದಿಲ್ಲ. ಒಂದೇ ಕಾರ್ಖಾನೆಯಲ್ಲಿ ಇಬ್ಬರೂ ಕೆಲಸ ಮಾಡ್ತಿದ್ದರಿಂದ ಮಾತನಾಡುತ್ತಿದ್ದರು ಅಷ್ಟೇ. ನಮ್ಮ ಮಗ ಮುಗ್ಧ ಅನ್ನೋದನ್ನ ಸಾಬೀತುಪಡಿಸುಂತೆ ಸರ್ಕಾರಕ್ಕೆ ಮನವಿ ಮಾಡ್ತೇನೆ ಎಂದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಕಾಲ್ತುಳಿತ ಸಂಭವಿಸಿದಾಗ ನಮ್ಮನ್ನ ರಕ್ಷಿಸಿಕೊಳ್ಳೋದು ಹೇಗೆ? – ಈ ಸಣ್ಣ ತಂತ್ರವೂ ಅಮೂಲ್ಯವಾದ ಜೀವ ಉಳಿಸುತ್ತೆ

ಹನಿಮೂನ್‌ನಲ್ಲೇ ಹತ್ಯೆ – ಏನಿದು ದ್ವೇಷ?
ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಟುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.

ಪತ್ನಿಗೆ ಚಟ್ಟಕಟ್ಟಿದ್ದೇಕೆ?
ಸೋನಮ್‌ಗೆ ರಾಜ್ ಕುಶ್ವಾಹ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಆಕೆ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು. ಮೇಘಾಲಯದಲ್ಲಿ ಹನಿಮೂನ್‌ಗೆ ತೆರಳಿದ ವೇಳೆ ಸೊಹ್ರಾ ಪ್ರದೇಶದಲ್ಲಿ ಪತಿಯನ್ನ ಕೊಲೆ ಮಾಡಲು ಆಕೆ ಮಧ್ಯಪ್ರದೇಶ ಮೂಲದ ಬಾಡಿಗೆ ಕೊಲೆಗಾರರನ್ನು ನೇಮಿಸಿದ್ದಳು. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡು ಮಾಡೆಲ್ ಆತ್ಮಹತ್ಯೆ

ಫೋನ್‌ಕಾಲ್‌ನಲ್ಲೇ ಪಿನ್-ಟು-ಪಿನ್ ಅಪ್ಡೇಟ್
ರಾಜಾ ರಘುವಂಶಿಯನ್ನ ಕೊಲೆ ಮಾಡಲು ರಾಜ್ ಖುದ್ದು ಶಿಲ್ಲಾಂಗ್‌ಗೆ ಹೋಗಿರಲಿಲ್ಲ. ಆರೋಪಿಗಳು, ಸೋನಮ್ ಮತ್ತು ರಾಜ್ ಪರಸ್ಪರ ಫೋನ್‌ನಲ್ಲೇ ಸಂಪರ್ಕದಲ್ಲಿದ್ದರು. ಸೋನಮ್ ಬಳಿ ಎಲ್ಲೆಲ್ಲಿಗೆ ಹೋಗ್ತಿದ್ದಾರೆ ಅನ್ನೋ ಅಪ್ಡೇಟ್ ಪಡೆದುಕೊಂಡು ನೇಮಿಸಿದ್ದ ಕಾಂಟ್ರ‍್ಯಾಕ್ಟ್ ಕಿಲ್ಲರ್‌ಗಳಿಗೆ ಫೋನ್ ಮೂಲಕವೇ ಮುಂದೇನು ಮಾಡಬೇಕು ಅನ್ನೋದ್ರ ಬಗ್ಗೆ ಸೂಚನೆ ಕೊಡ್ತಿದ್ದ. ಸೋನಮ್ ಶಿಲ್ಲಾಂಗ್‌ನಲ್ಲಿ ಕಿಲ್ಲರ್‌ಗಳನ್ನ ಭೇಟಿಯಾದ ಬಳಿಕ ಗೈಡ್‌ಗಳ ನೆಪದಲ್ಲಿ ಚಿರಾಪುಂಜಿ ತಲುಪಿದ್ರು. ಈ ವೇಳೆ ಸೋನಮ್ ನಿರ್ಜನ ಪ್ರದೇಶಕ್ಕೆ ಕರೆದೊಯ್ದಾಗ ಅಲ್ಲಿಯೇ ಹಂತಕರು ರಘುವಂಶಿಯನ್ನ ಹತ್ಯೆಗೈದಿದ್ದಾರೆ.

Share This Article